Karnataka Times
Trending Stories, Viral News, Gossips & Everything in Kannada

ತಾವು ಕೆಲಸ ಮಾಡುತ್ತಿದ್ದ ಜಯನಗರದ ಡಿಪೋಗೆ ಭೇಟಿ ನೀಡಿದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್, ಫೋಟೋಸ್ ವೈರಲ್!!

ತಮಿಳು ಚಿತ್ರರಂಗದ ಹಿರಿಯ ಹಾಗೂ ಪ್ರತಿಭಾವಂತ ನಟ ಸೂಪರ್ ಸ್ಟಾರ್ ರಜನಿಕಾಂತ್ (Super Star Rajanikanth). ಕರ್ನಾಟಕದಲ್ಲೇ ಹುಟ್ಟಿ ಬೆಳೆದು ತಮಿಳು ಚಿತ್ರರಂಗದಲ್ಲಿ ಸೂಪರ್‌ಸ್ಟಾರ್‌ ಆಗಿ ಬೆಳೆದ ಹಿರಿಯ ನಟ ರಜನಿಕಾಂತ್ ಅವರು ಕನ್ನಡಿಗರ ಮೇಲೆ ವಿಶೇಷ ಪ್ರೀತಿಯಿದೆ. ಅದಲ್ಲದೇ ಕರುನಾಡನ್ನು ಇಷ್ಟ ಪಡುವ ನಟ ರಜನಿಕಾಂತ್ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಟ ರಜನಿಕಾಂತ್ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಬಸ್ ನಿರ್ವಾಹಕ (ಕಂಡಕ್ಟರ್) ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು.

ಆ ಬಳಿಕ ನಾಟಕದ ಬಗೆಗೆ ಆಸಕ್ತಿ ಹೊಂದಿದ್ದ ರಜನಿಕಾಂತ್ ಅವರು ಅದರಲ್ಲಿ ತೊಡಗಿಸಿಕೊಂಡರು. ಆದರೆ ಅವಕಾಶಗಳನ್ನು ಗಿಟ್ಟಿಸಿಕೊಂಡ ನಟ ರಜನಿಕಾಂತ್ ಅವರಿಗೆ ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಆದರೆ ಇದೀಗ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಜೈಲರ್’ (Jailer) ಸಿನಿಮಾದ ಯಶಸ್ಸಿನ ನಡುವೆಯೇ ಬೆಂಗಳೂರಿಗೆ (Bengaluru) ತಲೈವಾ ಭೇಟಿ ನೀಡಿದ್ದಾರೆ.

Advertisement

ಚಿತ್ರರಂಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸಿದ್ದ ಜಯನಗರದ ಡಿಪೋ (Jayanagara Dippo)ಗೆ ತಲೈವಾ ಸರ್ಪ್ರೈಸ್ ಭೇಟಿ ನೀಡಿದ್ದು, ಅಲ್ಲಿರುವ ಕಂಡೆಕ್ಟರ್- ಡ್ರೈವರ್ ಜೊತೆ ತಲೈವಾ ಮಾತುಕತೆ ನಡೆಸಿದ್ದು, ಅವರ ಜೊತೆಗೆ ಸಮಯವನ್ನು ಕಳೆದಿದ್ದಾರೆ. ಅದಲ್ಲದೇ ಡಿಪೋದಲ್ಲಿನ ಮೆಕ್ಯಾನಿಕ್, ಡ್ರೈವರ್, ಕಂಡಕ್ಟರ್‌ ಹಾಗೂ ಸಿಬ್ಬಂದಿಯೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಏಕಾಏಕಿಯಾಗಿ ಭೇಟಿ ನೀಡಿದ ಸೂಪರ್ ಸ್ಟಾರ್ ಅವರನ್ನು ಕಂಡು ಸಿಬ್ಬಂದಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ.

Advertisement

Advertisement

ಅಷ್ಟೇ ಅಲ್ಲದೇ ಬೆಂಗಳೂರಿನ ಸುತ್ತ ಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಹೌದು, ರಜನಿ, ರಾಘವೇಂದ್ರಸ್ವಾಮಿ ದೇವಸ್ಥಾನ (Raghavendra Swami Temple) ಹಾಗೂ ಗಾಂಧಿಬಜಾರ್‌ (Gandhi Bajar) ನಲ್ಲಿರುವ ತಾವು ಓದಿದ ಶಾಲೆಗೆ ಭೇಟಿ ನೀಡಿದ್ದು ಮತ್ತೊಮ್ಮೆ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. ಅಂದಹಾಗೆ, ಚಾಮರಾಜಪೇಟೆ ರಾಯರ ಮಠ (Chamarajapete Rayaramata) ಕ್ಕೆ ಭೇಟಿ ಕೊಟ್ಟಿದ್ದ ರಜನಿಕಾಂತ್ ಅವರು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ ರಾಘವೇಂದ್ರ ಸ್ವಾಮಿ ಆಶೀರ್ವಾದ ಪಡೆದಿದ್ದಾರೆ.

ಅಚ್ಚರಿಯೆಂದರೆ ರಜನಿಕಾಂತ್ ಕಂಡಕ್ಟರ್ ಆಗೋದಕ್ಕೂ ಮುಂಚೆಯಿಂದಲೂ ಇಲ್ಲಿಗೆ ಬರುತ್ತಿದ್ದರಂತೆ. ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವಾಗಲೂ ರಜನಿಕಾಂತ್ ಈ ರಾಯರ ಮಠಕ್ಕೆ ಭೇಟಿ ಕೊಟ್ಟಿದ್ದರಂತೆ..ಆದರೆ ತಾನೊಬ್ಬ ಸೆಲೆಬ್ರೆಟಿ ಎನ್ನುವುದನ್ನು ಮರೆತು ಸಾಮಾನ್ಯ ಜನರೊಂದಿಗೆ ಬೆರೆತದ್ದು ನಟನ ಸರಳತೆಗೆ ಸಾಕ್ಷಿಯಾಗಿದೆ.

Leave A Reply

Your email address will not be published.