Karnataka Times
Trending Stories, Viral News, Gossips & Everything in Kannada

ದೊಡ್ಡ ಗೌಡರ ಸುಂದರವಾದ ಕುಟುಂಬ, ಹಬ್ಬವನ್ನು ಆಚರಿಸಿ ಸುಂದರವಾದ ಫೋಟೋಸ್ ಗಳನ್ನು ಹಂಚಿಕೊಂಡ ನಿಖಿಲ್, ಸುಂದರ ಕ್ಷಣಗಳು ನಿಮಗಾಗಿ ನೋಡಿ!!

ನಟ ಕಮ್ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ (Nikhil Kumaraswami) ಯವರು ಎಲ್ಲರಿಗೂ ಕೂಡ ಚಿರಪರಿಚಿತ. ಬಣ್ಣದ ಲೋಕ ಹಾಗೂ ರಾಜಕಾರಣಿದಲ್ಲಿ ಗುರುತಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿಯವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುವ ನಿಖಿಲ್ ಪ್ರತಿಯೊಂದು ಹಬ್ಬ (Festival) ವನ್ನು ತಮ್ಮ ಮುದ್ದಾದ ಕುಟುಂಬದ ಜೊತೆಗೆ ಆಚರಿಸುತ್ತಾರೆ. ಆದರೆ ಇದೀಗ ಫ್ಯಾಮಿಲಿ ಜೊತೆಗಿನ ಅಪರೂಪದ ಫೋಟೋಗಳು ವೈರಲ್ ಆಗಿವೆ.

ನಿಖಿಲ್ ಕುಮಾರಸ್ವಾಮಿಯವರು ಮನೆಯಲ್ಲಿನ ವರಮಹಾಲಕ್ಷ್ಮಿ ಹಬ್ಬದ ವೇಳೆ ತೆಗೆದ ಫೋಟೋ ಇದಾಗಿದೆ. ನಟ ನಿಖಿಲ್ ಕುಮಾರಸ್ವಾಮಿಯವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ (Varamahalakshmi Festival) ವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು. ಹಬ್ಬವನ್ನು ನಟ ನಿಖಿಲ್ ಕುಮಾರ್ ಸ್ವಾಮಿಯವರು ಪತ್ನಿ ರೇವತಿ (Revathi), ಮಗ ಅವ್ಯಾನ್ ದೇವ್ (Avyan Dev), ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ (HD Kumaraswami), ಅನಿತಾ ಕುಮಾರಸ್ವಾಮಿ (Anitha Kumaraswami) ಜೊತೆಯಲ್ಲಿ ಆಚರಿಸಿದ್ದರು.

Advertisement

ಮನೆಯಲ್ಲಿ ಲಕ್ಷ್ಮಿಯ ವಿಗ್ರಹವನ್ನು ಇಟ್ಟು ಪೂಜೆ ಮಾಡಿದ್ದು, ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗಿತ್ತು. ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬದವರು ಸಂಪ್ರದಾಯಿಕ ಉಡುಗೆಯಲ್ಲಿ ಮಿಂಚಿರುವುದು ಫೋಟೋಗಳು ವೈರಲ್ ಆಗಿವೆ. ವರಮಹಾಲಕ್ಷ್ಮಿ ಹಬ್ಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿಯವರು, ನಾಡಿನ ಜನರಿಗಾಗಿ ಪ್ರಾರ್ಥನೆ ಮಾಡಿದ್ದರು.

Advertisement

Advertisement

ಹಬ್ಬದ ಸಂಭ್ರಮದ ಫೋಟೋ ಶೇರ್ ಮಾಡಿಕೊಂಡು, ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.. ಮಹಾಲಕ್ಷ್ಮಿ ಎಲ್ಲರಿಗೂ ಸಕಲ ಐಶ್ವರ್ಯ ಸಂಪತ್ತನ್ನು ನೀಡಿ ಆಶೀರ್ವದಿಸಲೆಂದು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದರು. ನಟನ ಈ ಪೋಸ್ಟ್ ಗೆ ಅಭಿಮಾನಿಗಳು ಶುಭಾಶಯಗಳನ್ನು ಕೋರುವ ಮೂಲಕ ಪ್ರತಿಕ್ರಿಯೆ ನೀಡಿದ್ದರು.

 

ಈ ಹಿಂದೆ ಭಾರತೀಯ ಹೊಸ ವರ್ಷವಾಗಿರುವ ಯುಗಾದಿ ಹಬ್ಬ (Yugadi Festival) ವನ್ನು ತನ್ನ ಕುಟುಂಬದ ಜೊತೆಗೆ ಆಚರಿಸಿದ್ದು, ಫ್ಯಾಮಿಲಿ ಜೊತೆಗಿನ ಫೋಟೋವನ್ನು ಹಂಚಿಕೊಂಡು, ಯುಗಾದಿ ಹಬ್ಬದ ಶುಭಾಶಯಗಳು ಎಂದು ಶುಭಾಶಯ ಕೋರಿದ್ದರು. ಈ ಪೋಸ್ಟ್ ಗೆ ಒಂದೂವರೆ ಲಕ್ಷದಷ್ಟು ಲೈಕ್ಸ್ ಬಂದಿತ್ತು. ಸದ್ಯಕ್ಕೆ ನಟ ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದು, ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

Leave A Reply

Your email address will not be published.