ತಮ್ಮ ಪ್ರಬಲ ರಾಜಕೀಯ ಆಡಳಿತದಿಂದಾಗಿ ಇಂದು ಕನಕಪುರದ ಬಂಡೆ ಎಂದೇ ಕರೆಸಿಕೊಳ್ಳುವಂತಹ ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಬೆಂಗಳೂರು ಅಭಿವೃದ್ದಿ ಉಸ್ತುವಾರಿ ಸಚಿವ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು 1993ರಲ್ಲಿ ಉಷಾ ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿಕೆ ಶಿವಕುಮಾರ್ ಅವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದು, ಜೊತೆಗೆ ಆಕಾಶ್ ಎಂಬ ಗಂಡು ಮಗನಿದ್ದಾನೆ.
ಹಿರಿಯ ಮಗಳು ಐಶ್ವರ್ಯರನ್ನು ಕಾಫಿ ಡೇ ಸಂಸ್ಥಾಪಕರಾಗಿದ್ದ ವಿಜಿ ಸಿದ್ದಾರ್ಥ್ ಅವರ ಮಗ ಅಮರ್ತ್ಯ ಅವರಿಗೆ ನೀಡಿ ಕಳೆದ ಕೆಲವು ವರ್ಷಗಳ ಹಿಂದೆ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟರು. ಐಶ್ವರ್ಯ ತಂದೆಯಂತೆ ರಾಜಕೀಯ ರಂಗಕ್ಕೆ ಬರದೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಪ್ರಬಲ ಮಾತುಗಾರಿಕೆಯ ಮೂಲಕ ಜನರನ್ನು ತಮ್ಮತ್ತ ಆಕರ್ಷಿಸಿಕೊಳ್ಳುತ್ತಿರುತ್ತಾರೆ. ಹೌದು ಗೆಳೆಯರೇ ತಮ್ಮ ತಂದೆಯ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತಿರುವಂತಹ.
Advertisement
ಐಶ್ವರ್ಯ ಡಿಕೆ ಶಿವಕುಮಾರ್ ಅವರು ಆಗಾಗ ವಿದ್ಯಾಭ್ಯಾಸಕ್ಕೆ ಬೇಕಿರುವಂತಹ ಹೊಸ ತಂತ್ರ ಪ್ರತಿ ತಂತ್ರಗಳನ್ನೆಲ್ಲ ಅಳವಡಿಸುತ್ತಾ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ನೋಡಿಕೊಳ್ಳುತ್ತಿರುತ್ತಾರೆ. ಇದಲ್ಲದೆ ಪ್ರೇರಕ ಭಾಷಣಕಾರರಾಗಿಯೂ ಗುರುತಿಸಿಕೊಂಡಿರುವಂತಹ ಐಶ್ವರ್ಯ ಆಗಾಗ ತಮ್ಮ ವಿಶ್ವಾಸ ತುಂಬಿದ ಮಾತುಗಳಿಂದ ಇತರರಿಗೆ ಸ್ಪೂರ್ತಿ ತುಂಬುತ್ತಾ ಯುವಕರನ್ನು ಉರಿದುಂಬಿಸುತ್ತಿರುತ್ತಾರೆ.
Advertisement
Advertisement
ಹೀಗೆ ಡಿಕೆ ಶಿವಕುಮಾರ್ ಅವರ ಪ್ರಬಲ ಆಡಳಿತ ತಂತ್ರಗಾರಿಕೆಗೆ ಅದೆಷ್ಟೋ ಜನ ಮನಸ್ಸು ಹೋಗಿರುವಾಗ ಐಶ್ವರ್ಯ ಅವರ ಉತ್ಸಾಹದ ನಡೆಗೂ ಅಷ್ಟೇ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯ ಡಿಕೆ ಶಿವಕುಮಾರ್ ಅವರ ಫ್ಯಾನ್ ಪೇಜ್ ಗಳು ಸಾಕಷ್ಟು ಇದ್ದು ಐಶ್ವರ್ಯ ಅವರ ಪ್ರತಿ ನಡೆಯನ್ನು ಅಲ್ಲಿ ಹಂಚಿಕೊಳ್ಳುತ್ತಾ ಹೆಮ್ಮೆಪಡುತ್ತಿರುತ್ತಾರೆ.
ಹೀಗಿರುವಾಗ ತಮ್ಮ ತಾಯಿಯೊಂದಿಗೆ ಸೇರಿ ಮನೆಯಲ್ಲಿ ಅದ್ದೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮಿಸಿರುವ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಐಶ್ವರ್ಯ ಸಕಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಕೋರಿದ್ದಾರೆ. ಕಿತ್ತಳೆ ಬಣ್ಣದ ಸೀರೆಯನ್ನು ಹುಟ್ಟು ಫ್ರೀ ಹೇರ್ ಬಿಟ್ಟು, ಕೊರಳಿಗೆ ಸರ, ಕಿವಿಗಳಿಗೆ ಓಲೆ, ಕೈ ಬಳೆ ಉಂಗುರ ಎಲ್ಲವನ್ನು ಧರಿಸಿ ಮಹಾಲಕ್ಷ್ಮಿಯಂತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.