ಸ್ನೇಹಿತರೆ, ಈ ವರ್ಷದ ವರಮಹಾಲಕ್ಷ್ಮಿ ಹಬ್ಬವನ್ನು ನಮ್ಮ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಒಬ್ಬರಿಗಿಂತ ಒಬ್ಬರು ವಿಭಿನ್ನವಾಗಿ ವೈಭವೋಪೂರಿತವಾಗಿ ಆಚರಿಸಿ ಆ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ತಮ್ಮ ಅಭಿಮಾನಿಗಳಿಗೂ ಹಾಗೂ ಸಮಸ್ತ ಕನ್ನಡಿಗರಿಗೂ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಹೀಗಿರುವಾಗ ಸ್ಯಾಂಡಲ್ವುಡ್ ಪ್ರಿನ್ಸೆಸ್ ನಟಿ ರಾಧಿಕಾ ಪಂಡಿತ್(Radhika Pandit) ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ.
ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡು ತಮ್ಮ ಮನೆಯಲ್ಲಿ ಆಚರಣೆ ಮಾಡಲಾದಂತಹ ವರಮಹಾಲಕ್ಷ್ಮಿ ಹಬ್ಬದ ಕೆಲ ಚಿತ್ರಣಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ನೆಟ್ಟಿಗರ ಕಣ್ಣು ಕುಕ್ಕುವಂತಿದ್ದು, ಸ್ಯಾಂಡಲ್ವುಡ್ನ ಯಾವ ಸ್ಟಾರ್ ಸೆಲೆಬ್ರಿಟಿಗಳ ಮನೆಯಲ್ಲಿಯೂ ಇಷ್ಟು ಅದ್ದೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿರಲಿಕ್ಕಿಲ್ಲ.
Advertisement
Advertisement
ಎನ್ನುವಷ್ಟರಮಟ್ಟಿಗೆ ದೇವಿಯನ್ನು ಬಹಳನೇ ಗ್ರಾಂಡ್ ಆಗಿ ಪ್ರತಿಷ್ಠಾಪಿಸಿ ಹೂಗಳಿಂದ ಅಲಂಕಾರ ಮಾಡಿ ಮನೆಯ ತುಂಬೆಲ್ಲ ಮಲ್ಲಿಗೆ ಹೂವಿನಿಂದ ಸಿಂಗಾರ ಗೊಳಿಸಿ ದೇವಿಗೆ ರೇಷ್ಮೆ ಸೀರೆ ಒಡವೆಗಳು ಹಾಗೂ ಬೆಳ್ಳಿ ಇಂದ ಮಾಡಲಾದಂತಹ ಮುಖವಾಡ ದೀಪ ಕಳಶ ಎಲ್ಲವೂ ಕಂಗೊಳಿಸುವಂತೆ ಡೆಕೋರೇಷನ್ ಮಾಡಿ ದೇವರ ಮುಂದೆ ನಿಂತು ರಾಧಿಕಾ ಪಂಡಿತ್(Radhika Pandit), ಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಇಬ್ಬರು ಮುದ್ದಾದ ಮಕ್ಕಳಾದ ಯಥರ್ವ-ಐರಾ ದೇವಿಯ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
Advertisement
ಹೌದು ಗೆಳೆಯರೇ ನಟಿ ರಾಧಿಕಾ ಪಂಡಿತ್ ಅವರು ಹಳದಿ ಬಣ್ಣದ ಸೀರೆಯನ್ನು ಉಟ್ಟುಕೊಂಡು ಮೈತುಂಬ ಆಭರಣಗಳನ್ನೆಲ್ಲ ಧರಿಸಿ ಕಂಗೊಳಿಸಿದರೆ ರಾಕಿಂಗ್ ಸ್ಟಾರ್ ಯಶ್ ಪಂಚೆ ಹಾಗೂ ಶಲ್ಯದಲ್ಲಿ ಕಾಣಿಸಿಕೊಂಡಿದ್ದರು. ಮಗ ಯಥರ್ವ(Yatharva) ತಮ್ಮ ತಂದೆಯನ್ನು ಅನುಸರಿಸುತ್ತಾ ಪಂಚೆ ಉಟ್ಟಿದರೆ ಮಗಳು ಐರಾ(Ayra) ಸಿಂಪಲ್ಲಾಗಿ ಅನಾರ್ಕಲಿ ಬಟ್ಟೆಯನ್ನು ಧರಿಸಿ ಕೈಮುಗಿದು ದೇವರಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಈ ಕೆಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಾ ಇದ್ದಹಾಗೆ ನೆಟ್ಟಿಗರು ಇವರ ಸಕುಟುಂಬವನ್ನು ಕಂಡು ಸಂತಸ ಪಡುವುದರ ಜೊತೆಗೆ ಕಮೆಂಟ್ಗಳ ಸುರಿಮಳೆಯನ್ನೇ ಹರಿಸುತ್ತಾ ನೂರು ಕಾಲ ಹೀಗೆ ನಗುನಗುತ ಸುಖವಾಗಿ ಬಾಳಿ ಎಂದು ಹಾರೈಸುತ್ತಿದ್ದಾರೆ.