ಕನ್ನಡ ಸಿನಿಮಾ ರಂಗದ ರೆಬೆಲ್ ಕುಟುಂಬ ಎಂದ ಪ್ರಖ್ಯಾತಿ ಪಡೆದಿದ್ದಂತಹ ರೆಬಲ್ ಸ್ಟಾರ್ ಅಂಬರೀಶ್ (Ambareesh) ಮನೆಯವರು ಏನ ಏ ಮಾಡಿದರೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಮನೆಯಲ್ಲಿ ಸರಳವಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿರುವ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ನವ ದಂಪತಿಗಳು ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಕೋರಿದ್ದಾರೆ.
ಹೌದು ಗೆಳೆಯರೇ ಅಭಿಷೇಕ್ ಅಂಬರೀಷ್(Abhishek Ambareesh) ಮತ್ತು ಅವಿವಾ ಬಿಡ್ಡಪ್ಪ ಮದುವೆಯಾದ ನಂತರ ಆಚರಿಸಲಾಗುತ್ತಿರುವ ಮೊದಲ ಹಬ್ಬ ಇದಾಗಿದ್ದು, ಹೀಗಾಗಿ ಬಹಳ ಟ್ರೆಡಿಷನಲ್ ಉಡುಗೆಯಲ್ಲಿ ಪೂಜಾ ಕೈಂಕರ್ಯಗಳನ್ನು ಮಾಡುವ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
Advertisement
ಅವಿವಾ ಬಿಡ್ಡಪ್ಪ (Aviva Bidapa) ಅವರು ಫ್ಯಾಶನ್ ಜಗತ್ತಿನಲ್ಲಿ ಬಹುದೊಡ್ಡ ಹೆಸರನ್ನು ಸಂಪಾದಿಸಿದರು ಕೂಡ ಅಂಬಿ ಮನೆಯ ಸೊಸೆಯಾದ ನಂತರ ಎಲ್ಲೆಡೆ ಬಹಳನೇ ಸರಳವಾಗಿ ಕಾಣಿಸಿಕೊಳ್ಳುತ್ತಿದ್ದು, ಹಬ್ಬದ ದಿನದಂದು ಹಸಿರು ಬಣ್ಣದ ಝರಿ ಸೀರೆ ಉಟ್ಟಿ ತಲೆಗೆ ಮಲ್ಲಿಗೆ ಹೂವನ್ನು ಮುಡಿದು, ಚಿನ್ನದ ಸರಗಳನ್ನು ಧರಿಸಿ ಕೈಗಳಿಗೆ ಬಳೆ ಹಾಕಿಕೊಂಡು ಹಣೆಗೆ ಸಿಂಧೂರವನ್ನು ಇಟ್ಟು ತಮ್ಮ ಪತಿಯೊಂದಿಗೆ ಮುದ್ದಾದ ಸೆಲ್ಫಿ ಕ್ಲಿಕಿಸಿಕೊಂಡು, ಈ ಎಲ್ಲವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
Advertisement
Advertisement
ಹೌದು ಗೆಳೆಯರೇ ಅವಿವ ಬಿಡ್ಡಪ್ಪ (Aviva Bidapa) ಮತ್ತು ಅಭಿ (Abhi) ಮದುವೆಯಾದ ನಂತರ ಬಂದಂತಹ ಮೊದಲ ಹಬ್ಬ ಇದಾದ ಕಾರಣ ಸುಮಲತಾ ಅಂಬರೀಶ್ ಅವರು ಇದರ ಜವಾಬ್ದಾರಿಯನ್ನು ತೆಗೆದುಕೊಂಡು ಮನೆಗೆ ಪುರೋಹಿತರನ್ನು ಕರೆಸಿ ಬಹಳ ಅರ್ಥಪೂರ್ಣವಾಗಿ ಮಂತ್ರಗಳ ಘೋಷಣೆಯ ನಡುವೆ ಪೂಜೆ ಮಾಡಿದ್ದಾರೆ. ಈ ಫೋಟೋಗಳೆಲ್ಲವೂ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು.
ಸೋಫಾದ ಮೇಲೆ ವಿರಾಜಮಾನವಾಗಿ ಸುಮಲತಾ ಅಂಬರೀಶ್ ಕುಳಿತರೆ ಅವರ ಪಕ್ಕದಲ್ಲೇ ಸೊಸೆ ಅವಿವ ಬಿಡ್ಡಪ್ಪ (Aviva Bidapa) ಹಾಗೂ ಹಿಂದುಗಡೆ ಮಗ ಅಭಿಷೇಕ್ ಅಂಬರೀಶ್ ನಿಂತು ರಾಯಲ್ ಆಗಿ ತೆಗೆಸಿರುವಂತಹ ಫೋಟೋಗಳಿಗೆ ನೆಟ್ಟಿಗರು ಕಮೆಂಟ್ಗಳ ಸಾಗರವನ್ನೇ ಹರಿಸುತ್ತಾ ನೂರು ಕಾಲ ನಿಮ್ಮ ಕುಟುಂಬ ಹಾಗೂ ಕುಟುಂಬದವರೆಲ್ಲರೂ ಸುಖವಾಗಿರಿ ಎಂದು ಶುಭ ಹಾರೈಸುತ್ತಿದ್ದಾರೆ.