Karnataka Times
Trending Stories, Viral News, Gossips & Everything in Kannada

ವರಮಹಾಲಕ್ಷ್ಮಿ ಹಬ್ಬದ ದಿನವೇ ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಬರೋಬ್ಬರಿ 20 ವರ್ಷದ ನಂತರ ಒಂದಾದ ಪ್ರೇಮ್ ಮತ್ತು ಡಿ ಬಾಸ್, ಬರಲಿದೆ ಯಾರೂ ಊಹಿಸದ ಸಿನೆಮಾ!!

ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತಿ ಗಳಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Challenging Star Darshan Tugudeep) ಅವರು ಹವಾ ಹೊಂದಿದ್ದಾರೆ. ಕ್ರಾಂತಿ ಸಿನಿಮಾದ ಬಳಿಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಟೇರ (Katera) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನವೇ ಗುಡ್ ನ್ಯೂಸ್ ವೊಂದು ಹೊರಬಿದ್ದಿದೆ.

ಹೌದು, ದರ್ಶನ್ ಹಾಗೂ ಜೋಗಿ ಪ್ರೇಮ್ (Jogi Prem) ಕಾಂಬಿನೇಷನ್ನ ಸಿನಿಮಾ ಅನೌನ್ಸ್ ಆಗಿದ್ದು, ಈ ಚಿತ್ರಕ್ಕೆ ಕೆವಿಎನ್ (KVN) ಸಂಸ್ಥೆ ಬಂಡವಾಳ ಹೂಡಿಕೆ ಮಾಡುತ್ತಿದೆ. ಈ ಹಿಂದೆ ಕರಿಯಾ ಸಿನಿಮಾದ ಬಳಿಕ ದರ್ಶನ್ ಹಾಗೂ ಜೋಗಿ ಪ್ರೇಮ್ ಅವರು ಮತ್ತೆ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಸದ್ಯಕ್ಕೆ ಈ ಸುದ್ದಿಯು ಡಿ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಅದಲ್ಲದೇ ದರ್ಶನ್ ಅವರ ಮುಂದಿನ ಸಿನಿಮಾದ ಬಗ್ಗೆ ಬಾರಿ ಚರ್ಚೆಯಾಗುತ್ತಿದೆ.

Advertisement

ಅದಲ್ಲದೇ, ನಟ ದರ್ಶನ್ ಮತ್ತು ನಾನು ಮತ್ತೆ ಯಾವಾಗ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಎಲ್ಲರೂ ಯಾವಾಗಲೂ ಕೇಳುತ್ತಿದ್ದರು. ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಅಂತಿಮವಾಗಿ ಕೆವಿಎನ್ ಪ್ರೊಡಕ್ಷನ್(KVN Productions)ನೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಲು ಇಂದು ನನಗೆ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ ಹರ್ಷ.

Advertisement

ತರುಣ್ ಸುಧೀರ್ (Tarun Sudheer) ನಿರ್ದೇಶನದ ಕಾಟೇರ ಸಿನಿಮಾದ ಶೂಟಿಂಗ್ ಮುಕ್ತಾಯವಾದ ಬಳಿಕವಷ್ಟೇ ಮಿಲನ ಪ್ರಕಾಶ್ (Milana Prakash) ನಿರ್ದೇಶನದ ಈ ಹೊಸ ಚಿತ್ರದಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ದರ್ಶನ್ ಅವರ ಈ ಹೊಸ ಸಿನಿಮಾವು ರಾಕ್ಲೈನ್ ಪ್ರೊಡಕ್ಷನ್ ಹೌಸ್ (Rockline Production House) ನಲ್ಲಿ ಸಿನಿಮಾ ಮೂಡಿ ಬರಲಿದೆ.

Advertisement

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ (Katera) ಸಿನಿಮಾವು ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿದ್ದು,70ರ ದಶಕದ ಕತೆಯನ್ನು ಚಿತ್ರ ತಂಡವು ತೆರೆ ಮೇಲೆ ತರುವ ಪ್ರಯತ್ನದಲ್ಲಿದೆ. ಈ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಾಧನಾ ರಾಮ್ (Radhana Ram) ನಟಿಸುತ್ತಿದ್ದು, ತೆಲುಗು ನಟ ಜಗಪತಿ ಬಾಬು (Jagapati Babu) , ಹಿರಿಯ ನಟ ಶ್ರೀನಿವಾಸ್ ಮೂರ್ತಿ (Shreenivasa Moorthi) ಸೇರಿದಂತೆ ಇನ್ನಿತ್ತರ ಕಲಾವಿದರು ಇದ್ದಾರೆ. ಸದ್ಯಕ್ಕೆ ಸಿನಿಮಾದ ಶೂಟಿಂಗ್ ನಲ್ಲಿ ನಟ ದರ್ಶನ್ ಅವರು ಬ್ಯುಸಿಯಾಗಿದ್ದಾರೆ.

Leave A Reply

Your email address will not be published.