ಕಿರುತೆರೆ ರಿಯಾಲಿಟಿ ಶೋಗಳ ಮೂಲಕ ಹೆಸರುವಾಸಿಯಾಗಿರುವಂತಹ ನಟಿ ಶ್ವೇತಾ ಚಂಗಪ್ಪ(Swetha Changappa) ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದು ಆಗಾಗ ತಮ್ಮ ವಿಭಿನ್ನ ಫೋಟೋಶೂಟ್ ಹಾಗೂ ರೀಲ್ಸ್ ವಿಡಿಯೋಗಳ ಮೂಲಕ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುತ್ತಾರೆ. ಅದರಂತೆ ಸದ್ಯ ಮೇಕಪ್ ಆರ್ಟಿಸ್ಟ್ ಒಬ್ಬರ ಕೈಚಳಕದಲ್ಲಿ ಶ್ವೇತಾ ಚಂಗಪ್ಪ(Swetha Changappa) ತಮ್ಮ ಮುದ್ದಾದ ಮುಖಕ್ಕೆ ಮೇಕಪ್ ಮಾಡಿಸಿಕೊಂಡು ಲಂಗಾ ದಾವಣಿಯನ್ನು ಧರಿಸಿ ಕ್ಯಾಮರಾದ ಕಣ್ಣಿಗೆ ಫೋಸ್ ನೀಡಿದ್ದಾರೆ.
ಕೆಂಪು ಬಣ್ಣದ ಬ್ಲೌಸ್, ನೀಲಿ ಬಣ್ಣದ ದುಪ್ಪಟ್ಟ ಹಾಗೂ ಬಿಳಿ ಬಣ್ಣದ ಸ್ಕರ್ಟ್ ಧರಿಸಿ ನಟಿ ಶ್ವೇತಾ ಚಂಗಪ್ಪ(Swetha Changappa) ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದು, ಕುತ್ತಿಗೆಗೆ ಬಹು ದೊಡ್ಡ ಸರ, ಕೈಗಳಿಗೆ ಬಳೆ ಹಾಗೂ ಕಿವಿಗಳಿಗೆ ಜುಮ್ಕಾ ಧರಿಸಿ ನಟಿ ಶ್ವೇತಾ ಚಂಗಪ್ಪ ಬಹಳ ಮೋಹಕವಾಗಿ ಕಾಣಿಸಿಕೊಂಡಿದ್ದು, ಈ ವಿಡಿಯೋವನ್ನು ಕನಸು ಅಂಡ್ ಯಮ್ ಸ್ಟುಡಿಯೋ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಜಸ್ಟ್ ಲುಕಿಂಗ್ ಫ್ಯಾಬುಲಸ್ (just looking Fabulous) ಎಂಬ ಕ್ಯಾಪ್ಷನ್ ಬರೆದು ಈ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು.
Advertisement
ಇದನ್ನು ಕಂಡಂತಹ ಶ್ವೇತ ಚಂಗಪ್ಪ ಅವರ ಅಭಿಮಾನಿಗಳು ಲೈಕ್ಸ್ಗಳ ಸುರಿಮಳೆಯ ಜೊತೆಗೆ ವಿಭಿನ್ನವಾದ ಕಮೆಂಟ್ಗಳ ಮೂಲಕ ನಟಿ ಶ್ವೇತಾ ಚಂಗಪ್ಪ(Swetha Changappa) ಅವರ ಬ್ಯೂಟಿ ಯನ್ನು ಹಾಡಿ ಹೊಗಳುತ್ತಿದ್ದಾರೆ. ಇದನ್ನು ವೀಕ್ಷಿಸಿದಂತಹ ಫ್ಯಾನ್ಸ್ ಯಾಕೆ ನಿಮಗೆ ವಯಸ್ಸೇ ಆಗಲ್ಲ, ಕೇವಲ ನಮಗೆ ಮಾತ್ರ ವಯಸ್ಸಾಗುತ್ತೆ, ಸಂತೂರ್ ಮಮ್ಮಿ, ಸೂಪರ್ ಅಕ್ಕ, ಅಮೇಜಿಂಗ್, ಬ್ಯೂಟಿಫುಲ್, ಫ್ಯಾಬುಲಸ್ ಎಂದೆಲ್ಲ ಕಾಮೆಂಟ್ ಮಾಡುತ್ತಾ ನಟಿ ಶ್ವೇತ ಚಂಗಪ್ಪ ಅವರ ಅಂದ ಚಂದವನ್ನು ಹಾಡಿ ಹೊಗಳುತ್ತಿದ್ದಾರೆ.
Advertisement
View this post on Instagram
Advertisement
2022 ರಲ್ಲಿ ಶಿವರಾಜ್ ಕುಮಾರ್(Shiva Rajkumar) ಅವರ 125ನೇ ಸಿನಿಮಾ ವೇದಾದಲ್ಲಿ ಪಾರಿ ಎಂಬ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದಂತಹ ಈ ನಟಿ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದು, ಕಿರುತೆರೆ ಹಾಗೂ ಹಿರಿತರೆ ಎರಡರ ಮೂಲಕ ತಮ್ಮ ಅಭಿಮಾನಿಗಳಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುವುದರ ಜೊತೆಗೆ ಸೋಶಿಯಲ್ ಮೀಡಿಯಾಗಳಂತ ಫ್ಲಾಟ್ ಫಾರ್ಮ್ಗಳ ಮುಖಾಂತರ ಅಭಿಮಾನಿಗಳೊಟ್ಟಿಗೆ ಹೆಚ್ಚಿನ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಸದ್ಯ ಶ್ವೇತ ಚಂಗಪ್ಪ(Swetha Changappa) ಅವರು ತಮ್ಮ ಮುಂದಿನ ಸಿನಿಮಾದ ಕುರಿತು ಯಾವುದೇ ಅಪ್ಡೇಟ್ ನೀಡಿಲ್ಲ, ಮುಂದಿನ ದಿನಗಳಲ್ಲಿ ಈ ನಟಿ ಅಭಿನಯದ ಮತ್ತೊಂದು ಚಿತ್ರ ತೆರೆ ಕಾಣಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.