ಕಳೆದ ಕೆಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಲಕ್ಷ್ಮಿ ಬಾರಮ್ಮ(Lakshmi Baramma) ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಗೊಂಬೆ ಎಂದೇ ಪರಿಚಯಗೊಂಡಂತಹ ನೇಹಾ ರಾಮಕೃಷ್ಣ(Neha Ramakrishna) ಸತತ ನಾಲ್ಕೈದು ವರ್ಷಗಳ ಕಾಲ ಒಂದೇ ಸೀರಿಯಲ್ನಲ್ಲಿ ಮುಗ್ಧ ಹೆಣ್ಣುಮಗಳ ಪಾತ್ರಧಾರಿಯಾಗಿ ಕಾಣಿಸಿಕೊಂಡ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
ಅನಂತರ ಸಾಕಷ್ಟು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳ ಅವಕಾಶ ಪಡೆದುಕೊಂಡು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದ ಇವರಿಗೆ ಬಿಗ್ ಬಾಸ್ (Bigg Boss) ಸೀಸನ್ 9ರ ನವೀನರಾಗಿ ಮನೆಗೆ ಪ್ರವೇಶಿಸುವಂತಹ ಅವಕಾಶ ದೊರಕುತ್ತದೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಂತಹ ನೇಹ ರಾಮಕೃಷ್ಣ(Neha Ramakrishna) ಬಂಗಾರದ ಬೊಂಬೆ ನಿನ್ನ ಹಾಡು ಕೇಳಮ್ಮ ಎಂಬ ಹಾಡಿನ ಮೂಲಕ ವೇದಿಕೆಗೆ ಎಂಟ್ರಿ ಕೊಟ್ಟು ನಾನು ಮನೆ ಒಳಗೆ ಹೋಗುತ್ತಿರುವುದಕ್ಕೆ ನನಗೆ ಕೊಂಚವೋ ಭಯವಿಲ್ಲ ಬದಲಿಗೆ ಬಹಳ ಕುತೂಹಲಾಗಿದ್ದೇನೆ.
Advertisement
Advertisement
ಎನುತ್ತ ಮನೆಯೊಳಗೆ ಎಂಟ್ರಿ ಕೊಟ್ಟು ಬಹಳ ಅದ್ಭುತವಾಗಿ ಕಾಲ ಕಳೆದು ಬಿಗ್ ಬಾಸ್ ನೀಡಿದಂತಹ ಟಾಸ್ಕ್ ಗಳಿಗೆಲ್ಲ ವಿಶೇಷ ಸ್ಟಾರ್ಟರ್ಜಿ ಉಪಯೋಗಿಸುತ್ತಾ ಗೇಮ್ ಗೆಲ್ಲುವ ನಿಟ್ಟಿನಲ್ಲಿ ಆಡಿ ಬಿಗ್ ಬಾಸ್ ವೀಕ್ಷಕರ ಮನಸ್ಸನ್ನು ಗೆದ್ದರು. ಹೀಗೆ ಅಮೂಲ್ಯ ಗೌಡ, ರಾಕೇಶ್ ಅಡಿಗ, ಅನುಪಮಾ ಗೌಡ, ಆರ್ಯವರ್ಧನ್ ಗುರೂಜಿ ಹೀಗೆ ಮುಂತಾದವರೊಂದಿಗೆ.
Advertisement
ಒಳ್ಳೆಯ ಭಾಂದವ್ಯ ಬೆಳೆಸಿಕೊಂಡಿದಂತಹ ನೇಹ ರಾಮಕೃಷ್ಣ(Neha Ramakrishna) ಮನೆಯಲ್ಲಿ ಕಳೆದಂತಹ ಸವಿ ನೆನಪುಗಳ ಕೆಲ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿವೆ. ಹೌದು ಗೆಳೆಯರೇ ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ಪರ್ಧಿಗಳೆಲ್ಲರೂ ವಿಶೇಷವಾದ ದೀಪಾವಳಿ ಹಬ್ಬವನ್ನು ಆಚರಿಸಿದ ಸಂದರ್ಭದಲ್ಲಿ ತೆಗೆಯಲಾದ ಫೋಟೋಗಳಿಗಾಗಿದ್ದು, ನಟಿ ನೇಹ ರಾಮಕೃಷ್ಣ(Neha Ramakrishna) ಕಪ್ಪು ಬಣ್ಣದ ಗಾಗ್ರ ಚೋಲಿ ಧರಿಸಿ ಬಹಳ ಮುದ್ದಾಗಿ ಕ್ಯಾಮೆರಾದ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.