ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಈ ಸಹೋದರಿಯರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಒಬ್ಬರಿಗೊಬ್ಬರೂ ಸಾಥ್ ನೀಡುತ್ತಾ ಟ್ರಿಪ್, ಟೂರ್ ಎಂದು ಸುದ್ದಿಯಲ್ಲಿರುತ್ತಾರೆ. ಈ ಜೋಡಿಯು ಬೇರೆ ಯಾರು ಅಲ್ಲ, ನಟಿಯರಾದ ನೇಹಾ ಗೌಡ (Neha Gowda) ಹಾಗೂ ಸೋನು ಗೌಡ (Sonu Gowda). ಈ ಜೋಡಿ ಕಳೆದ ಕೆಲವು ದಿನಗಳಿಂದ ಈ ನಟಿಯರು ಸುದ್ದಿಯಾಗುತ್ತಿದ್ದಾರೆ.
ಆದರೆ ಇದೀಗ ನಟಿ ಸೋನು ಗೌಡ ಹಾಗೂ ನೇಹಾ ಗೌಡರವರು ತಾಯಿ (Mother) ಯ ಜೊತೆಗೆ ಇರುವ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ನೇಹಾ ಗೌಡ ಸೀರೆ ಉಟ್ಟಿದರೆ, ಸೋನು ಗೌಡ ಪ್ಯಾಂಟ್ ಶರ್ಟ್ ಹಾಕಿಕೊಂಡು ಮಾಡ್ರನ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ತಾಯಿ ಕೆಂಪು ಬಣ್ಣದ ಸೀರೆಯುಟ್ಟು ಲಕ್ಷಣವಾಗಿ ಕಾಣಿಸಿಕೊಂಡಿದ್ದಾರೆ. ರಿಯಲ್ ಸೆಲೆಬ್ರಿಟಿ ಸಹೋದರಿಯರ ಕುಟುಂಬದ ಫೋಟೋವೊಂದು ವೈರಲ್ ಆಗಿದ್ದು, ಈ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿವೆ.
Advertisement
ನಟಿ ಸೋನು ಗೌಡ ಅವರು ಇತ್ತೀಚೆಗೆ ಸಹೋದರಿ ನೇಹಾ ಜೊತೆ ಆಫ್ರಿಕಾ (Africa) ಪ್ರವಾಸ ಎಂಜಾಯ್ ಮಾಡಿಕೊಂಡು ಬಂದಿದ್ದರು. ಆದಾದ ಬಳಿಕ ದುಬೈ (Dubai) ಗೆ ತೆರಳಿದ್ದ ಈ ಸಹೋದರಿಯರು ಅಲ್ಲಿನ ಸುಂದರ ಕ್ಷಣದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ದೊಡ್ಡ ದೊಡ್ಡ ರಸ್ತೆಗಳು, ಉದ್ದವಾದ ಬಿಲ್ಡಿಂಗಳು, ಕಲ್ಪನೆಗೂ ಮೀರಿದ ಐಷಾರಾಮಿ ಜೀವನ. ನಿಜ ಜೀವನದಲ್ಲಿ ಆದಷ್ಟು ಫ್ಯಾನ್ಸಿ ಪ್ರಪಂಚ (Fancy World) ನೋಡಬೇಕು ಅಂದ್ರೆ ಅದು ದುಬೈನಲ್ಲಿ ಮಾತ್ರ” ಎಂದು ಹೇಳಿದ್ದರು.
Advertisement
ಅದಲ್ಲದೇ ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಟಿ ವರ್ಷ ನೇಹಾ ಗೌಡ (Neha Gowda) ತಮ್ಮ ಹುಟ್ಟುಹಬ್ಬ (Birthday Celebration) ವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅಕ್ಕ ನಟಿ ಸೋನು ಗೌಡ ಕೊಟ್ಟ ಸರ್ಪ್ರೈಸ್ ಸೂಪರ್… ಎಂದು ಬರೆದುಕೊಂಡಿದ್ದಾರೆ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಟಿ ದಾಸರಹಳ್ಳಿ ಬೆಂಗಳೂರು ಉತ್ತರವಲಯ-4 ಯಲಹಂಕ ಬೆಂಗಳೂರಿನಲ್ಲಿ ನೇಹಾ ಗೌಡ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
Advertisement
ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ನೇಹಾ ಗೊಂಬೆ ಇವರಿಗೆ ಹುಟ್ಟುಹಬ್ಬದ ಶುಭಾಷಯಗಳು. ನೇಹಾ ಗೌಡರವರ ಹುಟ್ಟುಹಬ್ಬದ ಪ್ರಯುಕ್ತ ಉಚಿತ ನೋಟ್‌ಬುಕ್ ಮತ್ತು ಬ್ಯಾಗ ವಿತರಣಾ ಸಮಾರಂಭ’ ಎಂದು ಕಪ್ಪು ಹಲಗೆಯ ಮೇಲೆ ಬರೆಯಲಾಗಿದೆ.
“ಪ್ರತಿ ವರ್ಷ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ನಮ್ಮ ಜೀವನದಲ್ಲಿರುವ ವ್ಯಕ್ತಿ ಎಷ್ಟು ಸ್ಪೆಷಲ್ ಎಂದು ತೋರಿಸಬಹುದು. ನಾವು ದೊಡ್ಡವರಾಗುತ್ತಿದ್ದಂತೆ ದೊಡ್ಡವರು ಚಿಕ್ಕವರಾಗುತ್ತಾರೆ. ಈ ವರ್ಷ ನೇಹಾ ಬರ್ತಡೇಯನ್ನು ತುಂಬ ಸ್ಪೆಷಲ್ ಆಗಿ ಆಚರಿಸಲಾಗಿತ್ತು’ ಎಂದು ಸೋನು ಗೌಡ ಎಲ್ಲಾ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಫೋಟೋಗಳು ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿವೆ.