Karnataka Times
Trending Stories, Viral News, Gossips & Everything in Kannada

ನಿರ್ದೇಶಕಿ ಶ್ರುತಿ ನಾಯ್ಡು ರವರ ಮನೆಯಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ನಟಿ ವನಿತಾ ವಾಸು, ಇಲ್ಲಿದೆ ಅಪರೂಪದ ಫೋಟೋಗಳು!!

ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯರಾಗಿರುವ ಮೂಲಕ ಈ ಲೋಕವನ್ನೇ ಬದುಕಿಗಾಗಿ ನಂಬಿಕೊಂಡವರು ಹಲವರು ಇದ್ದಾರೆ. ಅಂತಹವರ ಸಾಲಿಗೆ ಕನ್ನಡ ಬಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಮಿಂಚಿದ ನಟಿ ವನಿತಾ ವಾಸು (Vanitha Vasu) ರವರು ಸೇರಿಕೊಳ್ಳುತ್ತಾರೆ. ಸದ್ಯಕ್ಕೆ ಕನ್ನಡ ಕಿರುತೆರೆ (Kannada Small Screen) ಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿರುವ ನಟಿ ವನಿತಾ ವಾಸುರವರು ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಆಗಾಗ ಅಪ್ಡೇಡ್ ನೀಡುತ್ತಿರುತ್ತಾರೆ.

ಕಿರುತೆರೆಯ ಧಾರಾವಾಹಿಗಳಲ್ಲಿ ಅಮ್ಮನಾಗಿ (Mother character), ಲೇಡಿ ವಿಲನ್ (Lady villain) ಆಗಿ ನಟಿ ವನಿತಾ ವಾಸು ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ನಟಿ ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಾ ನೆಟ್ಟಿಗರೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ನಟಿ ವನಿತಾ ವಾಸುರವರು ವರಮಹಾಲಕ್ಷ್ಮಿ ಪೂಜೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

Advertisement

ನಿರ್ದೇಶಕಿ ಶ್ರುತಿ ನಾಯ್ಡು (Shruti Naidu) ರವರ ಮನೆಯಲ್ಲಿನ ವರಮಹಾಲಕ್ಷ್ಮಿ ಪೂಜೆಯಲ್ಲಿ ಉಳಿದ ಕಲಾವಿದರ ಜೊತೆಗೆ ನಟಿ ವನಿತಾ ವಾಸು ಕೂಡ ಭಾಗಿಯಾಗಿದ್ದಾರೆ. ಈ ಫೋಟೋಗಳನ್ನು ಶೇರ್ ಮಾಡಿಕೊಂಡು, ಶ್ರುತಿ ನಾಯ್ಡು ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ! ದೇವರು ಎಲ್ಲರನ್ನು ಆಶೀರ್ವದಿಸಲಿ! ಎಂದು ಬರೆದುಕೊಂಡಿದ್ದಾರೆ. ನಟಿ ಶೇರ್ ಮಾಡಿಕೊಂಡಿರುವ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Advertisement

ಸದ್ಯಕ್ಕೆ ನಟಿ ವನಿತಾ ವಾಸು ಕನ್ನಡಕಿರುತೆರೆಯ ಧಾರಾವಾಹಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅಮೃತಾ ಧಾರೆ (Amrutha Dhare) ಧಾರಾವಾಹಿಯಲ್ಲಿ ನಾಯಕ ಗೌತಮ್ ಅಮ್ಮನ ಪಾತ್ರವನ್ನು ವನಿತಾ ವಾಸು ನಿರ್ವಹಿಸುತ್ತಿದ್ದಾರೆ. ಶಕುಂತಲಾ ಪಾತ್ರ (Shakuntala Roll) ದಲ್ಲಿ ನಟಿಸುತ್ತಿದ್ದು, ಸದ್ಯಕ್ಕೆ ಈ ಧಾರಾವಾಹಿಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿವೆ. ಬೆಂಗಳೂರಿನಲ್ಲಿ ಜನಿಸಿದ ಇವರು 1987 ರಲ್ಲಿ ತೆರೆಕಂಡ ಸುರೇಶ್ ಹೆಬ್ಬಳಿಕರ್ ನಿರ್ದೇಶನದ `ಅಗುಂತಕ’ (Aguntaka) ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡರು.

ಆ ನಂತರದಲ್ಲಿ ಚೀರಂಜೀವಿ ಸುಧಾಕರ್, ಶಕ್ತಿ, ಕಾಡಿನ ಬೆಂಕಿ, ತರ್ಕ, ಉತ್ಕರ್ಷ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಅದಲ್ಲದೇ ಕ್ಷಣ ಕ್ಷಣ (Kshana Kshana), ಮನೆ ಒಂದು ಮೂರು ಬಾಗಿಲು (Mane Ondu Muru Bagilu) ಹಾಗೂ ಸರಸ್ವತಿ (Saraswathi) ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ವನಿತಾ ವಾಸು ನಟಿಸಿದ್ದಾರೆ. ಎಲ್ಲಾ ಧಾರಾವಾಹಿಗಳಲ್ಲಿ ಹೆಚ್ಚಾಗಿ ನೆಗೆಟಿವ್ ಶೇಡ್‍ನಲ್ಲೇ ಕಾಣಿಸಿಕೊಂಡಿದ್ದಾರೆ. ಹೌದು, ಸಿನಿಮಾದಲ್ಲಿನ ಅವಕಾಶಗಳು ಕಡಿಮೆಯಾದ ಬೆನ್ನಲ್ಲೇ ಕಿರುತೆರೆ ಧಾರಾವಾಹಿಯತ್ತ ಮುಖಮಾಡಿದ್ದು, ನಟಿಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಕಿರುತೆರೆ ಪ್ರೇಕ್ಷಕರನ್ನು ಮನೋರಂಜಿಸುತ್ತಿದ್ದಾರೆ.

Leave A Reply

Your email address will not be published.