Karnataka Times
Trending Stories, Viral News, Gossips & Everything in Kannada

ಒಂದೆಡೆ ಸೇರಿದ ಕನ್ನಡದ ಖ್ಯಾತ ಎವರ್ ಗ್ರೀನ್ ನಟಿಯರು, ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಫೋಟೋಸ್ ಇಲ್ಲಿವೆ ನೋಡಿ!!

ಕನ್ನಡ ಸಿನಿಮಾ ರಂಗದಲ್ಲಿ ಕಾಣ ಸಿಗುವಂತಹ ಪ್ರೀತಿ ಬಾಂಧವ್ಯ ಹಾಗೆ ಅನ್ಯೋನ್ಯತೆಯನ್ನು ಇತರೆ ಯಾವ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಕಾಣಲು ಸಾಧ್ಯವಾಗುವುದಿಲ್ಲ. ಇಲ್ಲಿ ಸೆಲೆಬ್ರಿಟಿಗಳು ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡು ಸ್ನೇಹ ಬಾಂಧವ್ಯವನ್ನು ಮೆರೆಯುತ್ತಿರುತ್ತಾರೆ.

ಹೀಗಿರುವಾಗ ಕಳೆದ ಕೆಲವು ವರ್ಷಗಳ ಹಿಂದೆ ತೆಗೆಯಲಾದಂತಹ ಕೆಲವು ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ತಮ್ಮ ಹಳೆಯ ನಟಿಯರ ಗುಂಪನ್ನು ಈ ಅಪರೂಪದ ಫೋಟೋಗಳಲ್ಲಿ ಕಾಣಬಹುದಾಗಿದೆ. ಹೌದು ಸ್ನೇಹಿತರೆ ತಮ್ಮ ಅಮೋಘ ಅಭಿನಯದ ಮೂಲಕ ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್.

Advertisement

Advertisement

ಶ್ರೀನಾಥ್ ನಂತಹ ನಟರೊಂದಿಗೆ ತೆರೆ ಹಂಚಿಕೊಂಡು ಅಭಿನಯ ಶಾರದೆ ಎಂಬ ಪಟ್ಟ ಗಿಟ್ಟಿಸಿಕೊಂಡಂತಹ ನಟಿ ಜಯಂತಿ(Jayanthi), ಅಂದಿನ ಸ್ಟಾರ್ ನಟರುಗಳಿಂದ ಹಿಡಿದು ಇಂದಿನ ಯುವ ನಟರೊಂದಿಗೆ ತೆರೆ ಹಂಚಿಕೊಂಡು ಕನ್ನಡ ಸಿನಿ ಪ್ರೇಕ್ಷಕ ಹೃದಯದಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಗಿಟ್ಟಿಸಿಕೊಂಡಿದಂತಹ ಬಿ ಸರೋಜಾದೇವಿ(B Saroja Devi), ಶಿವರಾಜಕುಮಾರ್(Shiva Rajkumar) ಅವರ ಆನಂದ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ.

Advertisement

ಇಂದು ಶ್ರೀರಸ್ತು ಶುಭಮಸ್ತು ಎಂಬ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಾ ಬಂದಿರುವ ಸುಧಾರಾಣಿ(Sudharani) ಅಮ್ಮನವರು, ಹಾಗೂ ತಮ್ಮ ಅಳುಮುಂಜಿ ಪಾತ್ರದ ಮೂಲಕ ಹೆಚ್ಚಿನ ಕನ್ನಡ ಸಿನಿ ಪ್ರೇಕ್ಷಕರ ಡ್ರೀಮ್ ಗರ್ಲ್ ಆಗಿದ್ದಂತಹ ಶ್ರುತಿ (Shruthi) ಜೊತೆಗೆ ಪೋಷಕ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದ ನಟಿ ಗಿರಿಜಾ ಲೋಕೇಶ್(Girija Lokesh) ಎಲ್ಲರೂ ಒಂದೇ ರೀತಿಯ ಸೀರೆಯನ್ನು ಉಟ್ಟು ಫೋಟೋಗೆ ಫೋಸ್ ನೀಡಿದ್ದಾರೆ. ಸದ್ಯ ಈ ಅಪರೂಪದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ತಮ್ಮ ನೆಚ್ಚಿನ ನಟಿಯರನ್ನು ಒಂದೇ ಪ್ರೇಮ್ನಲ್ಲಿ ಕಂಡ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.