Karnataka Times
Trending Stories, Viral News, Gossips & Everything in Kannada

ಸೀಮಂತದ ಫೋಟೋಸ್ ಹಂಚಿಕೊಂಡ ನಟಿ ಆಶಿತಾ ಚಂದ್ರಪ್ಪ! ಸುಂದರ ಕ್ಷಣಗಳು ಹೇಗಿತ್ತು ನೋಡಿ!!

ಸ್ನೇಹಿತರೆ ಯಶಸ್ವಿ ಧಾರವಾಹಿಗಳ ಮೂಲಕ ಕಿರುತರೆ ಲೋಕದಲ್ಲಿ ಕಮಾಲ್ ಮಾಡಿದಂತಹ ನಟಿ ಆಶಿತಾ ಚಂದ್ರಪ್ಪ(Ashitha Chandrappa) ಇಂದು ತಮ್ಮ ಶ್ರೀಮಂತ ಶಾಸ್ತ್ರದ (Baby Shower) ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಾದ instagram ಹಾಗೂ facebook ನಲ್ಲಿ ಹಂಚಿಕೊಂಡಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ಶುಭಾಶಯಗಳು ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಹೌದು ಗೆಳೆಯರೇ ಕಳೆದ ಕೆಲವು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಗೆ ಎಂಬ ಧಾರಾವಾಹಿಯ ಮೂಲಕ ಮನೆಮಾತಾದಂತಹ ನಟಿ ಆಶಿತಾ ಚಂದ್ರಪ್ಪ(Ashitha Chandrappa) ಅನಂತರ ಕಲರ್ಸ್ ಕನ್ನಡ ವಾಹಿನಿಯ ರಾಧಾ ರಮಣ ಸೀರಿಯಲ್ ನಲ್ಲಿ ನಟ ಸ್ಕಂದ(Skanda) ಅವರ ನಾಯಕ ನಟಿಯಾಗಿ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದು, ಕನ್ನಡಿಗರ ಮನೆಮಗಳಾಗಿ ಹೋದರು.

Advertisement

ಆನಂತರ ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ ಅವಕಾಶ ಪಡೆದು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದಂತಹ ಆಶಿತಾ ಚಂದ್ರಪ್ಪ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ಸಾರಥ್ಯದಲ್ಲಿ ಮೂಡಿಬರುವಂತಹ ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದಿದ್ದ ಈಕೆ ಧಾರಾವಾಹಿಗಳ ಅವಕಾಶಗಳು ಹೆಚ್ಚಿನದಾಗಿರುವಾಗಲೇ ರೋಹನ್ ರಾಘವೇಂದ್ರ (Rohan Raghavendra) ಎಂಬುವರೊಂದಿಗೆ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Advertisement

Advertisement

ಈ ಮುದ್ದಾದ ಜೋಡಿಗಳ ಮದುವೆಗೆ ಕಿರುತೆರೆ ಹಾಗೂ ಹಿರಿತೆರೆ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ದರ್ಶನ್(Darshan) ಅವರ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಈ ನಟಿ ಇದೀಗ ತಮ್ಮ ಮೊದಲ ಸೀಮಂತ ಶಾಸ್ತ್ರದ ಕೆಲ ಫೋಟೋಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಬೇಬಿ ಬಂಪ್ ( Baby bump) ಹಿಡಿದು ಟ್ರೆಡಿಷನಲ್ ಉಡುಗೆಯಲ್ಲಿ ಫೋಟೋಗೆ ಪೋಸ್ ನೀಡಿರುವ ಆಶಿತಾ ಅವರು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ನಟಿ ರಾಧಿಕಾ ರಾವ್ (Radhika Rao) ಅವರು ಗಂಡು ಮಗು ಒಂದಕ್ಕೆ ಜನ್ಮ ನೀಡುವ ಮೂಲಕ ಅಭಿಮಾನಿಗಳೊಟ್ಟಿಗೆ ಸಿಹಿ ಸುದ್ದಿ ಒಂದನ್ನು ಹಂಚಿಕೊಂಡಿದ್ದರು. ಇದೀಗ ನಟಿ ಆಶಿತ ಚಂದ್ರಪ್ಪ(Ashitha Chandrappa) ಮನೆಗೆ ಆಗಮಿಸಲಿರುವ ಹೊಸ ಅತಿಥಿಯ ಕುರಿತು ಮಾಹಿತಿ ಹಂಚಿಕೊಂಡು ಸಂತಸಪಟ್ಟಿದ್ದಾರೆ.

Leave A Reply

Your email address will not be published.