ಸ್ಯಾಂಡಲ್ವುಡ್ನಲ್ಲಿ `ಕೃಷ್ಣ’ ಎಂದೇ ಖ್ಯಾತಿ ಗಳಿಸಿರುವ ನಟ ಅಜಯ್ ರಾವ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ಅಪರೂಪದ ಫೋಟೋಸ್!!
ಸ್ಯಾಂಡಲ್ವುಡ್ನಲ್ಲಿ `ಕೃಷ್ಣ’ ಎಂದೇ ಫೇಮಸ್ ಆಗಿರುವ ನಟ ಅಜಯ್ ರಾವ್. ನಟ ಅಜಯ್ ರಾವ್ `ಕೃಷ್ಣ’ನ ಹೆಸರಿರುವ ಹೆಚ್ಚಿನ ಸಿನಿಮಾಗಳಲ್ಲಿ ನಟ ಅಜಯ್ ರಾವ್ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದಾರೆ. ಸ್ಯಾಂಡಲ್ವುಡ್ ನಟ ಅಜಯ್ ರಾವ್ (Krishna Ajay Rao) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಕುಟುಂಬದವರ ಜೊತೆಗೆ ಕಾಲ ಕಳೆಯುತ್ತಾರೆ.
ಹೊಸಪೇಟೆಯವರಾದ ಅಜಯ್ ರಾವ್ (Ajay Rao) ಅವರು ಸ್ವಪ್ನ (Swapna) ಎಂಬವರನ್ನು ಪ್ರೀತಿಸಿ 2014ರಲ್ಲಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಮದುವೆಯಾದ ನಾಲ್ಕು ವರ್ಷಗಳ ನಂತರ ಚರಿಷ್ಮಾ (Charishma) ಎಂಬ ಮುದ್ದಾದ ಹೆಣ್ಣು ಮಗಳು ಜನಿಸಿದ್ದು, ಮುದ್ದು ಮಗಳಾದ ಚೆರ್ರಿ (Charishma) ಜೊತೆ ಎಂಜಾಯ್ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿರುತ್ತವೆ.
Advertisement
ಆದರೆ ಇದೀಗ ನಟ ಅಜಯ್ ರಾವ್ ಅವರ ಮುದ್ದಾದ ಕುಟುಂಬದ ಫೋಟೋಗಳು ವೈರಲ್ ಆಗಿದ್ದು, ಅಜಯ್ ರಾವ್ ಮುದ್ದಿನ ಮಡದಿ ಹಾಗೂ ಮಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಗಳಿಂದ ಮೆಚ್ಚುಗೆ ವ್ಯಕ್ತವಾಗಿವೆ. ನಟ ಅಜಯ್ ರಾವ್ ಅವರು, 2003 ರಲ್ಲಿ ಬಿಡುಗಡೆಗೊಂಡ ಎಕ್ಸ್ಯೂಸ್ ಮೀ (Excuse me) ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು.
Advertisement
2008 ರಲ್ಲಿ ತೆರೆಗೆ ಬಂದ ತಾಜ್ ಮಹಲ್ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡ ಬಳಿಕ ಸಾಲು ಸಾಲು ಅವಕಾಶಗಳು ಬಂದವು. ತದನಂತರ ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಮ್ಯಾರೇಜ್ ಲವ್ ಸ್ಟೋರಿ, ಕೃಷ್ಣ ಲೀಲಾ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದಾರೆ.
Advertisement
ನಟ ಅಜಯ್ ರಾವ್ ಅವರು ಇಲ್ಲಿಯವರೆಗೂ ಒಟ್ಟು 29 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ನಿರ್ಮಾಪಕರಾಗಿಯು ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅಜಯ್ ರಾವ್ ನಟಿಸಿರುವ ಲವ್ ಯು ರಚ್ಚು ಸಿನಿಮಾವು ತೆರೆಗೆ ಬಂದಿತ್ತು. ಸದ್ಯಕ್ಕೆ ಪವನ್ ಭಟ್ (Pavan Bhat) ನಿರ್ದೇಶನದ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುವುದರ ಜೊತೆಯಲ್ಲಿ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಸೆಪ್ಟೆಂಬರ್ 1ನೇ ತಾರೀಕು ಪವನ್ ಭಟ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಯುದ್ಧ ಕಾಂಡ(Yuddakanda) ಸಿನಿಮಾ ತೆರೆ ಕಾಣಲಿದೆ. ಅದಲ್ಲದೆ, ಡಿಸೆಂಬರ್ ತಿಂಗಳಿನಲ್ಲಿ ನಿರ್ದೇಶಕ ವೇದ್ಗುರು ಹಾಗೂ ಅಜಯ್ ರಾವ್ ಅವರ ಕಾಂಬಿನೇಷನ್ ಸಿನಿಮಾ ದಂಡಯಾತ್ರೆ(Dandayatre) ತೆರೆಗೆ ಬರಲಿದೆ. ಹೀಗಾಗಿ ನಟ ಅಜಯ್ ರಾವ್ ಅವರ ಎರಡು ಸಿನಿಮಾಗಳು ಈ ವರ್ಷದಲ್ಲಿ ತೆರೆಗೆ ಬರಲಿದ್ದು ನಟ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.