ಬಣ್ಣದ ಲೋಕ ಈ ಹೆಸರು ಕೇಳಿದರೆ ಸಾಕು ಎಲ್ಲರ ಕಿವಿ ಕೂಡ ನೆಟ್ಟಗೆ ಆಗುತ್ತದೆ. ಈ ಲೋಕದಲ್ಲಿ ಬದುಕು ಕಟ್ಟಿಕೊಂಡವರು ಹಲವರು ಇದ್ದಾರೆ. ಈಗಾಗಲೇ ಏಳು ಬೀಳುಗಳಿರಲಿ ಸಿಕ್ಕಅವಕಾಶಗಳನ್ನು ಬಳಸಿಕೊಂಡು ಖ್ಯಾತಿ ಗಳಿಸುತ್ತಿದ್ದಾರೆ. ಅದಲ್ಲದೇ ಕಲಾವಿದರು ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯುಕ್ತಿಕ ಜೀವನದಿಂದಲೇ ಸುದ್ದಿಯಾಗುವುದು ಹೆಚ್ಚು. ಈ ವಿಚಾರದಲ್ಲಿ ನಟಿ ಸೋನು ಗೌಡ (Sonu Gowda) ಕೂಡ ಹೊರತಾಗಿಲ್ಲ.
ನಟಿ ಸೋನು ಗೌಡ ಟ್ರಿಪ್, ಔಟಿಂಗ್ ಎಂದು ಸುದ್ದಿಯಾಗುವುದೇ ಹೆಚ್ಚು. ಆದರೆ ಇದೀಗ ಫ್ಯಾಮಿಲಿ (Family) ಜೊತೆಗೆ ಔಟಿಂಗ್ ತೆರಳಿ ಟೈಮ್ ಸ್ಪೆಂಡ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಔಟಿಂಗ್ ವೇಳೆ ಫ್ಯಾಮಿಲಿ ಜೊತೆಗೆ ಕ್ರಿಕೆಟ್ ಕೂಡ ಆಡಿದ್ದಾರೆ. ಇನ್ನು ಸ್ವಿಮ್ಮಿಂಗ್ ಫೂಲ್ ನಲ್ಲಿ ಕುಳಿತು ಕ್ಯಾಮೆರಾಗೆ ಪೋಸ್ ನೀಡಿದ್ದು, ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಸೋನು ಗೌಡ ಶೇರ್ ಮಾಡಿಕೊಂಡ ಫೋಟೋಗೆ ಎಂಟು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.
Advertisement
ಸೋನು ಗೌಡ ಅವರು ಇತ್ತೀಚೆಗೆ ಸಹೋದರಿ ನೇಹಾ ಜೊತೆ ಆಫ್ರಿಕಾಗೆ ತೆರಳಿದ್ದರು. ಆದಾದ ಬಳಿಕ ದುಬೈಗೆ ಪ್ರವಾಸ ಬೆಳೆಸಿದ್ದರು ಅಲ್ಲಿ ಸಮಯ ಕಳೆಯುತ್ತಿರುವ ಫೋಟೋ ಹಂಚಿಕೊಂಡಿದ್ದರು. ದೊಡ್ಡ ದೊಡ್ಡ ರಸ್ತೆಗಳು, ಉದ್ದವಾದ ಬಿಲ್ಡಿಂಗಳು, ಕಲ್ಪನೆಗೂ ಮೀರಿದ ಐಷಾರಾಮಿ ಜೀವನ’ ಎಂದು ಸೋನು Dubai ಬಗ್ಗೆ ಬರೆದುಕೊಂಡಿದ್ದರು. ನಿಜ ಜೀವನದಲ್ಲಿ ಆದಷ್ಟು ಫ್ಯಾನ್ಸಿ ಪ್ರಪಂಚ (Fancy World) ನೋಡಬೇಕು ಅಂದ್ರೆ ಅದು ದುಬೈನಲ್ಲಿ ಮಾತ್ರ ಎಂದಿದ್ದರು ಸೋನು.
Advertisement
Advertisement
ನಟಿ ಸೋನು ಗೌಡರವರು ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ಇವರ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಕೇಶ ವಿನ್ಯಾಸ ಮಾಡುವ ಮೂಲಕ ಸಕ್ರಿಯರಾಗಿದ್ದರು. ಹೀಗಾಗಿ ನಟಿ ಸೋನು ಗೌಡರವರಿಗೆ ಬಣ್ಣದ ಲೋಕದ ಸೆಳೆತ ಬಿಡಲಿಲ್ಲ. ಹೀಗಾಗಿ ಕನ್ನಡ (Kannada) ಮಾತ್ರವಲ್ಲದೇ, ತೆಲುಗು (Telugu), ತಮಿಳು (Tamil), ಮಲಯಾಳಂ (Malayalam) ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
2008 ರಲ್ಲಿ ಇಂತಿ ನಿನ್ನ ಪ್ರೀತಿಯ (Inti Ninna Preethiya) ಸಿನಿಮಾದಲ್ಲಿ ಕಾಣಿಸಿಕೊಂಡರು. ಆದಾದ ಬಳಿಕ ಪರಮೇಶಿ ಪಾನ್ ವಾಲ (Parameshi Pan Wala), ಗುಲಾಮ (Gulama) ಅನೇಕ ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರಿಯರ ಮನಸ್ಸು ಗೆದ್ದರು. ಕಿರುತೆರೆ ಲೋಕದ ಜೊತೆ ಜೊತೆಯಲಿ (Jote Joteyali) ಧಾರಾವಾಹಿಯಲ್ಲಿ ರಾಜನಂದಿನಿ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ನಟಿ ಸೋನು ಗೌಡ ಟ್ರಿಪ್ ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.