ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಕುಲ್ ಬಾಲಾಜಿ ಅವರ ನೇತೃತ್ವದಲ್ಲಿ ಮೂಡಿ ಬರುತ್ತಿದ್ದಂತಹ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು(Pyate hudgir halli lifu) ಎಂಬ ರಿಯಾಲಿಟಿ ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದ ಅಭಿಜ್ಞಾ ವಿಶ್ವನಾಥ್ (Abhijna) ತಮ್ಮ ಸಿಡುಕು ಮಾತಿನ ಮೂಲಕವೇ ಅದೆಷ್ಟೋ ಜನರ ಮನಸ್ಸನ್ನು ಗೆದ್ದಿದ್ದರು. ಅಲ್ಲದೆ ಈಗಿನ ಸಾಕಷ್ಟು ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಅವಕಾಶ ಪಡೆದು ಮಿಂಚುತ್ತಿರುವಂತಹ ನಟಿ ಅಭಿಜ್ಞಾ, ಮೂಗು ಚುಚ್ಚಿಸಿಕೊಂಡಿರುವ ವಿಡಿಯೋ ಒಂದನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಒಂದು ವಿಡಿಯೋಗೆ ಭಿನ್ನವಾದ ಪ್ರತಿಕ್ರಿಯೆ ದೊರಕುತ್ತಿದ್ದು ಈಗಲಾದರೂ ನಿಮ್ಮ ಸಿಟ್ಟು ಕಡಿಮೆಯಾಗುತ್ತದೆ, ಮದುವೆಯಾಗಲು ಹುಡುಗರು ಕ್ಯೂ ನಿಲ್ಲುತ್ತಾರೆ ಎಂದೆಲ್ಲ ಕಮೆಂಟ್ ಮಾಡುವ ಮೂಲಕ ನಟಿ ಅಭಿಜ್ಞಾ ವಿಶ್ವನಾಥ್(Abhijna Vishwanath) ಅವರ ಕಾಲು ಎಳೆಯುತ್ತಿದ್ದಾರೆ.
Advertisement
ಹೌದು ಗೆಳೆಯರೇ ಕಲರ್ಸ್ ಕನ್ನಡ ಪ್ರಚಾರವಾಗುವ ರಾಮಚಾರಿ (Ramachari) ಸೀರಿಯಲ್ ನಲ್ಲಿ ದೀಪ (Deepa) ಎಂಬ ಸಿಡುಕಿ ಪಾತ್ರದ ಮೂಲಕವೇ ಮನೆ ಮಾತಾಗಿರುವಂತಹ ಅಭಿಜ್ಞ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದಿದ್ದರು. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಅಭಿಜ್ಞಾ ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರನ್ನು ತಮ್ಮತ್ತ ಸೆಳೆದುಕೊಳ್ಳುತ್ತಿರುತ್ತಾರೆ.
Advertisement
ಸದಾ ವಿಭಿನ್ನವಾದ ಫೋಟೋಶೂಟ್ ಗಳನ್ನು ಮಾಡಿಸುತ್ತಾ ತಮ್ಮ ಅಭಿಮಾನಿಗಳೊಡನೆ ಹಂಚಿಕೊಳ್ಳುವ ಅಭಿಜ್ಞಾ ಇದೀಗ ತಮ ಮೂಗನ್ನು ಚುಚ್ಚಿಸಿಕೊಂಡು ಅದರ ವಿಡಿಯೋಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಪರಮಾತ್ಮ ಸಿನಿಮಾದ ಮೂಗುಬಟ್ಟಾಗಿ ಹುಟ್ಟಿದ್ರೆ ನಾನು ಇವಳ ಮೂತಿಲೆ ಇರಬಹುದಿತ್ತು ಎಂಬ ಹಾಡನ್ನು ಸಿಂಕ್ ಮಾಡಿ ಮೂಗು ಬಟ್ಟಾಗಿ (Mugu Bhottagi)ಎಂಬ ಕ್ಯಾಪ್ಶನ್ ಬರೆದು ಹಂಚಿಕೊಂಡಿದ್ದಾರೆ.
Advertisement
View this post on Instagram
ಸದ್ಯ ಈ ಒಂದು ವಿಡಿಯೋಗೆ ವ್ಯಾಪಕ ಪ್ರತಿಕ್ರಿಯೆ ದೊರಕುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ನಿಮ್ಮ ಅಂದವಾದ ಮುಖಕ್ಕೆ ಈಗ ಮತ್ತಷ್ಟು ಕಳೆ ಬಂದಿದೆ, ಥೇಟ್ ಲಕ್ಷ್ಮಿ ದೇವಿಯ ರೀತಿಯೇ ಕಾಣಿಸುತ್ತಿದ್ದೀರ, ವೆರಿ ಕ್ಯೂಟ್ ಎಂದಲ್ಲ ಕಮೆಂಟ್ ಮಾಡುವ ಮೂಲಕ ನಟಿ ಅಭಿಜ್ಞಾ ಅವರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.