ಕರುನಾಡ ಅಮ್ಮ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿಯವರ ಜೊತೆಗೆ ಫೋಟೋ ಕ್ಲಿಕಿಸಿಕೊಂಡ ನಟಿ ಕಾವ್ಯ ಗೌಡ, ಸುಂದರ ಕ್ಷಣಗಳು ಹೇಗಿತ್ತು ನೋಡಿ!!
ಕನ್ನಡ ಕಿರುತೆರೆ ಲೋಕದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡ ನಟಿ ರಾಧ ರಮಣ (Radha Ramana) ಮತ್ತು ಗಾಂಧಾರಿ (Gandhaari) ಖ್ಯಾತಿಯ ಕಾವ್ಯ ಗೌಡ (Kavya Gowda) ರವರು ಸದ್ಯಕ್ಕೆ ನಟನಾ ಲೋಕದಲ್ಲಿ ಸಕ್ರಿಯರಾಗಿಲ್ಲ. ನಟಿ ಕಾವ್ಯ ಗೌಡ ಈಗ ಕಿರುತೆರೆಯಿಂದ ದೂರ ಇದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಕಾವ್ಯಾ ಗೌಡರವರು ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಇದೀಗ ನಟಿ ಕಾವ್ಯಾ ಗೌಡ ಹಾಗೂ ಅವರ ತಂಗಿ ಸುಧಾ ಮೂರ್ತಿ (Sudhamurthi) ಯವರ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯ ನಟಿ ಕಾವ್ಯಾ ಗೌಡ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿಯವರ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದು, ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿಯು ಶೇರ್ ಮಾಡಿಕೊಂಡಿರುವ ಈ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿವೆ.
Advertisement
ಇತ್ತೀಚೆಗಷ್ಟೇ ರಾಧಾ ರಮಣ (Radha Ramana) ಖ್ಯಾತಿಯ ನಟಿ ಕಾವ್ಯ ಗೌಡ (Kavya Gowda) ನೂತನ ಮನೆಗೆ ಕಾಲಿಟ್ಟಿದ್ದರು . ಗೃಹ ಪ್ರವೇಶದ (House Warming) ಸಂಭ್ರಮದಲ್ಲಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದ್ದೂರಿಯಾಗಿ ಗೃಹ ಪ್ರವೇಶ ಮಾಡಿಸಿದ್ದು ಜೊತೆಗೆ ಫೋಟೋಶೂಟ್ ಮಾಡಿಸಿದ್ದಾರೆ. ಸವ್ಯಸಾಚಿ ಸೀರೆಯಲ್ಲಿ ನಟಿ ಕಾವ್ಯ ಮಿಂಚಿದ್ದರು. ಈ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
Advertisement
Advertisement
ಇನ್ನು, ಬಕಾಸುರ’ ಚಿತ್ರ ಖ್ಯಾತಿಯ ನಟಿ ಕಾವ್ಯ ಅವರು ಉದ್ಯಮಿ ಸೋಮಶೇಖರ್ (Bussiness Somashekar) ಜೊತೆ 2021ರಲ್ಲಿ ಮೇ 13ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ನಟಿ ಕಾವ್ಯಾ ಗೌಡರವರು ನಟನೆಯಿಂದ ದೂರ ಉಳಿದು ಜ್ಯುವೆಲ್ಲರಿ ಡಿಸೈನರ್ಆಗಿ ಕೆಲಸದಲ್ಲಿ ತೊಡಗಿಸಿಕೊಂಡರು. ನಟಿ ಕಾವ್ಯ ಗೌಡ ಜೀ ಕನ್ನಡ (Zee Kannada)ದಲ್ಲಿ ಪ್ರಸಾರವಾಗುತ್ತಿದ್ದ ಶುಭ ವಿವಾಹ (Shubha Vivaha) ಧಾರಾವಾಹಿಯ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟರು.
ಈ ಧಾರಾವಾಹಿ ಮೂಲಕವೇ ಫೇಮಸ್ ಆದ ನಟಿ ಕಾವ್ಯಾ ಗೌಡ ನಂತರ ಮೀರಾ ಮಾಧವ, ರಾಧಾ ರಮಣ, ಗಾಂಧಾರಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ನಟನಾ ಲೋಕದಿಂದ ದೂರ ಉಳಿದಿರುವ ನಟಿ ಕಾವ್ಯಾ ಗೌಡರವರು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.