Karnataka Times
Trending Stories, Viral News, Gossips & Everything in Kannada

50 ನೆಯ ವರ್ಷಕ್ಕೆ ತನ್ನ ರಿಯಲ್ ಬಾಡಿ ತೋರಿಸಿದ ನಟ ಕಿಚ್ಚ ಸುದೀಪ್! ಸ್ಯಾಂಡಲ್ ವುಡ್ ಗಡ ಗಡ!!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪ್ರತಿದಿನ ಒಂದಲ್ಲ ಒಂದು ವಿಶೇಷ ಮಾಹಿತಿಯಿಂದಾಗಿ ಅಭಿಮಾನಿಗಳನ್ನು ಸೆಳೆಯುತ್ತಲೇ ಇರುತ್ತಾರೆ. ಹೀಗಿರುವಾಗ ನೆನ್ನೆ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬದ ಅಂಗವಾಗಿ ನಡೆದ ಪಾರ್ಟಿಯಲ್ಲಿ ಬರೋಬ್ಬರಿ ಆರು ವರ್ಷಗಳ ನಂತರ ಕಿಚ್ಚ ಮತ್ತು ದಚ್ಚು ಒಂದೆ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು, ಇವರಿಬ್ಬರು ತಮ್ಮ ಮುನಿಸನ್ನು ಮರೆತು ಮಾತನಾಡಿರುತ್ತಾರೆ ಎಂಬ ನಿರೀಕ್ಷೆ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಗಟ್ಟಿಯಾಗಿದೆ.

ಹೀಗಿರುವಾಗ ಕಿಚ್ಚ ಸುದೀಪ್ ರಾತ್ರಿಪೂರ ಸುಮಲತಾ ಅಂಬರೀಶ್ ಅವರೊಂದಿಗೆ ಕೇಕ್ ಕತ್ತರಿಸಿ ಬರ್ತಡೆ ಸೆಲೆಬ್ರೇಶನ್ ನಲ್ಲಿ ಭಾಗಿಯಾಗಿದ್ದರು. ಅದನ್ನು ಮುಗಿಸಿ ಮನೆಗೆ ಬಂದ ತಕ್ಷಣ ಸ್ವಲ್ಪ ಸಮಯಗಳ ಕಾಲ ರೆಸ್ಟ್ ಮಾಡಿ ಮತ್ತೆ ಜಿಮ್ನಲ್ಲಿ ಕಸರತ್ತು ಮಾಡುತ್ತಾ ದೇಹ ದಂಡಿಸಿ ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Advertisement

ಕಿಚ್ಚ ತಮ್ಮ ಮುಂದಿನ ಸಿನಿಮಾದಲ್ಲಿ ರಗಡಾಗಿ ಕಾಣಿಸಿಕೊಳ್ಳಲು ಪ್ರತಿನಿತ್ಯ ತಪ್ಪದೇ ಜೀವನದಲ್ಲಿ ವರ್ಕೌಟ್ ಮಾಡುತ್ತಾ ಸಿಕ್ಸ್ ಪ್ಯಾಕ್ ಬರೆಸಿಕೊಂಡಿದ್ದಾರೆ. ಸದ್ಯ ಅದರ ಹಲವು ಚಿತ್ರಣಗಳನ್ನು ಕೊಲಾಜ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವಂತಹ ಕಿಚ್ಚ ಸುದೀಪ್ ಅವರ ಫೋಟೋಗೆ ಲೈಕ್ಸ್ ಹಾಗೂ ಕಮೆಂಟ್ಗಳ ಮಳೆಯೇ ಹರಿದು ಬರುತ್ತಿವೆ. ಅದೆಷ್ಟೋ ಸ್ಟಾರ್ ಸೆಲೆಬ್ರಿಟಿಗಳು ಖಡಕ್ ಕಿಚ್ಚನ ದೇಹಕ್ಕೆ ಕ್ಲೀನ್ ಬೋಲ್ಡ್ ಆಗಿ ಹೋಗಿದ್ದಾರೆ.

Advertisement

Advertisement

” ವರ್ಕೌಟ್ ನನ್ನ ಹೊಸ ಹ್ಯಾಪಿನೆಸ್ ಆಗಿದೆ, ಈ ಒಂದು ದಿನಚರಿ ನನ್ನನ್ನು ಶಾಂತಿಯುತನಾಗಿ ಹಾಗೂ ಕೇಂದ್ರೀಕರಿಸಿದೆ. ನನ್ನ ಮುಂದಿನ K 46 ಸಿನಿಮಾದ ಕ್ಲೈಮಾಕ್ಸ್ ಫೈಟಿಂಗ್ ಸಿಕ್ವೆನ್ಸ್ ಗೆ ಒಂದು ತಿಂಗಳು ಅಥವಾ ಅದಕ್ಕಿಂತ ಮುನ್ನ ದಿನಗಳು ಮಾತ್ರ ಬಾಕಿ ಇರುವ ಕಾರಣ ನಾನು ಇನ್ನಷ್ಟು ಕಸರತ್ತನ್ನು ಮಾಡಬೇಕಿದೆ” ಎಂದು ಬರೆದುಕೊಂಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿದ ಕೆಲವೇ ಕೆಲವು ಗಂಟೆಗಳಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಲೈಕ್ ಹಾಗೂ 10,000 ಅಧಿಕ ಕಾಮೆಂಟ್ಗಳ ಸಾಗರವೇ ಹರಿದು ಬಂದಿದ್ದು, ಕಿಚ್ಚನ ಈ ಶ್ರದ್ದೆಗೆ ಅಭಿಮಾನಿಗಳ ವತಿಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.