ಕಾಂತಾರ (Kantara) ದ ಚೆಲುವೆ ಲೀಲಾ ಅಲಿಯಾಸ್ ಸಪ್ತಮಿ ಗೌಡರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ಸಪ್ತಮಿ ಗೌಡ (Saptami Gowda) ಸಿನಿಮಾರವರು ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ಸಪ್ತಮಿ ಗೌಡರವರ ಫ್ಯಾಮಿಲಿ ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಹೌದು ಕಾಂತಾರದ ಬೆಡಗಿ ಸಪ್ತಮಿ ಗೌಡ ವರಮಹಾಲಕ್ಷ್ಮಿ ಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ (Instagram) ನಲ್ಲಿ ಸಪ್ತಮಿ ಗೌಡ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಮ್ಮ ಹಾಗೂ ತಂಗಿಯ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದು, ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ವೈಟ್ ಅಂಡ್ ಯಲ್ಲೋ ಸೀರೆಯುಟ್ಟ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸೀರೆಯಲ್ಲಿ ನಟಿಯ ಫೋಟೋ ನೋಡಿದ ಕಂಡು ಅಭಿಮಾನಿಗಳು ಫಿದಾ ಆಗಿದ್ದು, ಮೆಚ್ಚುಗೆಯ ಲೈಕ್ಸ್ ಗಳು ಬಂದಿವೆ.
Advertisement
ಕಾಂತಾರ ಸಿನಿಮಾದ ಯಶಸ್ಸು ಕಾಣುತ್ತಿದ್ದಂತೆ ನಟಿ ಸಪ್ತಮಿ ಗೌಡರಿಗೆ ಬೇಡಿಕೆ ಹೆಚ್ಚಾಗಿದ್ದು ಸಾಲು ಸಾಲು ಅವಕಾಶಗಳು ಬರುತ್ತಿದೆದೆ. ನಟ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಕಾಳಿ (Kali) ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಲ್ಲದೇ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Director Vivek Agnihotri) ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ನಟಿಸುತ್ತಿದ್ದು ಈಗಾಗಲೇ ಸಿನಿಮಾ ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ.
Advertisement
ಅದಲ್ಲದೇ, ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ದೊಡ್ಮನೆ ಕುಡಿ ಯುವ ರಾಜ್ ಕುಮಾರ್ (Yuva Rajkumar) ನಟನೆಯ ಯುವ (Yuva) ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಯುವ ರಾಜ್ ಕುಮಾರ್ಗೆ ಜೋಡಿಯಾಗಿ ನಟಿ ಸಪ್ತಮಿ ಗೌಡ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಚಿತ್ರೀಕರಣವು ಬಿರುಸಿನಿಂದ ನಡೆಯುತ್ತಿದೆ. ಈ ಹಿಂದೆಯಷ್ಟೇ ನಟ ಯುವರಾಜ್ ಕುಮಾರ್ ಅವರ ಯುವ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿರುವ ಕುರಿತು ಹೊಂಬಾಳೆ ಫಿಲಂಸ್ ಸಂಸ್ಥೆಯು ಮಾಹಿತಿಯನ್ನು ಹಂಚಿಕೊಂಡಿತ್ತು.
Advertisement
ದೊಡ್ಮನೆ ಕುಡಿಯ ಜೊತೆಗೆ ತೆರೆ ಹಂಚಿಕೊಳ್ಳುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ನಟಿ ಸಪ್ತಮಿ ಗೌಡ, ” ಯುವ ಸಿನಿಮಾ ತಂಡದೊಂದಿಗೆ ಕೆಲಸ ಮಾಡಲು ಕಾಯ್ತಿದ್ದೇನೆ. ಸಹಿ ಮಾಡಲು ತುದಿಗಾಲಲ್ಲಿ ನಿಂತಿದ್ದೇನೆ ಯುವ ರಾಜ್ ಕುಮಾರ್ ಸರ್ ಜೊತೆ ಸಿನಿಮಾದಲ್ಲಿ ನಟಿಸಲು ನನಗೆ ಖುಷಿ ಇದೆ ಎಂದ್ರು. ಅವರ ಪಕ್ಕದಲ್ಲಿ ನಾನು ಹೇಗೆ ಕಾಣಿಸಿಕೊಳ್ತೇನೆ ಎನ್ನುವ ಬಗ್ಗೆ ಕುತೂಹಲವಿತ್ತು.
ವೇಳೆ ಸಣ್ಣ ಫೋಟೋಶೂಟ್ ಕೂಡ ನಡೆದೇ ಹೋಯ್ತುಯುವ ಸಿನಿಮಾ ಬಗ್ಗೆ ಮಾತಾಡಲು ಆಫೀಸ್ಗೆ ಹೋಗಿದ್ದೆ. ಅಲ್ಲಿ ಫೋಟೋಶೂಟ್ ಮಾಡೋದಾಗಿ ಹೇಳಿದ್ರು. ನಾನು ಕೆಸಿಸಿ ಕ್ರಿಕೆಟ್ ನೋಡಲು ಹೋಗಿ ಆಗೇ ಜರ್ಸಿಯಲ್ಲಿ ಬಂದಿದ್ದೆ. ಜರ್ಸಿಯಲ್ಲೇ ಫೋಟೋಶೂಟ್ ಕೂಡ ಮಾಡಿದ್ರು” ಎಂದಿದ್ದರು. ಕಾಂತಾರದ ಬಳಿಕ ನಟಿ ಸಪ್ತಮಿ ಗೌಡರವರ ಅದೃಷ್ಟ ಖುಲಾಯಿಸಿದ್ದು, ಬ್ಯುಸಿಯಾಗಿದ್ದಾರೆ.