ಕನಸಿನ ರಾಣಿ ಮಾಲಾಶ್ರೀಯವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಸುಂದರ ಕ್ಷಣಗಳು!!
ಕನಸಿನ ರಾಣಿ ಮಾಲಾಶ್ರೀ (Malashree) ಯವರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದೂ ತನ್ನ ಕುಟುಂಬಕ್ಕೆ ಹೆಚ್ಚು ಸಮಯವನ್ನು ನೀಡುತ್ತಾರೆ. ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ದಿನ ಮಗಳು ರಾಧನಾ ರಾಮ್ (Radhana Ram) ಅವರನ್ನು ಕನ್ನಡ ಸಿನಿಮಾರಂಗಕ್ಕೆ ಲಾಂಚ್ ಮಾಡಿದ್ದರು. ಆದರೆ ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನು ತಮ್ಮ ಮನೆಯಲ್ಲಿ ಅದ್ದೂರಿಯಾಗಿ ಆಚರಿಸಿದ್ದಾರೆ.
ಹೌದು ಮನೆಯಲ್ಲಿ ಲಕ್ಷ್ಮಿಯನ್ನು ಇಟ್ಟು, ಪೂಜೆ ಮಾಡಿ ತಮ್ಮ ಮುದ್ದಾದ ಫ್ಯಾಮಿಲಿ (Family) ಜೊತೆಗೆ ಹಬ್ಬವನ್ನು ಆಚರಿಸಿದ್ದಾರೆ. ಕನಸಿನ ರಾಣಿ ಮಾಲಾಶ್ರೀಯವರ ಹಬ್ಬದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನಟಿಯ ಮನೆಯ ಹಬ್ಬದ ಸಂಭ್ರಮವನ್ನು ಕಣ್ತುಂಬಿಸಿಕೊಂಡಿದ್ದಾರೆ.
Advertisement
ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ದಿನ ದರ್ಶನ್ (Darshan) ಹಾಗೂ ರಾಧನಾ ರಾಮ್ (Radhana Ram) ಅವರು ಅವರ 56 ನೇ ಸಿನಿಮಾದ ಮುಹೂರ್ತ ದೇವಸ್ಥಾನವೊಂದರಲ್ಲಿ ನೆರವೇರಿತ್ತು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದು, ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರೂಜಿ ( Art Of Living Ravishankar Guruji) ಯವರು ಚಾಲನೆ ನೀಡುವ ಮೂಲಕ ಚಿತ್ರದ ಮುಹೂರ್ತವನ್ನು ನೆರವೇರಿಸಿ ಕೊಟ್ಟಿದ್ದರು.
Advertisement
Advertisement
ದರ್ಶನ್ ಮತ್ತು ತರುಣ್ ಸುಧೀರ್ (Tarun Sudheer) ಕಾಂಬಿನೇಷನ್ ಈ ಚಿತ್ರಕ್ಕೆ ನಾಯಕಿಯಾಗಿ ಮಾಲಾಶ್ರೀಯವರ ಮಗಳು ರಾಧಾನ ರಾಮ್ ಕಾಣಿಸಿಕೊಳ್ಳುವ ಮೂಲಕ ಕನ್ನಡ ಸಿನಿಮಾರಂಗಕ್ಕೆ ಮತ್ತೊಬ್ಬಳು ನಾಯಕಿಯಾಗಿ ಹೊರಹೊಮ್ಮಿದ್ದಳು. ವರಮಹಾಲಕ್ಷ್ಮಿ ಹಬ್ಬದ ದಿನ ಈ ಬಗ್ಗೆ ಸ್ವತಃ ಮಾಲಾಶ್ರೀ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ‘ನನ್ನ ಮುದ್ದಿನ ಮಗಳು ಇಂದು ನನಗೆ ಅಪಾರ ಪ್ರೀತಿ ಹಾಗೂ ಬದುಕು ನೀಡಿದ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ನನಗೆ ನೀಡಿದ ಪ್ರೀತಿ ಮತ್ತು ಆಶೀರ್ವಾದ ಅವಳ ಮೇಲೂ ಇರಲಿ ಎಂದು ಆಶಿಸುತ್ತೇನೆ’ ಎಂದು ಟ್ವಿಟರ್ನಲ್ಲಿ ಕನಸಿನ ರಾಣಿ ಬರೆದುಕೊಂಡಿದ್ದರು.
ಅದಲ್ಲದೇ ನಟಿ ಮಾಲಾಶ್ರೀಯವರ ಮಗಳು ರಾಧನಾ ರಾಮ್ ತಮ್ಮ ಹೆಸರನ್ನು ಆರಾಧನಾ (Aradhana) ಳಾಗಿ ಬದಲಾಯಿಸಿಕೊಂಡಿದ್ದಾರೆ.” ನಾನು, ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಮೂರು ಜನ ಚರ್ಚಿಸಿ ಆರಾಧನಾ ಎಂಬ ಹೆಸರನ್ನು ಆಯ್ಕೆ ಮಾಡಿದ್ದೇವೆ. ಈ ಹೆಸರು ಬರೀ “ಕಾಟೇರ” ಚಿತ್ರಕ್ಕೆ ಮಾತ್ರವಲ್ಲ. ಇನ್ನು ಮುಂದೆ ನನ್ನ ಮಗಳ ಹೆಸರೆ ಆರಾಧನಾ. ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು” ಎಂದಿದ್ದಾರೆ ನಟಿ ಮಾಲಾಶ್ರೀ. ನಟಿ ಮಾಲಾಶ್ರೀಯವರ ಮಗಳು ಬೆಳ್ಳಿತೆರೆ ಮೇಲೆ ಹೇಗೆ ಮಿಂಚುತ್ತಾರೆ ಎನ್ನುವ ಕಾತುರ ಫ್ಯಾನ್ಸ್ ಗಳಿಗಿದೆ.