Karnataka Times
Trending Stories, Viral News, Gossips & Everything in Kannada

ಪ್ರೀತಿಯ ಅಣ್ಣ ಡಿ ಬಾಸ್ ಜೊತೆ ತಂಗಿ ಅಶೀಕಾ ಚಂದ್ರಪ್ಪ! ಸುಂದರ ಕ್ಷಣಗಳು ಇಲ್ಲಿವೆ ನೋಡಿ!!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಬಹುದೊಡ್ಡ ಮಟ್ಟದ ಜನಪ್ರಿಯತೆ ಪಡೆದಂತಹ ನಟಿ ಆಶಿಕ ಚಂದ್ರಪ್ಪ(Ashika Chandrappa) ಅನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರ ಸಾರಥ್ಯದಲ್ಲಿ ಮೂಡಿ ಬರುವ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೂ ಸ್ಪರ್ಧಿಯಾಗಿ ಕಾಲಿಡುವ ಮೂಲಕ ತಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಂಡು ಯಶಸ್ವಿಯದರು.

ಹೀಗೆ ದೊಡ್ಮನೆಯಿಂದ ಹೊರಬಂದ ನಂತರ ಸುಂದರಿ, ದೇವಯಾನಿ, ನೀಲಿ, ರಾಧಾ ರಮಣದಂತಹ ಧಾರಾವಾಹಿಗಳಲ್ಲಿ ಅಭಿನಯಿಸುತ್ತ ಸೈ ಎನಿಸಿಕೊಂಡರು. ಅದಲ್ಲದೆ ಸಾಕಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದಂತಹ ಆಶಿಕ ಚಂದ್ರಪ್ಪ(Ashika Chandrappa) ಅವರಿಗೆ ಹಿರಿತೆರೆಯಲ್ಲಿ ಕೆಲಸ ಮಾಡುವಂತಹ ಅವಕಾಶ ದೊರಕುತ್ತದೆ.

Advertisement

ಹೀಗೆ ಸಿಕ್ಕಂತಹ ಅವಕಾಶವನ್ನು ಸದ್ದುಪಯೋಗಪಡಿಸಿಕೊಂಡಂತಹ ಇವರು ಸಾಕಷ್ಟು ಸಿನಿಮಾಗಳಲ್ಲಿಯೂ ಪೋಷಕಾ ನಟಿ, ಸಹ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕೆಲಸಗಳ ನಡುವೆ ತಮ್ಮದೇ ಆದ ಬಟ್ಟೆ ಅಂಗಡಿಯನ್ನು ಹೊಂದಿರುವ ಆಶಿಕಾ ಚಂದ್ರಪ್ಪ(Ashika Chandrappa) ಅವರು ಇನ್ಸ್ಟಾಗ್ರಾಮ್ನಲ್ಲಿಯೂ ತಮ್ಮ ಬಿಸಿನೆಸ್ ಪೇಜ್ ಒಂದನ್ನು ಕ್ರಿಯೇಟ್ ಮಾಡಿ ಅದರಲ್ಲಿ ಹೊಸ ಹೊಸ ಕಲೆಕ್ಷನ್ಗಳ ಕುರಿತು ಮಾಹಿತಿಯನ್ನು ನೀಡುತ್ತಿರುತ್ತಾರೆ.

Advertisement

Advertisement

ತಮ್ಮ ಅಮೋಘ ಅಭಿನಯ ಹಾಗೂ ಮುಗ್ಧ ಸೌಂದರ್ಯದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಈ ನಟಿ ಕಳೆದ ಕೆಲವು ದಿನಗಳ ಹಿಂದೆ ದರ್ಶನ್ ಅವರೊಂದಿಗಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಬಾರಿ ವೈರಲ್ ಆಗುತ್ತಿದ್ದು, ಅಣ್ಣ ತಂಗಿಯರಿಬ್ಬರನ್ನು ಒಂದೇ ಫ್ರೇಮ್ನಲ್ಲಿ ಕಂಡಂತಹ ಅಭಿಮಾನಿಗಳು ಮೆಚ್ಚುಗೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

ಹೌದು ಗೆಳೆಯರೇ ದರ್ಶನ ಅವರ ಚಕ್ರವರ್ತಿ (Chakravarthy) ಸಿನಿಮಾ ನಟಿಸುವಂತಹ ಅವಕಾಶ ಗಿಟ್ಟಿಸಿಕೊಂಡು, ಮಧುರವಾದ ಬಾಂಧವ್ಯವನ್ನು ಬೆಳೆಸಿಕೊಂಡಂತಹ ಆಶಿಕ ದರ್ಶನ್(Darshan) ಅವರನ್ನು ಎಲ್ಲಾ ಸ್ಥಾನದಲ್ಲಿ ಅನುಸರಿಸುತ್ತ, ಅವರಂತೆ ಉತ್ತಮವಾದ ದಾರಿಯಲ್ಲಿ ನಡೆಯಬೇಕು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳುತ್ತಿರುತ್ತಾರೆ.

Leave A Reply

Your email address will not be published.