ದಕ್ಷಿಣ ಭಾರತದ ಸೂಪರ್ ಸ್ಟಾರ್ ನಾಗಾರ್ಜುನ್ ಪುತ್ರ (Naga Chaitanya) ನಾಗಚೈತನ್ಯ ಅವರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಿರುತ್ತಾರೆ. ಈ ಹಿಂದೆ ಟಾಲಿವುಡ್ ನಟಿ ಸಮಂತಾ (Samanta) ಹಾಗೂ ನಟ ನಾಗಚೈತನ್ಯ (Nagachaitanya) ಈ ಇಬ್ಬರೂ ವೈವಾಹಿಕ ಜೀವನದಿಂದ ಬೇರೆ ಬೇರೆಯಾದರು. ಆದಾದ ಬಳಿಕ ಈ ಇಬ್ಬರೂ ಜೋಡಿಯು ವೆಬ್ ಸಿರೀಸ್ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ತಮ್ಮ್ ತಮ್ಮ ವೃತ್ತಿ ಜೀವನವನ್ನು ನೋಡಿಕೊಳ್ಳುತ್ತಿದ್ದಾರೆ.
ನಟ ನಾಗಚೈತನ್ಯ ಹಾಗೂ ಪಾರ್ವತಿ ತಿರುವೊತ್ತು ಪ್ರೀತಿ ಚಿಗುರಿದೆಯೇ?
Advertisement
ನಟ ನಾಗಚೈತನ್ಯ (Nagachaitanya) ಹಾಗೂ ನಟಿ ಪಾರ್ವತಿ ತಿರುವೋತು (Parvathi Tiruvotu) ಅವರಿಬ್ಬರ ಕಣ್ಣುಗಳು ಕಲೆತಿರುವ ವಿಡಿಯೋವೊಂದು ವೈರಲ್ ಆಗಿವೆ. ಈ ಹಿಂದೆ ನಾಗಚೈತನ್ಯ ನಟಿಸಿರುವ ಧೂತ (Dhootha) ವೆಬ್ ಸಿರೀಸ್ ಲಾಂಚ್ ಕಾರ್ಯಕ್ರಮವು ನಡೆದಿತ್ತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ನಟ ನಾಗಚೈತನ್ಯ ಹಾಗೂ ನಟಿ ಪಾರ್ವತಿ ತಿರುವೊತು ಕಾಣಿಸಿಕೊಂಡಿದ್ದರು. ಈ ವೇಳೆಯಲ್ಲಿ ಇಬ್ಬರು ಒಬ್ಬರೊನ್ನೊಬ್ಬರು ರೆಪ್ಪೆ ಮುಚ್ಚದೇನೆ ನೋಡಿಕೊಂಡಿದ್ದರು. ಕೊನೆಗೆ ವೇದಿಕೆಯ ಮೇಲೆ ಇದ್ದ ಈ ಇಬ್ಬರೂ ಹತ್ತಿರ ಬಂದು ಕೈ ಕೈ ಹಿಡಿದು ಕೊಂಡಿದ್ದರು. ಈ ವಿಡಿಯೋವೊಂದು ಈ ನಾಗಚೈತನ್ಯ ಹಾಗೂ ಪಾರ್ವತಿ ತಿರುವೊತ್ತು ನಡುವೆ ಏನಾದರೂ ಇದೆಯೇ ಎನ್ನುವ ಪ್ರಶ್ನೆ ಹುಟ್ಟಲು ಕಾರಣವಾಗಿತ್ತು.
Advertisement
23 ನೇ ಸಿನಿಮಾದಲ್ಲಿ ಬ್ಯುಸಿಯಾಗಿರುವ ಟಾಲಿವುಡ್ ನಟ ನಾಗಚೈತನ್ಯ
Advertisement
ಟಾಲಿವುಡ್ ನಟ ನಾಗಚೈತನ್ಯ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಕಸ್ಟಡಿ (Custody) ಸಿನಿಮಾದ ಬಳಿಕ ನಾಗಚೈತನ್ಯ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ (Pan India Film) ವಾಗಿರುವ ಕಾರಣ ನಾಗಚೈತನ್ಯ ಇತ್ತೀಚೆಗೆ ಆಂಧ್ರಪ್ರದೇಶ (Andhra Pradesh) ದ ಶ್ರೀಕಾಕುಳಂ ಹಳ್ಳಿ (Shreekaakulam Village) ಯೊಂದಕ್ಕೆ ಭೇಟಿ ನೀಡಿ ಅಲ್ಲಿನ ಮೀನುಗಾರರ ಭಾಷೆ, ಸಂಸ್ಕೃತಿ ಹಾಗೂ ಜೀವನ ಶೈಲಿಯ ಕುರಿತು ತಿಳಿದು ಕೊಳ್ಳುವ ಪ್ರಯತ್ನವನ್ನು ಮಾಡಿದ್ದರು. ನಟ ನಾಗಚೈತನ್ಯ ಅಭಿನಯದ 23ನೇ ಸಿನಿಮಾ ಆಗಿದ್ದು ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ಚಂದು ಮೊಂಡೇಟಿ (Chandu Mondeti) ಆಕ್ಷನ್ ಕಟ್ ಹೇಳುತ್ತಿದ್ದು, ನಾಗ ಚೈತನ್ಯರವರಿಗೂ ಈ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಯಿದೆ.