ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಿಂದ ಖ್ಯಾತಿ ಗಳಿಸಿಕೊಂಡಿರುವ ಸ್ನೇಹಾ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಸಂಜನಾ ಬುರ್ಲಿ (Sanjana Burli) ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಓದಿನ ಜೊತೆಗೆ ನಟನೆಯಲ್ಲಿ ಬ್ಯುಸಿಯಾಗಿರುವ ಸಂಜನಾ ಬುರ್ಲಿಯವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಈಗಾಗಲೇ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ವಿದೇಶದಲ್ಲಿ ಎಂಜಾಯ್ ಮಾಡಿದ್ದ ನಟಿ ಸಂಜನಾ ಬುರ್ಲಿ
Advertisement
ನಟಿ ಸಂಜನಾ ಬುರ್ಲಿ (Sanjana Burli) ಯವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ನಟಿಯ ಒಂದಲ್ಲ ಒಂದು ಪೋಸ್ಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ. ಅದಲ್ಲದೇ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು ಇದರಲ್ಲಿಯು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ನಟನೆ ಹಾಗೂ ಓದಿನ ನಡುವೆ ಬಿಡುವು ಮಾಡಿಕೊಂಡು ಮಾಲ್ಡೀವ್ಸ್ (Maldives) ಪ್ರವಾಸಕ್ಕೆ ತೆರಳಿದ್ದರು. ಈ ವೇಳೆಯಲ್ಲಿ ಸಮುದ್ರ ತೀರದಲ್ಲಿ ವಿವಿಧ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದ ಬೆಡಗಿಯು ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ನಟಿ ಸಂಜನಾ ಬುರ್ಲಿಯವರು ಈ ಫೋಟೋಗಳಲ್ಲಿ ಸ್ಟೈಲಿಶ್ ಲುಕ್ ನಲ್ಲಿ ಗಮನ ಸೆಳೆದಿದ್ದು, ನಟಿಯ ಈ ಫೋಟೋಗೆ ಒಂಬತ್ತು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
Advertisement
View this post on Instagram
Advertisement
ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿ ಈ ನಟಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿಯವರು , ಇಂಜಿನಿಯರಿಂಗ್ (Engineering) ಓದುತ್ತಿದ್ದಾರೆ.ಓದು ಹಾಗೂ ನಟನೆ ಈ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿರುವ ಸಂಜನಾ ಬುರ್ಲಿಯವರಿಗೆ ಬೆಳ್ಳಿತೆರೆಯಲ್ಲಿ ಅವಕಾಶಗಳು ಬರುತ್ತಿದೆ. ಹಾಗೇ ‘ವೀಕೆಂಡ್’ (Weekend) ‘ಛೂ ಮಂತ್ರಕಾಳಿ’ (Choomantrakali), ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ (Ramana Searching Ramana Missing), ನಾನ್ ವೆಜ್ (Non Veg ) ಈ ಸಿನಿಮಾಗಳಲ್ಲಿ ನಟಿಸಿದ್ದು, ಈ ಎಲ್ಲಾ ಸಿನಿಮಾಗಳು ತೆರೆ ಕಾಣಲಿದೆ.
View this post on Instagram