ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜಿ ಕ್ವೀನ್ ಎಂದೇ ಪ್ರಖ್ಯಾತಿ ಪಡೆದಿರುವ ನಟಿ ರಕ್ಷಿತಾ (Rakshitaa) ಗೆ ಎಲ್ಲರಿಗೂ ಕೂಡ ಚಿರಪರಿಚಿತರು. ಚಂದನವನದ ನಟಿ ರಕ್ಷಿತಾ ಪ್ರೇಮ್ ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದವರು. ಕನ್ನಡ (Kannada) ಮಾತ್ರವಲ್ಲದೇ ತಮಿಳು (Tamil) ಮತ್ತು ತೆಲುಗು (Telug) ಸಿನಿಮಾಗಳಲ್ಲಿ ನಟಿಸಿದವರು. ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರದಲ್ಲಿ ನಟಿಯಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ರಕ್ಷಿತಾ ಪ್ರೇಮ್ ಅವರು ನಿರ್ಮಾಪಕಿ (Producer) ಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡ ಕಿರುತೆರೆಯ ರಿಯಾಲಿಟಿ ಶೋ (Reality Show) ಗಳಲ್ಲಿ ತೀರ್ಪುಗಾರರಾಗಿಯು ಸಕ್ರಿಯರಾಗಿದ್ದಾರೆ.
ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ರವರ ಮದುವೆಯ ವಿಡಿಯೋ ವೈರಲ್
Advertisement
ಸ್ಯಾಂಡಲ್ ವುಡ್ ನಟಿ ರಕ್ಷಿತಾರವರು ನಿರ್ದೇಶಕ ಪ್ರೇಮ್ (Director Prem) ಅವರನ್ನು ಪ್ರೀತಿಸಿ ಮದುವೆಯಾದವರು. ಆದರೆ ಇದೀಗ ನಟಿ ರಕ್ಷಿತಾ ಪ್ರೇಮ್ ಅವರ ಮದುವೆಯ ಸುಂದರ ಕ್ಷಣದ ವಿಡಿಯೋ (Marriage Video) ವೊಂದು ವೈರಲ್ ಆಗಿವೆ. ಈ ವಿಡಿಯೋದಲ್ಲಿ ನಟಿ ರಕ್ಷಿತಾ ಪ್ರೇಮ್ ಅವರ ಮದುವೆಗೆ ಸ್ಯಾಂಡಲ್ ವುಡ್ ನಟ ನಟಿಯರು ಆಗಮಿಸಿರುವುದನ್ನು ಕಾಣಬಹುದು.
Advertisement
ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರ ಪ್ರೀತಿ ಚಿಗುರಿದ್ದು ಹೇಗೆ?
ಧಮ್(Dhum) ಸಿನಿಮಾದ ಡಬ್ಬಿಂಗ್ ಸಮಯದಲ್ಲಿ ರಾಮ್ ಪ್ರಸಾದ್ ಅವರ ಆಫೀಸ್ ನಲ್ಲಿ ರಕ್ಷಿತಾ ಅವರನ್ನು ಪ್ರೇಮ್ (Prem) ಅವರು ಮೊದಲ ಬಾರಿಗೆ ಭೇಟಿಯಾದರು. ಮೊದಲ ಮಾತುಕತೆಯಲ್ಲಿ ಪ್ರೇಮ್ ಅವರು ರಕ್ಷಿತಾರವರಿಗೆ ಇಷ್ಟವಾಗಿ ಬಿಟ್ಟಿದ್ದರಂತೆ. ಹೀಗಾಗಿ ಒಂದು ದಿನ ರಕ್ಷಿತಾರವರು ಜೋಗಿ ಪ್ರೇಮ್ ಅವರಿಗೆ ಒಂದು ದಿನ ಕರೆ ಮಾಡಿದ್ದರಂತೆ. ಕರೆ ಮಾಡಿದ ವೇಳೆಯಲ್ಲಿ ರಕ್ಷಿತಾರವರೇ ಪ್ರೇಮ್ ಅವರಿಗೆ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡು ಬಿಟ್ಟಿದ್ದರಂತೆ. ಈ ವೇಳೆಯಲ್ಲಿ ನೀವು ನನ್ನ ಪ್ರಪೋಸ್ ಅನ್ನು ಒಪ್ಪಲೇಬೇಕೆಂದೇನೂ ಇಲ್ಲ ಎಂಬುದಾಗಿ ಖಡಖಂಡಿತವಾಗಿ ಹೇಳಿ ಬಿಟ್ಟಿದ್ದರಂತೆ. ಅದಕ್ಕೆ ಹಾಗಿಲ್ಲ ನೀವು ಬೇಸರ ಪಡ್ಕೊಬೇಡಿ ನನಗೆ ಆತರ ಇಲ್ಲ ಎಂಬುದಾಗಿ ಹೇಳಿ ಪ್ರೇಮ್ (Prem) ಅವರು ಫೋನ್ ಇಟ್ಟುಬಿಟ್ಟಿದ್ದರಂತೆ. ಲ್ ನಂತರದಲ್ಲಿ ಪ್ರೇಮ್ ಅವರೇ ಮತ್ತೆ ರಕ್ಷಿತಾ ಅವರಿಗೆ ಕರೆ ಮಾಡಿ ನಮ್ಮದು ಹಳ್ಳಿಯಿಂದ ಬಂದ ಕುಟುಂಬ ನಮ್ಮ ಮನೆಯಲ್ಲಿ ಯಾರಿಗೂ ಇಂಗ್ಲೀಷ್ ಬರುವುದಿಲ್ಲ ಎಂಬುದಾಗಿ ಹೇಳಿದ್ದು, ಎಲ್ಲಾ ತಪ್ಪು ಒಪ್ಪುಗಳನ್ನು ಒಪ್ಪಿಕೊಂಡು ಮನೆಯವರನ್ನು ಒಪ್ಪಿಸಿ ಮದುವೆಯಾದರು.
Advertisement