ಕನ್ನಡ ಕಿರುತೆರೆ ಲೋಕದಲ್ಲಿ ಸಖತ್ ಬ್ಯುಸಿ ನಟರಲ್ಲಿ ಒಬ್ಬರಾಗಿರುವ ಚಂದನ್ ಕುಮಾರ್ (Chandan Kumar). ಬಣ್ಣದ ಬದುಕು ಹಾಗೂ ಉದ್ಯಮ (Business) ಈ ಎರಡನ್ನು ಕೂಡ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿರುವ ಚಂದನ್ ಕುಮಾರ್ ದಂಪತಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ.
ಫ್ಯಾನ್ಸ್ ಗಳ ಜೊತೆಗೆ ಇರುವ ನಟ ಚಂದನ್ ಕುಮಾರ್ ವಿಡಿಯೋ ವೈರಲ್
Advertisement
ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ನಟ ಚಂದನ್ ಕುಮಾರ್ (Chandan Kumar) ಅವರು ಸದಾ ಸುದ್ದಿಯಲ್ಲಿರುತ್ತಾರೆ. ಅದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟ ಚಂದನ್ ಕುಮಾರ್ ಅವರು ಆಗಾಗ ಪತ್ನಿ ಜೊತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ತಮ್ಮ ಇನ್ಸ್ಟಾಗ್ರಾಮ್ (Instagram) ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡು, ಥಾಂಕ್ ಯೂ ಸ್ನೇಹನ್ ಗೌಡ (Snehan Gowda) ಹಾಗೂ ಪ್ರಮೋದ್ ಗೌಡ (Pramod Gowda) ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಟ ಚಂದನ್ ಗೌಡ ದಂಪತಿಗಳು ರವರು ತಮ್ಮ ಅಭಿಮಾನಿಗಳನ್ನು ಭೇಟಿಯಾಗಿದ್ದು, ಹೂ ಬೊಕ್ಕೆ ನೀಡಿ ಈ ದಂಪತಿಗಳನ್ನು ಸ್ವಾಗತಿಸಿದ್ದಾರೆ. ಈ ವಿಡಿಯೋದಲ್ಲಿ ನಟ ಚಂದನ್ ಅವರು ಕೇಕ್ ಕತ್ತರಿಸಿ ಅಲ್ಲಿದ್ದವರಿಗೆ ತಿನ್ನಿಸಿದ್ದಾರೆ. ನಟ ಚಂದನ್ ಕುಮಾರ್ ಶೇರ್ ಮಾಡಿಕೊಂಡಿರುವ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿವೆ.
Advertisement
View this post on Instagram
Advertisement
ಬ್ರೋ ಗೌಡ ಬಗ್ಗೆ ಹಾಡಿಹೊಗಳಿದ್ದ ನಟ ಚಂದನ್
ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಅವರು ಡಾ. ಬ್ರೋ (Dr.Bro) ಅವರ ಫಾಲ್ಲೋರ್ಸ್ ಆಗಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಡಾ ಬ್ರೋ ಬಗ್ಗೆ ಬರೆದುಕೊಂಡಿದ್ದರು. ಡಾ ಬ್ರೋನ ಒಂದು ಫೋಟೊವನ್ನು ಹಂಚಿಕೊಂಡಿರುವ ಚಂದನ್ ಕುಮಾರ್ “ನೀವು ಅತ್ಯುತ್ತಮ. ನಿಮ್ಮ ಪಯಣಕ್ಕೆ ಆಲ್ ದ ಬೆಸ್ಟ್. ಯಾರು ಏನೇ ಹೇಳಲಿ.. ನೀನು ಸಾಧಕ. ನನ್ನ ಕಡೆಯಿಂದ ಬೆಸ್ಟ್ ವಿಶಸ್. ನಮ್ಮ ಅಮ್ಮ ಅಜ್ಜಿಗೆ ನೀನು ಯಾರು ಅಂತ ಗೊತ್ತಿದೆ. ನಮ್ಮಿಬ್ಬರಿಗೂ ಪರಿಚಯವಿಲ್ಲ ಆದರೆ ನಿನ್ನ ವಿಡಿಯೊ, ಪ್ರಾಮಾಣಿಕತೆ, ನೈಜತೆ, ತರಲೆ ಹಾಗೂ ಕೊಂಕುನುಡಿಗಳು ನನಗೆ ಸಿಕ್ಕಾಪಟ್ಟೆ ಇಷ್ಟ” ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೊಂದು ಎಲ್ಲರ ಗಮನ ಸೆಳೆದಿತ್ತು.