ಕನ್ನಡ ಸಿನಿಮಾರಂಗದಲ್ಲಿ ತಮ್ಮ ಗ್ಲಾಮರಸ್ ಲುಕ್ (Glamours Look) ನಿಂದಲೇ ಗಮನ ಸೆಳೆಯುವ ನಟಿಯೆಂದರೆ ಅದುವೇ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi). ವೀರ ಮದಕರಿ (Veera Madakari) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟ ನಟಿ ರಾಗಿಣಿ ದ್ವಿವೇದಿಯವರು ಈಗಾಗಲೇ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಳೆದ ಕೆಲವು ವರ್ಷಗಳ ಹಿಂದೆ ನಟಿ ರಾಗಿಣಿ ದ್ವಿವೇದಿಯವರು ಡ್ರಗ್ಸ್ ಪ್ರಕರಣದಲ್ಲಿ ದೊಡ್ಡ ಮಟ್ಟಿಗೆ ಸುದ್ದಿಯಾಗಿದ್ದರು. ಆದರೆ ಇದೀಗ ಕಹಿ ಘಟನೆಗಳನ್ನು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದು ಸಾಲು ಸಾಲು ಸಿನಿಮಾ ಗಳಲ್ಲಿ ಬ್ಯುಸಿಯಾಗಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಬಿರಿಯಾನಿ ಸವಿದಿದ್ದು ಹೀಗೆ?
Advertisement
ನಟಿ ರಾಗಿಣಿ ದ್ವಿವೇದಿ (Ragini Dwivedi) ಯವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ನಟಿಯ ಡಾನ್ಸ್ ವಿಡಿಯೋಗಳು ಹಾಗೂ ಫೋಟೋ ಶೂಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ನೆಟ್ಟಿಗರ ನಿದ್ದೆ ಕದಿಯುತ್ತಾರೆ. ಬಿಡುವು ಸಿಕ್ಕಾಗಲೆಲ್ಲಾ ಫೋಟೋ ಶೂಟ್ ಮಾಡುತ್ತಾ ಆಕ್ಟಿವ್ ಆಗಿರುವ ನಟಿಯು ಇತ್ತೀಚೆಗಷ್ಟೇ ಬಿರಿಯಾನಿ ಸವಿದಿದ್ದರು.
Advertisement
View this post on Instagram
Advertisement
ರೆಸ್ಟೋರೆಂಟ್ (Restorent) ಒಂದರಲ್ಲಿ ಬಿರಿಯಾನಿ ತಿನ್ನುತ್ತಾ ಕೆಜಿಎಫ್ 2 (KGF 2) ಸಿನಿಮಾದ ಡೈಲಾಗ್ ಟೋನ್ ನಲ್ಲಿಯೇ ತಮ್ಮ ಬಿರಿಯಾನಿ ಡೈಲಾಗ್ ಹೇಳಿದ್ದರು. “ಬಿರಿಯಾನಿ ಬಿರಿಯಾನಿ ಬಿರಿಯಾನಿ ಐ ಡೋಂಟ್ ಲೈಕ್ ಇಟ್, ಐ ಅವಾಯ್ಡ್, ಬಟ್ ಬಿರಿಯಾನಿ ಲೈಕ್ಸ್ ಮಿ, ಐ ಕಾಂಟ್ ಅವಾಯ್ಡ್ ಎಂದು ಬಿರಿಯಾನಿ ಸವಿದಿದ್ದರು. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದ ನಟಿಯ ಈ ವಿಡಿಯೋಗೆ ನೆಟ್ಟಿಗರು ವಿಡಿಯೋ ನೋಡಿ ವಾವ್ ಎಂದಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಗಳು ಹರಿದು ಬಂದಿತ್ತು.