ಸ್ಯಾಂಡಲ್ ವುಡ್ ನಟಿ ನಿಖಿತಾ ತುಕ್ರಾಲ್ (Nikhitha Tukral) ಅವರು ಎಲ್ಲರಿಗೂ ಕೂಡ ಚಿರಪರಿಚಿತರು. ಸ್ಯಾಂಡಲ್‌ವುಡ್‌ನಲ್ಲಿ ಪ್ರತಿಯೊಂದು ಸ್ಟಾರ್ ಹೀರೋಗಳ ಜೊತೆ ತೆರೆಹಂಚಿಕೊಳ್ಳುವ ಮೂಲಕ ಟಾಪ್ನಲ್ಲಿದ್ದ ನಟಿಯೇ ಈ ನಿಖಿತಾ. ಅವರಿಗೆ ಬಹಳ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ನಟಿಗೆ ಬಾರಿ ಬೇಡಿಕೆಯಿತ್ತು. ಕನ್ನಡ (Kannada) ಸಿನಿಮಾ ಮಾತ್ರವಲ್ಲದೇ ತಮಿಳು (Tamil) ಹಾಗೂ ತೆಲುಗು (Telug) ಸಿನಿಮಾಗಳಲ್ಲೂ ನಟಿಸಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
Advertisement
ಪತಿ ಹಾಗೂ ಮಗಳ ಜೊತೆಗೆ ನಟಿ ನಿಖಿತಾ ತುಕ್ರಾಲ್
Advertisement
ನಟಿ ನಿಖಿತಾ ತುಕ್ರಾಲ್ (Nikhitha Tukral) ಅವರು 2017 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕ ಅವರು ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದರು. ಸಾಂಸರಿಕ ಜೀವನದಲ್ಲಿ ಬ್ಯುಸಿಯಾಗಿ ಇವರು, ಮದುವೆಯ ಬಳಿಕ ಅವರು ಮುಂಬೈನಲ್ಲೇ ಸೆಟ್ಲ್ ಆದರು. ನಟನಾ ಬದುಕಿನಿಂದ ದೂರ ಉಳಿದಿದ್ದರೂ ಕೂಡ ಸೋಶಿಯಲ್ ಮೀಡಿಯಾ (Social Media) ದಲ್ಲಿ ಆಕ್ಟಿವ್ ಆಗಿರುತ್ತಾರೆ.
Advertisement
ಆಗಾಗ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುವ ನಟಿ ನಿಖಿತಾರವರ ಮುದ್ದಾದ ಫ್ಯಾಮಿಲಿ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ನಟಿ ನಿಖಿತಾರವರು ಪತಿ ಹಾಗೂ ಮಗಳ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ನಟಿಯ ಫ್ಯಾಮಿಲಿಯ ಅಪರೂಪದ ಫೋಟೋಗೆ ನೆಟ್ಟಿಗರಿಂದ ಲೈಕ್ಸ್ ಗಳು ಬಂದಿವೆ.