Karnataka Times
Trending Stories, Viral News, Gossips & Everything in Kannada

ನಾಗಿಣಿ 2 ಖ್ಯಾತಿಯ ನಟಿ ನಮೃತಾ ಹೊಸ ಮನೆಯ ಗೃಹಪ್ರವೇಶ ಹೇಗಿತ್ತು ಗೊತ್ತಾ?

ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ನಮೃತಾ ಗೌಡ (Namrutha Gowda) ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ನಟಿ ನಮ್ರತಾ ಆಕಾಶ ದೀಪ (Akasha Deepa) ಧಾರವಾಹಿ ಮೂಲಕ ನಟನೆಯನ್ನು ಶುರು ಮಾಡಿದರು. ತದನಂತರದಲ್ಲಿ ಕಿರುತೆರೆಯಲ್ಲಿ ಪುಟ್ಟ ಗೌರಿ ಮದುವೆ (Putagowri Maduve), ನಾಗಿಣಿ 2 (Nagini 2) ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದಾರೆ.

ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿ ನಟಿ ನಮೃತಾ

Advertisement

ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ನಮೃತಾ (Namratha) ಅವರು ಆಗಾಗ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ತನ್ನ ಆಸೆಯಂತೆ ತಾನೇ ಹೊಸ ಮನೆ ಕಟ್ಟಿದ್ದು ಅದರ ಗೃಹ ಪ್ರವೇಶ ಮಾಡಿದ್ದರು. ತಮ್ಮ ಹೊಸ ಮನೆಯ ಗೃಹಪ್ರವೇಶದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ನಟಿಯ ಮನೆಯ ಗೃಹಪ್ರವೇಶ (House Warming Ceremony) ದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Advertisement

ಅದಲ್ಲದೇ ತುಂಬು ಕುಟುಂಬದಲ್ಲಿ ಬೆಳೆದ ನಮೃತಾರವರು ಅನೇಕರ ಜನರಿಂದ ಚುಚ್ಚು ಮಾತನ್ನು ಕೇಳಿದ್ದಾರೆ. ಮನೆಯ ಸದಸ್ಯರೇ ನಮೃತಾ ಅವರ ತಂದೆ ತಾಯಿಯನ್ನು ಕೀಳಾಗಿ ನೋಡಿದ್ದಾರೆ. ಈ ವಿಷಯ ಮಗಳಿಗೆ ಗೊತ್ತಾಗಬಾರದು ಎಂದು ಅವಳನ್ನು ಡ್ಯಾನ್ದ್, ಸಂಗೀತ ಮುಂತಾದ ಕ್ಲಾಸ್ ಗಳಿಗೆ ಸೇರಿದ್ದರು. ನಮೃತಾ ಅವರು ನಟನಾ ಕ್ಷೇತ್ರಕ್ಕೆ ಬಂದ ಮೇಲಂತೂ ತುಂಬಾ ಕೆಟ್ಟದಾಗಿ ಮಾತನಾಡುವುದುಹೆಚ್ಚಾಯಿತು. ಅವರ ಡ್ರೆಸ್ಸಿಂಗ್ ಸ್ಟೈಲ್ ನೋಡಿ‌ ನಡತೆ ಗೆಟ್ಟವಳು ಎನ್ನುತ್ತಿದ್ದರಂತೆ. ಹೀಗಾಹಗಿ ತಂದೆ ತಾಯಿಯನ್ನು ತುಂಬು ಕುಟುಂಬದಿಂದ ಹೊರ ತಂದು ಬೇರೆ ಬಾಡಿಗೆ ಮನೆಯಲ್ಲಿ ಕೂರಿಸಿದ್ದರು.‌ ತಾನು ಕಾಲ‌ಮೇಲೆ ನಿಂತು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ಳಬೇಕು, ಒಂದು ಹೊಸ ಮನೆ ಕಟ್ಟಬೇಕು ಎಂಬ ಆಸೆಯಿತ್ತು. ಆದರಂತೆ ಹೊಸ ಮನೆಯನ್ನು ಕಟ್ಟಿಸಿ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾರೆ.

Advertisement

Leave A Reply

Your email address will not be published.