ಕಿರುತೆರೆ ಲೋಕದಲ್ಲಿ ಗೀತಾ ಧಾರಾವಾಹಿ (Geetha Serial) ಯ ಮೂಲಕ ಖ್ಯಾತಿ ಗಳಿಸಿರುವ ನಟಿ ಭವ್ಯಾ ಗೌಡ (Bhavya Gowda). ಪ್ರಾರಂಭದಲ್ಲಿ ಭವ್ಯಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಆಗಾಗ ರೀಲ್ಸ್ (Reels) ಮಾಡುತ್ತಿದ್ದರು. ಆದರೆ ನಟಿಯ ಅಪ್ಪ ಅಮ್ಮನಿಗೆ ತಮ್ಮ ಮಗಳೂ ಸಹ ನಟಿಯಾಗಬೇಕು ಎನ್ನುವ ಕನಸಿತ್ತು. ಅದಕ್ಕೆ ತಕ್ಕಂತೆ ಕಿರುತೆರೆಯಲ್ಲಿ ನಟಿಸುವ ಅವಕಾಶವು ಸಿಕ್ಕಿತು. ಆದರೆ ಇದೀಗ ಗೀತಾ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿದ್ದು, ಬೆಳ್ಳಿತೆರೆಯ ಸಿನಿಮಾದಲ್ಲಿ ನಟಿಸಿದ್ದಾರೆ.
ಮಾಡರ್ನ್ ಲುಕ್ ನಲ್ಲಿ ನಟಿ ಭವ್ಯಾ ಗೌಡ ಫೋಟೋಶೂಟ್
ನಟಿ ಭವ್ಯಾ ಗೌಡ (Bhavya Gowda) ರವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಪ್ರತಿದಿನ ತಮ್ಮ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡುತ್ತಾ ನೆಟ್ಟಿಜನ್ಸ್ ಜೊತೆಗೆ ಸಂಪರ್ಕದಲ್ಲಿರುತ್ತಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆ (Instagram Account) ಯಲ್ಲಿ ನಟಿ ಮಾಡರ್ನ್ ಫೋಟೋಗಳನ್ನು ಶೇರ್ ಮಾಡಿಕೊಂಡು ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ.
Advertisement
View this post on Instagram
Advertisement
Advertisement
ಆದರೆ ಇದೀಗ ನಟಿ ಭವ್ಯಾ ಗೌಡ ಅವರು ಮಾಡರ್ನ್ ಲುಕ್ (Modern Look) ನಲ್ಲಿ ಕಾಣಿಸಿಕೊಂಡಿದ್ದು ಭರ್ಜರಿಯಾಗಿರುವ ಒಂದು ಫೋಟೋಶೂಟ್ (Photoshoot) ಮಾಡಿಸಿಕೊಂಡಿದ್ದಾರೆ. ಜೀನ್ಸ್ ಗೆ ಬಣ್ಣದ ಪ್ರಿಂಟ್ ಇರುವ ಟಾಪ್ ಧರಿಸಿದ್ದು, ಇನ್ಶರ್ಟ್ ಮಾಡಿಕೊಂಡಿದ್ದಾರೆ. ಇನ್ನು ನಟಿ ಕೂದಲನ್ನು ಫ್ರಿಯಾಗಿ ಬಿಟ್ಟಿದ್ದು, ಕ್ಯಾಮೆರಾಗೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ನಟಿಯ ಫೋಟೋಗಳಿಗೆ ಅಭಿಮಾನಿಗಳಿಂದ 27 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಫ್ಯಾನ್ಸ್ ಗಳು ಈ ಫೋಟೋವನ್ನು ಮೆಚ್ಚಿಕೊಂಡಿದ್ದಾರೆ.
View this post on Instagram
ಜೊತೆಯಾಗಿ ಸುತ್ತಾಡುತ್ತಿರುವ ಗೀತಾ ಸೀರಿಯಲ್ ಜೋಡಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವುದು ಭವ್ಯಾ ಗೌಡ (Bhavya Gowda) ಮತ್ತು ಧನುಷ್ ಗೌಡ (Dhanush Gowda) ಫೋಟೋ ವೈರಲ್ ಆಗಿದೆ. ಇವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವುದು ನೆಟ್ಟಿಗರ ವಾದ. ಆದರೆ ಭವ್ಯಾ ಗೌಡ ಮತ್ತು ಧನುಷ್ ಗೌಡ ಇಬ್ಬರೂ ಕೂಡ ನಾವಿಬ್ಬರೂ ಸ್ನೇಹಿತರಷ್ಟೇ ಎಂದು ಹೇಳಿಕೊಳ್ಳುತ್ತಲೇ ಬರುತ್ತಿದೆ. ನಟಿ ಭವ್ಯಾ ಮತ್ತು ನಟ ಧನುಷ್ ಚಿತ್ರೀಕರಣದ ನಂತರ ಹೊರಗಡೆ ಸುತ್ತಾಡಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಮಾತ್ರ ಇಷ್ಟೊಂದು ಡವ್ ಮಾಡಬೇಡಿ ಎಲ್ಲರ ಎದುರು ನಾವು ಸಿಂಗಲ್ ಎಂದು ಸುಳ್ಳು ಹೇಳುವುದು ಯಾಕೆ? ಪ್ರೀತಿ ಇದ್ದರೆ ಒಪ್ಪಿಕೊಳ್ಳಿ ಎಂದರೆ, ಎನ್ನು ಕೆಲವರು ಇನ್ನೂ ಕೆಲವರು ಇಲ್ಲ ಇಲ್ಲ ಈ ಜೋಡಿನೇ ಸೂಪರ್ ಎಂದು ಹೇಳಿದ್ದಾರೆ.