ಚಂದನವನದ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಯಾವುದೇ ಸಿನಿಮಾವನ್ನು ಒಪ್ಪಿಕೊಳ್ಳದೇ ಇತ್ತ ಯಶ್ ಪತ್ನಿ ಹಾಗೂ ಮಕ್ಕಳು ಎಂದು ವೈಯುಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಚಾಪ್ಟರ್ 2 (KGF Chapter2) ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಎಂದು ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.
ಟಾಲಿವುಡ್ ನಟಿ ರಮ್ಯಾ ಕೃಷ್ಣನ್ ಜೊತೆಗೆ ರಾಕಿ ಭಾಯ್ ಚಿಂದಿ ಡಾನ್ಸ್
Advertisement
ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಸದ್ಯಕ್ಕೆ ವೈಯುಕ್ತಿಕ ಬದುಕು ಹಾಗೂ ಇನ್ನಿತ್ತರ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಸೆಲೆಬ್ರಿಟಿಗಳ ಮನೆಯ ಮದುವೆ ಕಾರ್ಯಕ್ರಮದಲ್ಲಿ ಯಶ್ ಕಾಣಿಸಿಕೊಳ್ಳುವುದಿದೆ. ಈ ಹಿಂದೆಯಷ್ಟೇ ಅಭಿಷೇಕ್ ಅಂಬರೀಷ್ (Abhishek Ambarish) ಹಾಗೂ ಅವಿವಾ ಬಿದ್ದಪ್ಪ (Aviva Biddappa) ರವರ ಆರತಕ್ಷತೆ ಕಾರ್ಯಕ್ರಮದ ನಂತರ ಅವಿವಾ ಬಿದ್ದಪ್ಪ ಕುಟುಂಬದವರು ಆಪ್ತರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್ (Banglore Private Hotel) ನಲ್ಲಿ ಅದ್ಧೂರಿ ಪಾರ್ಟಿ ಆಯೋಜಿಸಿದ್ದರು.
Advertisement
View this post on Instagram
Advertisement
ಈ ಸಂಗೀತ್ ಪಾರ್ಟಿ ಕಾರ್ಯಕ್ರಮ (Sangeeth Party Function) ಕ್ಕೆ ಪರಭಾಷೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಸಂಗೀತ್ ಪಾರ್ಟಿಗೆ ಟಾಲಿವುಡ್‌ನಿಂದ ಜಯಪ್ರದ (Jayaprada), ರಮ್ಯಕೃಷ್ಣನ್ (Ramya Krishanan) ಸೇರಿ ಅನೇಕ ನಟ, ನಟಿಯರು ಆಗಮಿಸಿ ಸಖತ್ ಎಂಜಾಯ್ ಮಾಡಿದ್ದರು. ಈ ಸಂಗೀತ್ ಪಾರ್ಟಿಯಲ್ಲಿ ನಟ ಯಶ್ ಅವರು ನಟಿ ರಮ್ಯಾ ಕೃಷ್ಣನ್ ಅವರ ಜೊತೆಗೆ ಅಣ್ತಮ್ಮ ಹಾಡಿಗೆ ಭರ್ಜರಿ ಡಾನ್ಸ್ ಮಾಡಿದ್ದರು. ಈ ವಿಡಿಯೋದಲ್ಲಿ ಯಶ್ ಬ್ಲಾಕ್ ಕುರ್ತಾ ಸೆಟ್ ಧರಿಸಿದ್ದರೆ, ಟಾಲಿವುಡ್ ನಟಿ ರಮ್ಯಾ ಕೃಷ್ಣನ್ ಅವರು ಹಸಿರು ಸೀರೆ, ಅದಕ್ಕೆ ಒಪ್ಪುವ ಬ್ಲಾಕ್ ಬ್ಲೌಸ್ ಧರಿಸಿ ಸುಂದರವಾಗಿ ಕಾಣಿಸಿಕೊಂಡಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರು ನಟಿ ರಮ್ಯಾ ಕೃಷ್ಣನ್ ರವರ ಡಾನ್ಸ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದರು.