ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಅನುಷ್ಕಾ ಶೆಟ್ಟಿ (Anushka Shetty) ರವರಿಗೆ ಭಾರಿ ಬೇಡಿಕೆಯಿದೆ. ಮಂಗಳೂರಿನ ಬೆಡಗಿ ಅನುಷ್ಕಾ ಶೆಟ್ಟಿ, ಕಳೆದ 15 ವರ್ಷಗಳಿಂದ ದಕ್ಷಿಣ ಭಾರತದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಬಾಹುಬಲಿ (Bahubali) ಚಿತ್ರದಲ್ಲಿ ದೇವಸೇನಾ ಪಾತ್ರ ಮಾಡಿದ ಮೇಲಂತೂ ಅನುಷ್ಕಾ ಶೆಟ್ಟಿಯವರ ಫ್ಯಾನ್ಸ್ ಬಳಗವು ಹೆಚ್ಚಾಯಿತು. ತೆಲುಗು ಚಿತ್ರರಂಗವನ್ನು (Tollywood) ದಶಕಗಳ ಕಾಲ ಆಳಿದ ನಟಿ ಅನುಷ್ಕಾ ಶೆಟ್ಟಿ ತಮಿಳು ಹಾಗೂ ಮಲಯಾಳಂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.
Advertisement
ಬಾಹುಬಲಿ ಸಿನಿಮಾದ ಬಳಿಕ ದೂರವಾದ ನಟಿ ಅನುಷ್ಕಾ ಶೆಟ್ಟಿ?
Advertisement
ಖ್ಯಾತ ನಟಿ ಅನುಷ್ಕಾ ಶೆಟ್ಟಿಯವರು ಬಾಹುಬಲಿ (Bahubali) ಚಿತ್ರದ ಬಳಿಕ ಅಚಾನಕ್ಕಾಗಿ ದೂರವಾಗಿ ಬಿಟ್ಟರು. ಆದರೆ ಇದೀಗ ನಟಿ ಅನುಷ್ಕಾ ಶೆಟ್ಟಿ (Anushka Shetty) ಯವರು ಕಾರಣವನ್ನು ರಿವೀಲ್ ಮಾಡಿದ್ದು, ಬಾಹುಬಲಿ’ ಮಾಡುವಾಗಲೇ ನಾನು ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಮಾಡಿದ್ದೆ. ಆ ಸಮಯದಲ್ಲಿ ನನಗೆ ಬ್ರೇಕ್ ಎಂಬುದು ಬಹಳ ಅವಶ್ಯಕವಾಗಿತ್ತು. ‘ಬಾಹುಬಲಿ’ ಸಿನಿಮಾ ಮುಗಿದ ಬಳಿಕ ಮುಂಚೆಯೇ ಒಪ್ಪಂದ ಆಗಿದ್ದ ‘ಭಾಗಮತಿ’ ಸಿನಿಮಾದ ಕೆಲಸ ಮುಗಿಸಿ ನಾನು ಬ್ರೇಕ್ ತೆಗೆದುಕೊಂಡೆ. ಕೆಲವು ವರ್ಷ ಯಾವೊಂದು ಚಿತ್ರಕತೆಯನ್ನು ಸಹ ನಾನು ಕೇಳಲಿಲ್ಲ. ಚಿತ್ರರಂಗದಿಂದ ಸಂಪೂರ್ಣವಾಗಿ ವಿಮುಖವಾಗಿದ್ದೆ” ಎಂದಿದ್ದಾರೆ.
Advertisement
‘ಬಾಹುಬಲಿ’ ಅಂಥಹಾ ದೊಡ್ಡ ಹಿಟ್ ಸಿನಿಮಾ ನೀಡಿದ ಬಳಿಕ ಅದರ ಲಾಭ ತೆಗೆದುಕೊಳ್ಳಬೇಕು ಎಂದು ಹಲವರು ಬಯಸುವುದು ಸಹಜ. ಆದರೆ ನನಗೆ ಅದರ ಅವಶ್ಯಕತೆ ಇರಲಿಲ್ಲ. ನನಗೆ ನನ್ನ ವೃತ್ತಿ ಜೀವನದಿಂದ ಒಂದು ಬ್ರೇಕ್ ಬೇಕಿತ್ತು ಹಾಗಾಗಿ ಬ್ರೇಕ್ ತೆಗೆದುಕೊಂಡೆ. ಆ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ನಿಶ್ಯಬ್ಧಂ ಸಿನಿಮಾದಲ್ಲಿ ನಟಿಸಿದೆ. ಈಗ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಮಾಗಳಲ್ಲಿ ನಟಿಸಬೇಕು ಎನಿಸಿದಾಗ ನಾನು ಕತೆಗಳನ್ನು ಕೇಳುತ್ತೇನೆ. ಒಳ್ಳೆಯ ಕತೆ ಸಿಕ್ಕರೆ ಭಾರತದ ಯಾವುದೇ ಭಾಷೆಯಲ್ಲಾಗಲಿ ನಟಿಸಲು ಸಿದ್ಧ ಎಂದಿದ್ದಾರೆ ಅನುಷ್ಕಾ ಶೆಟ್ಟಿ.