Karnataka Times
Trending Stories, Viral News, Gossips & Everything in Kannada

ಮುದ್ದಿನ ಮಗಳು ನಿಧಿ ಜೊತೆಗೆ ಭರ್ಜರಿ ಸ್ಟೆಪ್ ಹಾಕಿದ ಸ್ಯಾಂಡಲ್ ವುಡ್ ನಟಿ ಸುಧಾರಾಣಿ

ಚಂದನವನದ ನಟಿ ಸುಧಾರಾಣಿ (Actress Sudharani) ಯವರು ಒಂದು ಕಾಲದಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತ ನಟಿಯಾಗಿ ಗುರುತಿಸಿಕೊಂಡವರು. ಆನಂದ್ (Anand) ಸಿನಿಮಾದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಕಮಲ್ ಮಾಡಿದ ನಟಿ ದೀಗ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ‘ಶ್ರೀರಸ್ತು ಶುಭಮಸ್ತು’ (Shreerastu Shubhamastu) ಧಾರಾವಾಹಿಯಲ್ಲಿ ತುಳಸಿ ಪಾತ್ರವನ್ನು ನಿರ್ವಹಿಸುತ್ತಿದ್ದು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ.

ಮಗಳ ಜೊತೆಗೆ ನಟಿ ಸುಧಾರಾಣಿ ಡಾನ್ಸ್

Advertisement

ನಟಿ ಸುಧಾರಾಣಿ (Actress Sudharani) ಯವರು ವೃತ್ತಿ ಜೀವನದ ಜೊತೆಗೆ ವೈವಾಹಿಕ ಜೀವನದ ಕಡೆಗೂ ಹೆಚ್ಚು ಗಮನ ಕೊಡುತ್ತಾರೆ. ಅದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಅಪ್ಡೇಟ್ ನೀಡುತ್ತಾರೆ. ಅಷ್ಟೇ ಅಲ್ಲದೇ ಮಗಳ ನಿಧಿ ಗೋವರ್ಧನ್ (Nidhi Govardhan) ಜೊತೆಗೆ ಡಾನ್ಸ್ ಮಾಡುವ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ನಟಿ ಸುಧಾರಾಣಿಯವರು ಮಗಳು ನಿಧಿ ಜೊತೆಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ. ಅಮ್ಮ ಮಗಳ ಈ ಡಾನ್ಸ್ ವಿಡಿಯೋಗೆ ಏಳುವರೇ ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ.

Advertisement

Leave A Reply

Your email address will not be published.