ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ ಗೌಡ (Social Media Star Sonu Shreenivasa Gowda) ಬೇಡದ ವಿಚಾರಗಳಿಂದಲೇ ಸುದ್ದಿಯಾಗುವುದೇ ಹೆಚ್ಚು. ಬಿಗ್ ಬಾಸ್ ಒಟಿಟಿ ಸೀಸನ್ 1 (Big Boss OTT Sisan 1) ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಬಳಿಕ ನಟಿ ಸೋನು ಗೌಡರವರ ಖ್ಯಾತಿ ಹೆಚ್ಚಾಗಿದೆ. ಆದರೆ ಸೋನು ಗೌಡ ಟ್ರೋಲ್ ಆಗುವುದು ಕೂಡ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಟ್ರೋಲ್ ಮಾಡುವವರ ಬಗ್ಗೆ ಮಾತನಾಡುವ ವಿಡಿಯೋ ಮಾಡಿ ಕಣ್ಣೀರು ಹಾಕಿದ್ದರು. ಆದರೆ ಇದೀಗ ಸೋನು ಗೌಡರವರು ಟ್ರೋಲ್ ಆಗುವಂತಹ ವಿಡಿಯೋಗಳನ್ನು ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ.
ಮತ್ತೆ ತೊಂದರೆಗೆ ಸಿಲುಕಿದ ಸೋನು ಗೌಡ
Advertisement
ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡರವರು ಮಾಲ್ದೀವ್ಸ್ ಟ್ರಿಪ್ (Maldives Trip) ಎಂಜಾಯ್ ಮಾಡುತ್ತಿದ್ದಾರೆ. ಮಾಲ್ದೀವ್ಸ್ ಟ್ರಿಪ್‌ನಲ್ಲಿರುವ ಸೋನುಗೌಡ ಸಖತ್ ಬೋಲ್ಡ್ ಫೋಟೋಸ್ (Bold Photos) ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಬಿಕಿನಿ ತೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸೋನು ಶ್ರೀನಿವಾಸ್ ಗೌಡರವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
Advertisement
Advertisement
ಕೆಂಪು ಬಣ್ಣದ ಬಿಕಿನಿ ಧರಿಸಿಕೊಂಡು ಕೇಸರಿ ಬಟ್ಟೆ ಸುತ್ತಿಕೊಂಡಿದ್ದ ಸೋನು ಗೌಡ ಅವರನ್ನುನ್ನು ಟ್ರೋಲಿಗರು (Trollers) ಮಾತ್ರ ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಅದಲ್ಲದೇ ಕೇಸರಿ ಬಿಕಿನಿಯನ್ನು ತೊಟ್ಟಿರುವ ಸೋನು ಗೌಡರವರ ವಿರುದ್ಧ ಕೇಸರಿಪಡೆಗಳು ಕೆಂಡಕಾರುತ್ತಿದ್ದಾರೆ. ಹೌದು, ಈ ಕೇಸರಿ ಬಟ್ಟೆಯನ್ನು ಬಿಕಿನಿಯಾಗಿ ಧರಿಸಿದ್ದೀರಿ, ಇದೇನಿದು ಅವತಾರ ಎಂದು ಗರಂ ಆಗಿದ್ದಾರೆ..ನಿಮ್ಮ ವಿಚಿತ್ರ ಅವತಾರಕ್ಕಾಗಿ ಕೇಸರಿ ಬಣ್ಣವನ್ನು ಯಾಕೆ ಅವಮಾನಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಸೋನು ಗೌಡರವರು ಮಾತ್ರ ಯಾವ ಕಾಮೆಂಟ್ ಗಳಿಗೂ ಕೂಡ ಪ್ರತಿಕ್ರಿಯೆ ನೀಡದೇ ತಮ್ಮ ಪಾಡಿಗೆ ಇದ್ದಾರೆ.
View this post on Instagram