ಚಂದನವನದಲ್ಲಿ ಒಂದು ಕಾಲದಲ್ಲಿ ಬೇಡಿಕೆಯನ್ನು ಹೊಂದಿದ್ದ ನಟಿಯರ ಪೈಕಿ ರಾಧಿಕಾ ಕುಮಾರಸ್ವಾಮಿ (Radhika Kumarswami) ಕೂಡ ಒಬ್ಬರು… ಒಂದು ಮಗುವಿನ ತಾಯಿಯಾಗಿದ್ದರೂ ಕೂಡ ನಟಿ ರಾಧಿಕಾ ಕುಮಾರಸ್ವಾಮಿ ಯಾವ ಯುವ ನಟಿಗೂ ಕೂಡ ಕಡಿಮೆಯಿಲ್ಲ. ನಟಿಯಾಗಿರುವ ರಾಧಿಕಾ ಕುಮಾರ ಸ್ವಾಮಿಯಾವರು ಶಮಿಕಾ ಎಂಟರ್‍ಪ್ರೈಸಸ್ (Shamika Enterprise) ಮುನ್ನಡೆಸುತ್ತಿದ್ದು, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ನಟನೆಗೂ ಸೈ ಡಾನ್ಸ್ ಸೈ ಎನ್ನುವ ರಾಧಿಕಾ ರಾಧಿಕಾ ಕುಮಾರಸ್ವಾಮಿಯವರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.
ಡಾನ್ಸ್ ಡಾನ್ಸ್ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಭರ್ಜರಿ ಡಾನ್ಸ್
Advertisement
ನಟಿ ರಾಧಿಕಾ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಈಗಾಗಲೇ ನಟಿಯ ಹೆಸರಿನಲ್ಲಿ ಎರಡು ಇನ್‌ಸ್ಟಾಗ್ರಾಂ (Instagram) ಖಾತೆಗಳಿದ್ದು, ರಾಧಿಕಾ ಕುಮಾರಸ್ವಾಮಿ ಫೋಟೊಗಳು, ವಿಡಿಯೋಗಳು ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ, ರಾಧಿಕಾ ಕುಮಾರಸ್ವಾಮಿಯವರು ಡಾನ್ಸ್ ಡಾನ್ಸ್ ಶೋವೊಂದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ಶೋನ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ರಾಧಿಕಾ ಕುಮಾರಸ್ವಾಮಿಯವರು ಸಲ್ಮಾನ್ ಅವರಿಗೆ ಜೋಡಿಯಾಗಿ ಹೆಜ್ಜೆ ಹಾಕಿದ್ದರು. ವೇದಿಕೆಯ ಮೇಲೆ ಮನವೇ ತೆರೆಸು, ಎದೆಯ ಕದವಾ ಎನ್ನುವ ಕನ್ನಡ ಹಾಡಿಗೆ ಹಾಗೂ ಮತ್ತೊಂದು ಹಿಂದಿ ಹಾಡಿಗೆ ಡಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಈ
Advertisement
ಅಜಾಗ್ರತ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸ್ವೀಟಿ ಬ್ಯುಸಿ
Advertisement
ನಟಿ ರಾಧಿಕಾ ಕುಮಾರಸ್ವಾಮಿ ಸದ್ಯಕ್ಕೆ ಜೊತೆ ಶ್ರೇಯಸ್ ತಲ್ಪಾಡೆ (Shreyas Talpade) ಅವರ ಜೊತೆಗೆ ‘ಅಜಾಗ್ರತ’ (Ajagatra) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎಂ ಶಶಿಧರ್ (M Shsidhar) ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಅವರು ನಟಿಸುತ್ತಿದ್ದಾರೆ. ರವಿರಾಜ್ ನಿರ್ಮಾಣ ದ ಈ ಸಿನಿಮಾವು ಕನ್ನಡ (Kannada), ತಮಿಳು (Tamil), ತೆಲುಗು (Telugu), ಮಲಯಾಳಂ (Malayalam), ಹಿಂದಿ (Hindi), ಕೊಂಕಣಿ (Konkani), ಮರಾಠಿ (Marati) ಸೇರಿದಂತೆ ಏಳು ಭಾಷೆಗಳಲ್ಲಿ ತೆರೆಗೆ ಬರಲಿದ್ದುಲಿದ್ದು, ಈ ಸಿನಿಮಾದ ಬಗ್ಗೆ ಬಾರಿ ನಿರೀಕ್ಷೆಯಿದೆ.