ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಅನಸೂಯಾ ಭಾರಧ್ವಜ್ (Anasuya Bharadwaj) ನಿರೂಪಕಿಯಾಗಿಯು ಫೇಮಸ್ ಆಗಿದ್ದಾರೆ. ಮದುವೆಯಾಗಿ ಇಬ್ಬರೂ ಮಕ್ಕಳಿದ್ದರೂ ಕೂಡ ನಟಿ ಅನಸೂಯರವರು ಯಾವ ಯಂಗ್ ನಟಿಗೂ ಕಡಿಮೆಯಿಲ್ಲ ಎನ್ನಬಹುದು. ಸದ್ಯಕ್ಕೆ ಸಾಕಷ್ಟು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಆದರೆ ಟ್ರಿಪ್ ಎಂದು ಸುದ್ದಿಯಾಗುವುದೇ ಹೆಚ್ಚು. ಕೆಲವೊಮ್ಮೆ ಟ್ರೋಲಿಗರ ಕೈಗೂ ತೆಲುಗು ನಟಿ ಅನಸೂಯ ಭಾರಧ್ವಜ್ ಅವರು ಸಿಕ್ಕಿಹಾಕಿಕೊಳ್ಳುವುದಿದೆ.
ಬಿಕಿನಿಯಲ್ಲಿ ಗಮನ ಸೆಳೆದ ನಟಿ ಅನಸೂಯ ಭಾರಧ್ವಜ್
Advertisement
ತೆಲುಗು ನಿರೂಪಕಿ ಕಮ್ ನಟಿ ಅನಸೂಯ ಭಾರಧ್ವಜ್ (Anasuya Bharadwaj) ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ನಟಿ ಅನಸೂಯಾರವರ ಫೋಟೋ ಹಾಗೂ ವಿಡಿಯೋಗಳು ನೆಟ್ಟಿಗರ ವಲಯದಲ್ಲಿ ವೈರಲ್ ಆಗುತ್ತಿರುತ್ತದೆ. ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅನಸೂಯ, ಪತಿ ಹಾಗೂ ಮಕ್ಕಳ ಜೊತೆ ಥಾಯ್ಲೆಂಡ್ ಪ್ರವಾಸ (Thailand Trip) ಕೈಗೊಂಡಿದ್ದರು. ಬಿಕಿನಿಯಲ್ಲಿ ಒಬ್ಬರೇ ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಹೀಗಾಗಿ ಬಿಕಿನಿಯಲ್ಲಿ ಕಡಲ ತೀರದಲ್ಲಿ ಪತಿಯ ಜೊತೆಗೆ ರೋಮ್ಯಾನ್ಸ್ ಮಾಡುವ ಫೋಟೋಗಳು ಕೂಡ ವೈರಲ್ ಆಗಿತ್ತು. ನಟಿಯ ಈ ಫೋಟೋಗೆ ಕೆಲವರು ಮೆಚ್ಚಿಕೊಂಡರೆ, ಕೆಲವರು ಖಾರವಾಗಿಯೇ ಕಾಮೆಂಟ್ ಮಾಡಿದ್ದರು.
Advertisement
Advertisement
ಪತಿಯ ಬಗ್ಗೆ ಭಾವುಕ ಸಾಲುಗಳನ್ನು ಬರೆದುಕೊಂಡ ನಟಿ ಅನಸೂಯ
ನಟಿ ಅನಸೂಯರವರು ಪ್ರವಾಸ (Trip)ದ ವೇಳೆಯ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡು, “ನೀವು ನನಗೆ ಬರೆದ ಮೊದಲ ಪ್ರೇಮಪತ್ರ ನನಗೆ ಇನ್ನೂ ನೆನಪಿದೆ. ದಿನಾಂಕ ಜನವರಿ 23, 2001. ದೆಹಲಿ ಆಡಿಟೋರಿಯಂನಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗಿ ಆಗಿದ್ದ ಸಂದರ್ಭ. ನಾನು ಯಾವಾಗಲೂ ನಿಮಗೆ ಉತ್ತರ ಹೇಳಲಿಲ್ಲ. ಈಗ ಹೇಳಲು ಪ್ರಯತ್ನಿಸುತ್ತಿದ್ದೇನೆ. ಪ್ರೀತಿಯ ನಿಕ್ಕೂ… ಇಷ್ಟು ದಿನ ನನ್ನೊಟ್ಟಿಗೆ ಜೀವನ ಸಾಗಿಸಿದ್ದು ಮಾತ್ರವಲ್ಲದೇ ಸಾಕಷ್ಟು ತ್ಯಾಗ ಮಾಡಿದ್ದೀರಾ.
ಕೆಲವರು ನಿಮ್ಮ ಮೇಲೆ ಎಷ್ಟೋ ಅಸಹ್ಯವಾದ ಕಮೆಂಟ್‌ಗಳನ್ನು ಮಾಡಿದ್ದಾರೆ. ಆದರೆ ನೀವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ನಮ್ಮ ಪ್ರೇಮಮಂದಿರವನ್ನು ಬಹಳ ಅದ್ಭುತವಾಗಿ ಉಳಿಸಿಕೊಂಡಿದ್ದೀರಾ. ಅದಕ್ಕಾಗಿ ನಿಮಗೆ ಕೃತಜ್ಞತೆಗಳು. ನಾನು ಬಹಳ ಉತ್ಸಾಹದಿಂದ ಇರುವಂತೆ ನೋಡಿಕೊಳ್ಳುತ್ತೀರ. ನಾವು ಎಷ್ಟೋ ಚೆನ್ನಾಗಿ ಮುಂದಕ್ಕೆ ಸಾಗುತ್ತಿದ್ದೇವೆ. ನೀವು ನನ್ನನ್ನು ಬಹಳ ಪ್ರೀತಿಯಿಂದ, ಅಷ್ಟು ತಾಳ್ಮೆಯಿಂದ ಹೇಗೆ ಸಹಿಸಿಕೊಳ್ಳುತ್ತಿದ್ದೀರಾ ಅಂತ ಕೆಲವೊಮ್ಮೆ ಅಚ್ಚರಿ ಆಗುತ್ತದೆ” ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಗೂ ಕೂಡ ನೆಟ್ಟಿಗರು ಪ್ರತಿಕ್ರಿಯಿಸಿದ್ದರು.