ಚಂದನವನದ ಮುದ್ದಾದ ಜೋಡಿಗಳಲ್ಲಿ ಯಶ್ (Yash) ಹಾಗೂ ರಾಧಿಕಾ ಪಂಡಿತ್ (Radhika Pandit). ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಜೊತೆಯಾಗಿ ನಟನಾ ಬದುಕು ಆರಂಭಿಸಿ, ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಿದ್ದಂತೆ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆ ಮಾಡಿಕೊಂಡರು. ಸದ್ಯಕ್ಕೆ ಯಶ್ (Yash) ಅವರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ನಟಿ ರಾಧಿಕಾ ಪಂಡಿತ್ (Actress Radhika Pandit) ನಟನೆಯಿಂದ ದೂರ ಉಳಿದು ಮಕ್ಕಳನ್ನು ನೋಡಿಕೊಂಡು ಸಂಸಾರವನ್ನು ನೋಡಿಕೊಳ್ಳುತ್ತಿದ್ದಾರೆ.
ಫ್ಯಾಮಿಲಿ ಜೊತೆಗಿನ ಫೋಟೋ ಹಂಚಿಕೊಂಡ ಸಿಂಡ್ರೆಲ್ಲಾ
Advertisement
ನಟಿ ರಾಧಿಕಾ ಪಂಡಿತ್ ಅವರು ತೆರೆ ಮೇಲೆ ಕಾಣಿಸಿಕೊಳ್ಳದೇ ಕೆಲವು ವರ್ಷಗಳು ಆಗಿದ್ದು, ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಫ್ಯಾನ್ಸ್ ಗಳಿಗೆ ಕನೆಕ್ಟ್ ಆಗಿದ್ದಾರೆ. ಇತ್ತ ರಾಧಿಕಾ ಹಾಗೂ ಯಶ್ ದಂಪತಿಗಳು ಮಕ್ಕಳ ತುಂಟಾಟದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಬಿಡುವು ಸಿಕ್ಕಾಗಲ್ಲೆಲ್ಲಾ ಫ್ಯಾಮಿಲಿ ಜೊತೆಗೆ ಟೈಮ್ ಸ್ಪೆಂಡ್ ಮಾಡುವ ಈ ಜೋಡಿಯ ಫೋಟೋಗಳು ಇದೀಗ ವೈರಲ್ ಆಗಿವೆ.
Advertisement
View this post on Instagram
Advertisement
ಕೆಜಿಎಫ್ ಸ್ಟಾರ್ ಯಶ್ (KGF Star Yash) ಅವರ ಮುದ್ದಿನ ಮಡದಿ ರಾಧಿಕಾ ಪಂಡಿತ್ ಅವರು ಸುಂದರವಾದ ಫೋಟೋ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಕಡಲ ತೀರ (Beach) ದಲ್ಲಿ ರಾಕಿಂಗ್ ಫ್ಯಾಮಿಲಿ ಸಖತ್ ಎಂಜಾಯ್ ಮಾಡಿದೆ. ಈ ಫೋಟೋದಲ್ಲಿ ಐರಾ ಯಶ್ ತಂದೆಯ ಹೆಗಲೇರಿ ಕುಳಿತುಕೊಂಡು ಅಮ್ಮನ ಜೊತೆ ಮುದ್ದಾಟ ಆಡಿದ್ದಾಳೆ. ಈ ಫೋಟೋ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಇದೊಂದು ಕಂಪ್ಲೀಟ್ ಫ್ಯಾಮಿಲಿ ಟೈಮ್ ಹೀಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.