ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿರುವ ಬೆಡಗಿ ನಟಿ ದೀಪಿಕಾ ದಾಸ್ (Deepika Das) ಎಲ್ಲರಿಗೂ ಕೂಡ ಚಿರಪರಿಚಿತರು. ನಾಗಿಣಿ (Nagini) ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿಕೊಂಡವರು ಈ ದೀಪಿಕಾ ದಾಸ್ (Deepika Das). ಇತ್ತೀಚೆಗಷ್ಟೇ ಕನ್ನಡ ಬಿಗ್ ಬಾಸ್ ಸೀಸನ್ 9 (Big Boss Sisan 9) ರಲ್ಲಿ ಭಾಗವಹಿಸಿ ಫೈನಲ್ಗೆ ತಲುಪಿ, ಎಲ್ಲರಿಗೂ ಕೂಡ ಹತ್ತಿರವಾಗಿದ್ದರು.
ಹಿರಿಯ ನಟಿಯ ಜೊತೆಗೆ ಪೋಸ್ ನೀಡಿದ ದೀಪಿಕಾ ದಾಸ್
Advertisement
ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದರೂ ಕೂಡ ಬಿಡುವು ಮಾಡಿಕೊಂಡು ಟ್ರಿಪ್ (Trip) ಎಂದು ಆಗಾಗ ವಿದೇಶಕ್ಕೆ ತೆರಳುತ್ತಿರುತ್ತಾರೆ. ಆಗಾಗ ಫೋಟೋ ಶೂಟ್ (Photoshoot) ಮಾಡಿಸಿಕೊಳ್ಳುತ್ತಿರುತ್ತಾರೆ. ಅದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
Advertisement
View this post on Instagram
Advertisement
ಆದರೆ ಇದೀಗ ನಟಿ ದೀಪಿಕಾ ದಾಸ್ ಅವರು ಹಿರಿಯ ನಟಿ ಶ್ರುತಿ (Senior Actor Shruti) ಹಾಗೂ ಅವರ ಮಗಳು ಗೌರಿ (Gowri) ಜೊತೆಗೆ ಇರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಹಾಗೂ ಗೌರಿ ಜೊತೆಗೆ ಮುದ್ದು ಮುದ್ದಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಶೇರ್ ಮಾಡಿಕೊಂಡು, ನೋಡಿ ಯಾರಿದ್ದಾರೆಂದು ಎಂದು ಬರೆದುಕೊಂಡಿದ್ದಾರೆ. ನಟಿ ದೀಪಿಕಾ ದಾಸ್ ಅವರ ಈ ಪೋಸ್ಟ್ ಗೆ ಮೂವತ್ತೇಂಟು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.