Karnataka Times
Trending Stories, Viral News, Gossips & Everything in Kannada

ಧ್ರುವ ಸರ್ಜಾ ಹಾಗೂ ಪ್ರೇರಣಾರವರ ವಿಶೇಷ ಫೋಟೋವೊಂದು ವೈರಲ್, ಅಷ್ಟಕ್ಕೂ ಏನಿದೆ ಗೊತ್ತಾ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ. ಸದ್ಯಕ್ಕೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿರುವ ನಟನ ವೈಯುಕ್ತಿಕ ಜೀವನದಲ್ಲಿಯು ಖುಷಿಯು ಮನೆ ಮಾಡಿದೆ. ಸದ್ಯಕ್ಕೆ ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಎರಡನೇ ಮಗುವಿನ (Second Baby) ನಿರೀಕ್ಷೆಯಲ್ಲಿದ್ದಾರೆ.

ಧ್ರುವ ಸರ್ಜಾ ಮಡದಿ ಪ್ರೇರಣಾರವರ ಫೋಟೋ ವೈರಲ್

Advertisement

ಇತ್ತೀಚಿಗೆ ನಟ ಧ್ರುವ ಸರ್ಜಾರವರ ಮಡದಿ ಪ್ರೇರಣಾ (Prerana) ಅವರಿಗೆ ಸೀಮಂತ ಕಾರ್ಯಕ್ರಮ ಕೂಡ ನಡೆದಿದೆ. ಸೀಮಂತ ಶಾಸ್ತ್ರದ ವೇಳೆಯಲ್ಲಿ ತೆಗೆದ ಫೋಟೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗುತ್ತಿದೆ. ಧ್ರುವ ಸರ್ಜಾ ಅವರ ಸ್ನೇಹಿತ ಮುತ್ತು (Friend Muttu) ಈ ಒಂದು ಫೊಟೋ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಅತ್ತಿಗೆ ಪ್ರೇರಣಾ ಹಾಗೂ ಧ್ರುವ ಅವರೊಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆ , ಧ್ರುವ ಸರ್ಜಾ ಫ್ಯಾನ್ಸ್ ಜೂನಿಯರ್ ಬಾಸ್ (Junior Boss) ಬರ್ತಾಯಿದ್ದಾನೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಹುತೇಕ ಫ್ಯಾನ್ಸ್ ಗಳು ಜ್ಯೂನಿಯರ್ ಆಕ್ಷನ್ ಪ್ರಿನ್ಸ್ ಈ ಸಲ ಬರ್ತಾನೆ ಎನ್ನುತ್ತಿದ್ದಾರೆ.

Advertisement

Advertisement

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ರಿವೀಲ್ ಮಾಡಿದ್ದ ಆಕ್ಷನ್ ಪ್ರಿನ್ಸ್

ಇತ್ತೀಚೆಗಷ್ಟೇ ನಟ ಧ್ರುವ ಸರ್ಜಾ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಹೇಳಿಕೊಂಡಿದ್ದಾರೆ. ಕುಟುಂಬ (Dhruva Sarja Family) ಕ್ಕೆ ಮತ್ತೊಂದು ಮಗುವಿನ ಆಗಮನವಾಗುತ್ತಿರುವ ಬಗ್ಗೆ ನಟ ಧ್ರುವ ಸರ್ಜಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ. ಸೆಪ್ಟೆಂಬರ್​ನಲ್ಲಿ ಸರ್ಜಾ ಕುಟುಂಬಕ್ಕೆ (Sarja Family) ಹೊಸ ಸದಸ್ಯನ ಆಗಮನ ಆಗಲಿದೆ.

ನಟ ಧ್ರುವ ಸರ್ಜಾರವರು ಗ್ರಾಫಿಕ್ಸ್ ವಿಡಿಯೋ (Grapic Video) ವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದ ಪ್ರಾರಂಭದಲ್ಲಿ ಎಲ್ಲರಿಗೂ ಒಂದು ಸರ್​ಪ್ರೈಸ್ ಇದೆ ಎನ್ನುವುದು ಗೊತ್ತಾಗುತ್ತದೆ. ವಿಡಿಯೋ ಕೊನೆಯಲ್ಲಿ ಧ್ರುವ ಮಗಳನ್ನು ಎತ್ತಿಕೊಂಡಿರುವುದು ಕಾಣಬಹುದು. ಈ ವಿಡಿಯೋ ಕೊನೆಯಲ್ಲಿ ಪ್ರೇರಣಾ ಪ್ರೆಗ್ನೆಂಟ್ ಎನ್ನುವ ವಿಚಾರವು ರಿವೀಲ್ ಆಗಿದೆ. ಈ ವಿಡಿಯೋ ನೋಡುತ್ತಿದ್ದಂತೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

Leave A Reply

Your email address will not be published.