ಕೆಲವೇ ಕೆಲವು ಸಿನಿಮಾಗಳ ಮೂಲಕವೇ ಚಂದನವನದಲ್ಲಿ ನೆಲೆ ಕಂಡುಕೊಂಡವರು ನಟ ಧನ್ವೀರ್ ಗೌಡ (Dhanvir Gowda). ನಟನೆ ಮತ್ತು ಕಟ್ಟುಮಸ್ತಾದ ದೇಹದಿಂದ ಗಮನ ಸೆಳೆದಿರುವ ನಟ ಧನ್ವೀರ್ ಗೌಡರವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಬಜಾರ್ (Bajar) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ಧನ್ವೀರ್ ಗೌಡರವರು ಸದ್ಯಕ್ಕೆ ವಾಮನ (Vamana) ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಅಭಿಮಾನಿಗಳ ಜೊತೆಗೆ ನಟನ ಬರ್ತ್ಡೇ ಸೆಲೆಬ್ರೇಶನ್
Advertisement
ನಟ ಧನ್ವೀರ್ ಗೌಡ ನಿನ್ನೆ (ಸೆಪ್ಟೆಂಬರ್ 8)28ನೇ ಜನ್ಮದಿನದ ಸಂಭ್ರಮದಲ್ಲಿ ಹುಟ್ಟುಹಬ್ಬ ಆಚರಿಸಿ (Birthday Celebration) ಕೊಂಡಿದ್ದಾರೆ. ನಟನಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಸ್ನೇಹಿತರು ಸೇರಿದಂತೆ ಚಿತ್ರರಂಗದವರು ಶುಭ ಕೋರಿದ್ದಾರೆ. ಅಭಿಮಾನಿಗಳ ಜೊತೆಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
Advertisement
View this post on Instagram
Advertisement
ಹುಟ್ಟುಹಬ್ಬಕ್ಕೆ ಹೊಸ ಸಿನಿಮಾದ ಪೋಸ್ಟರ್ ರಿಲೀಸ್
ನಟ ಧನ್ವೀರ್ ಗೌಡ (Dhanvir Gowda) ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದು ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಹುಟ್ಟುಹಬ್ಬದ ದಿನವೇ ಧನ್ವೀರ್ ಹೊಸ ಸಿನಿಮಾದ ಪೋಸ್ಟರ್ (Poster) ಬಿಡುಗಡೆ ಆಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾದ ಧನ್ವೀರ್ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ ಪ್ರಸ್ತುತ ‘ಡಿ-05’ ಎನ್ನಲಾಗಿದ್ದು, ಯುವ ನಿರ್ದೇಶಕ ರಘುಕುಮಾರ್ ಓ ಆರ್ (Raghukumar O R) ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಡಿ-05’ ನಟನ ಐದನೇ ಸಿನಿಮಾವಾಗಿದ್ದು ಬಾರಿ ನಿರೀಕ್ಷೆಯಿದೆ.