ಮಾಡೆಲ್ ಕಮ್ ನಟಿ ಅನ್ವೇಶಿ ಜೈನ್ (Anveshi Jain) ತಮ್ಮ ಹಾಟ್ ಲುಕ್ ನಿಂದಲೇ ಫೇಮಸ್ ಆಗಿದ್ದಾರೆ. ಕನ್ನಡ (Kannada), ತೆಲುಗು (Telug) ಸೇರಿದಂತೆ ವಿವಿಧ ಬಾಷೆಯ ಸಿನಿಮಾ ಹಾಗೂ ವೆಬ್ ಸಿರೀಸ್ ನಲ್ಲಿ ನಟಿಸಿದ್ದು ತಮ್ಮ ನಟನೆಯಿಂದಲೇ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದಾರೆ.
ಜಿಮ್ ನಲ್ಲಿನ ಅನ್ವೇಷಿಯವರ ಫೋಟೋ ವೈರಲ್
Advertisement
ನಟಿ ಅನ್ವೇಷಿ ಜೈನ್ (Anveshi Jain) ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆಗಾಗ ತಮ್ಮ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಮಾರ್ಟೀನ್ ನಟಿ ಅನ್ವೇಶಿ ಜೈನ್ ಹಳದಿ ಹಾಗೂ ಕಪ್ಪು ಬಣ್ಣದ ಉಡುಗೆ ತೊಟ್ಟು, ಜಿಮ್ ನಲ್ಲಿ ಕುಳಿತುಕೊಂಡು ಕ್ಯಾಮೆರಾಗೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ನಟಿಯ ಈ ಫೋಟೋಗೆ ಒಂದೂವರೆ ಲಕ್ಷದಷ್ಟು ಲೈಕ್ಸ್ ಗಳು ಬಂದಿವೆ.
Advertisement
Advertisement
ಕಂಪೆನಿ ಕೆಲಸ ಬಿಟ್ಟು ನಟನೆಯಲ್ಲಿ ಬ್ಯುಸಿಯಾದ ಚೆಲುವೆ ಈ ಅನ್ವೇಶಿ
ಬಣ್ಣದ ಲೋಕದಲ್ಲಿ ತೊಡಗಿ ಕೊಳ್ಳುವ ಮೊದಲು ನಟಿ ಅನ್ವೇಶಿಯವರು ಮಧ್ಯಪ್ರದೇಶದ ಇಂದೋರ್ (Madhyapradesh Indor) ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡಲು ಮನಸ್ಸಿಲ್ಲದೇ ಮುಂಬೈ (Mumbai) ಗೆ ಹೋದರು. ಮೊದಲಿಗೆ ಮಾಡಲಿಂಗ್ ಮಾಡುತ್ತಿದ್ದ ಅನ್ವೇಶಿ ಕಾರ್ಯಕ್ರಮ ಹೋಸ್ಟಿಂಗ್ ಕೂಡ ಮಾಡುತ್ತಿದ್ದರು.
ನಂತರ ಸಿನಿಮಾಗಳಲ್ಲಿ ನಟಿಸಲು ಅವಕಾಶ ಬಂದವು. ಪ್ರಾರಂಭದಲ್ಲಿ ಬಿ ಗ್ರೇಡ್ ವೆಬ್ ಸರಣಿ (B Grade Web Series) ಚಿತ್ರಗಳಲ್ಲಿ ಕಾಣಿಸಿಕೊಂಡರು. ಗಂಧಿ ಭಾತ್ (Gandhi Bhath) ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿಕೊಂಡರು. ಆದಾದ ಬಳಿಕ ಸಿನಿಮಾ ಲೋಕದಲ್ಲಿ ಬ್ಯುಸಿಯಾಗಿದ್ದು ಸದ್ಯಕ್ಕೆ ಕನ್ನಡದಲ್ಲಿ ಕೆಡಿ (KD) ಹಾಗೂ ಮಾರ್ಟಿನ್ (Martin) ಸಿನಿಮಾದಲ್ಲಿ ನಟಿ ಅನ್ವೇಶಿ ನಟಿಸುವ ಮೂಲಕ ಬ್ಯುಸಿಯಾಗಿದ್ದಾರೆ.