ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿಯರಲ್ಲಿ ಐಶ್ವರ್ಯ ಸಿಂಧೋಗಿ (Aishwarya Sindhogi) ಕೂಡ ಒಬ್ಬರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಐಶ್ವರ್ಯ ಅವರು ಹೊಟೇಲ್ ಮ್ಯಾನೇಜ್‌ಮೆಂಟ್ (Hotel Management) ಪದವಿ ಮಾಡಿ, ಅಮೇರಿಕಾದ ಅಮೇರಿಕನ್ ಕ್ಲಬ್ (American Club)ನಲ್ಲಿ ಕೆಲಸ ಮಾಡಿದ್ದರು. ಆದರೆ ನಟನಾ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಸದ್ಯಕ್ಕೆ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ನಟನ ಮನೆಯ ಲಕ್ಷ್ಮಿ ಪೂಜೆಯಲ್ಲಿ ನಟಿ ಐಶ್ವರ್ಯ ಸಿಂಧೋಗಿ
Advertisement
ನಟಿ ಐಶ್ವರ್ಯ ಸಿಂಧೋಗಿ (Aishwarya Sindhogi) ಯವರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಹಾಟ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಇದೀಗ ನಟಿ ಐಶ್ವರ್ಯ ಸಿಂಧೋಗಿಯವರು ನಟ ವಿಜಯ್ ಸೂರ್ಯರವರ ಮನೆಯ ಲಕ್ಷ್ಮಿ ಪೂಜೆ (Lakshmi Pooja) ಯಲ್ಲಿ ಭಾಗಿಯಾಗಿದ್ದಾರೆ. ಸೀರೆಯುಟ್ಟಿರುವ ಐಶ್ವರ್ಯ ಸಿಂಧೋಗಿಯವರು, ನಟ ವಿಜಯ್ ಸೂರ್ಯ (Vijay Surya) ರವರ ಅವರ ಜೊತೆಗೆ ನಿಂತು ತೆಗೆದಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದ ಜೊತೆಗೆ ನಮ್ಮ ವಿಜಯ್ ಸೂರ್ಯರವರ ಮನೆಯಲ್ಲಿ ಲಕ್ಷ್ಮಿ ಪೂಜೆ. ನಟಿಯ ಈ ಪೋಸ್ಟ್ ಗೆ ಲೈಕ್ಸ್ ಗಳು ಬಂದಿವೆ.
Advertisement
View this post on Instagram
Advertisement
ನಟಿ ಐಶ್ವರ್ಯಾ ನಟನ ಬದುಕಿಗೆ ಹಾದಿ ಹೀಗಿದೆ?
ನಟಿ ಐಶ್ವರ್ಯಾ ಸಿಂಧೋಗಿಯವರ ನಾಗಿಣಿ ಧಾರಾವಾಹಿ (Nagini Serial) ಯಲ್ಲಿ ಮಾಯಾಂಗನೆ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಆ ಬಳಿಕ ಮಂಗಳಗೌರಿ ಧಾರಾವಾಹಿ (Mangalagowri) ವಿಲನ್ ಆಗಿ ಕಾಣಿಸಿಕೊಂಡಿದ್ದರು. ಅದಲ್ಲದೇ ನಟಿ ಐಶ್ವರ್ಯರವರು ಬೆಳ್ಳಿತೆರೆ ಮೇಲು ಮಿಂಚಿದ್ದಾರೆ. ಯಾರು ನೀ ಯಾರು (Yaru Nee Yaru), ಸೈತಾನ್ (Saithan) ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಐಶ್ವರ್ಯ ಸಿಂಧೋಗಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರುವ ನಮ್ಮ ಲಚ್ಚಿ ಸೀರಿಯಲ್ (Namma Lacchi Serial) ನಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ಪಾತ್ರ ನಿರ್ವಹಿಸುತ್ತಿದ್ದು ವಿಲನ್ ಆಗಿ ಕಾಣಿಸಿಕೊಂಡು, ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿದ್ದಾರೆ.