Karnataka Times
Trending Stories, Viral News, Gossips & Everything in Kannada

ಚಂದನವನದ ಕ್ಯೂಟ್ ಜೋಡಿ ಸಿಂಹ ಪ್ರಿಯಾ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಹೇಗಿತ್ತು ಗೊತ್ತಾ?

ಚಂದನವನದ ಕ್ಯೂಟ್ ಜೋಡಿಗಳಲ್ಲಿ ಒಬ್ಬರು ಈ ಹರಿಪ್ರಿಯಾ (Hripriya) ಹಾಗೂ ವಸಿಷ್ಠ ಸಿಂಹ (Vasista Simha). ಪ್ರೀತಿಸಿ ಮದುವೆಯಾದ ಈ ಜೋಡಿ ಸಂತೋಷವಾಗಿ ಜೀವನವನ್ನು ನಡೆಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್​ ಆಗಿದ್ದಾರೆ. ಸಿಂಹ ಪ್ರಿಯಾ ಜೋಡಿಯು ವರಮಹಾಲಕ್ಷ್ಮಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದು, ಈ ಫೋಟೋಗಳು ವೈರಲ್ ಆಗಿವೆ.

ಸಿಂಹಪ್ರಿಯಾ ದಂಪತಿಗಳ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರು

Advertisement

ಮದುವೆಯಾದ ಬಳಿಕ ಸಿಂಹ ಪ್ರಿಯಾ (Simhapriya) ದಂಪತಿಗಳು ಹಬ್ಬವನ್ನು ಜೊತೆಯಾಗಿ ಆಚರಿಸುತ್ತಾರೆ. ಇದೀಗ ಮದುವೆಯಾದ ಬಳಿಕ ಮೊದಲ ವರಮಹಾಲಕ್ಷ್ಮಿ ಹಬ್ಬ (Varamahalakshmi Festivals) ವನ್ನು ನಟಿ ಹರಿಪ್ರಿಯಾರವರು ಪತಿ ವಸಿಷ್ಠ ಜೊತೆಗೆ ಸೇರಿ ಆಚರಿಸಿದ್ದಾರೆ. ಮನೆಯಲ್ಲಿ ಲಕ್ಷ್ಮೀಯನ್ನು ಕೂರಿಸಿ ಅಲಂಕಾರ ಮಾಡಿ ಪೂಜೆ ಮಾಡಿದ್ದಾರೆ.

Advertisement

ಸಿಂಹ ಪ್ರಿಯಾ ಜೋಡಿಯು ಟ್ರಡಿಷನಲ್ ಉಡುಗೆ (Traditional Dress)ಯಲ್ಲಿ ಕಾಣಿಸಿಕೊಂಡಿದ್ದಾರೆ. ವಸಿಷ್ಠ ಸಿಂಹ ಮೆರೂನ್ ಕಲರ್ ಶರ್ಟ್ ಹಾಗೂ ಬಿಳಿ ಬಣ್ಣದ ಪಂಚೆ, ಶಲ್ಯವನ್ನು ಧರಿಸಿದ್ದು, ನಟಿ ಹರಿಪ್ರಿಯಾ ಮೆರೂನ್ ಬಣ್ಣದ ಸೀರೆಯುಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ನಟಿ ಹರಿಪ್ರಿಯಾರವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ನಮ್ಮನೆ ವರಮಹಾಲಕ್ಷ್ಮಿ, ದೇವಿ ಮಹಾಲಕ್ಷ್ಮಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಬರೆದುಕೊಂಡಿದ್ದಾರೆ. ಸಿಂಹ ಪ್ರಿಯಾ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದ ಫೋಟೋ ನೋಡಿ ನೆಟ್ಟಿಗರು ಖುಷಿ ಪಟ್ಟಿದ್ದಾರೆ.

 

Advertisement

 

View this post on Instagram

 

A post shared by Hariprriya (@iamhariprriya)

ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಸಿಂಹಪ್ರಿಯಾ ಜೋಡಿ

ನಟ ಹಾಗೂ ಗಾಯಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ವಸಿಷ್ಠ ಸಿಂಹ (Vasista Simha) ಮತ್ತು ನಟಿ ಹರಿಪ್ರಿಯಾ (Haripriya) ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ (Mysore Ganapati Sacchidaananda Ashrama) ದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮೈಸೂರಿನಲ್ಲಿ ನಡೆದ ಮದುವೆಯಲ್ಲಿ ಆಪ್ತರ ಮಾತ್ರ ಭಾಗಿಯಾಗಿದ್ದರು. ಇನ್ನು, ಬೆಂಗಳೂರಿನಲ್ಲಿ ನಡೆದ ಆರತಕ್ಷತೆಯಲ್ಲಿ ಕನ್ನಡ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಈ ಸಿಂಹ ಪ್ರಿಯಾ ಜೋಡಿಯ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Leave A Reply

Your email address will not be published.