ನಟಿ ಹಾಗೂ ಮಾಡೆಲ್ ಶುಭ್ರಾ ಅಯ್ಯಪ್ಪ (Shubra Ayyappa) ಎಲ್ಲರಿಗೂ ಕೂಡ ಚಿರಪರಿಚಿತರು. ದಕ್ಷಿಣ ಭಾರತದ ಖ್ಯಾತ ನಟಿ ಶುಭ್ರ ಅಯ್ಯಪ್ಪ (Actress Shubra Ayyappa)ರವರು ಸಿನಿಮಾದ ಜೊತೆ ಜೊತೆಗೆ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಾರೆ. ನಟಿ ಶುಭ್ರಾ ಅಯ್ಯಪ್ಪ ಹಾಟ್ ಫೋಟೋ ಹಾಗೂ ವಿಡಿಯೋಗಳ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಿರುವುದು ಮಾಮೂಲಿಯಾಗಿದೆ.
ಸೀರೆಯುಟ್ಟು ಪೋಸ್ ನೀಡಿದ ನಟಿ ಶುಭ್ರ ಅಯ್ಯಪ್ಪ
Advertisement
ವಜ್ರಕಾಯ (Vajrakaya) ಸಿನಿಮಾ ಮೂಲಕವಾಗಿ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ನಟಿ ಶುಭ್ರ ಅಯ್ಯಪ್ಪ ಸೋಶಿಯಲ್ ಮೀಡಿಯಾ (Social Media) ದಲ್ಲಿ ಸದಾ ಆ್ಯಕ್ಟಿವ್ ಕೂಡ ಹೌದು. ಆಗಾಗ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ನಿದ್ದೆ ಕದಿಯುವುದು ಹೊಸದೇನಲ್ಲ. ಇತ್ತೀಚೆಗಷ್ಟೇ ಇಟಲಿ ಪ್ರವಾಸದ ವೇಳೆಯಲ್ಲಿ ಬಿಕಿನಿ ಹಾಗೂ ಸ್ಟೈಲಿಶ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ನಟಿ ಶುಭ್ರಾ ಅಯ್ಯಪ್ಪ ಬ್ಲಾಕ್ ಕಲರ್ ಸೀರೆಯುಟ್ಟು ಮಾದಕ ನೋಟ ಬೀರಿದ್ದಾರೆ. ಸೀರೆಯುಟ್ಟಿದ್ದರೂ ತನ್ನ ಮೈ ಮಾಟವನ್ನು ಪ್ರದರ್ಶನ ಮಾಡಿದ್ದು, ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಾರಿ ಎಂದು ಬರೆದುಕೊಂಡು ಬ್ಲಾಕ್ ಕಲರ್ ಹಾರ್ಟ್ ಸಿಂಬಲ್ ಹಾಕಿದ್ದಾರೆ. ನಟಿಯ ಈ ಪೋಸ್ಟ್ ಗೆ ನೆಟ್ಟಿಗರಿಂದ ಲೈಕ್ಸ್ ಗಳು ಬಂದಿವೆ.
Advertisement
View this post on Instagram
Advertisement
ಉದ್ಯಮಿ ಜೊತೆಗೆ ಹೊಸ ಬದುಕು ಆರಂಭಿಸಿದ್ದ ನಟಿ
ನಟಿ ಶುಭ್ರ ಅಯ್ಯಪ್ಪ (Shubra Ayyappa)ರವರು ಉದ್ಯಮಿ ವಿಶಾಲ್ (Bussiness Man Vishal) ಜೊತೆಗೆ ಇದೇ ವರ್ಷದ ಜನವರಿ 18ರಂದು ಕೂರ್ಗ್‌ನ `ದೊಡ್ಮನೆ’ ಎಂಬ 150 ವರ್ಷದ ಹಳೆಯ ಮನೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಗೆ ಕುಟುಂಬಸ್ಥರು, ಆಪ್ತರು ಅಷ್ಟೇ ಭಾಗವಹಿಸಿದ್ದರು. ಮದುವೆಯಾದ ಎರಡು ದಿನದ ಬಳಿಕ ಸಿನಿಮಾ ರಂಗದ ಸ್ನೇಹಿತರಿಗೆ ಆಪ್ತರಿಗೆ ಮೈಸೂರಿನಲ್ಲಿ ಆರತಕ್ಷತೆಯೂ ನಡೆದಿತ್ತು. ನಟಿಯ ಮದುವೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿತ್ತು.
View this post on Instagram