ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ (Radhika Kumaraswami) ಯವರು ಮತ್ತೆ ಚಂದನವನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿಯವರು ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ರಾಧಿಕಾ ಕುಮಾರಸ್ವಾಮಿಯವರು ಆಗಾಗ ಅಪ್ಡೇಡ್ ನೀಡುತ್ತಿರುತ್ತಾರೆ.
ಯೋಗ ಮಾಡುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ
Advertisement
ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನ (International Yoga Day) ದಂದು ಯೋಗ ಮಾಡುತ್ತಿರುವ ಫೋಟೋ (Photo) ಹಾಗೂ ವಿಡಿಯೋ (Video) ಗಳನ್ನು ಹಂಚಿಕೊಂಡಿದ್ದರು. ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಇನ್‌ಸ್ಟಾಗ್ರಾಮ್ (Instagram) ಪೋಸ್ಟ್‌ನಲ್ಲಿ, ಎಲ್ಲರಿಗೂ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಆಗಿರೋದನ್ನು ಬಿಟ್ಟು ಮುಂದೆ ಬರುವದನ್ನು ಸ್ವೀಕರಿಸಿ” ಎಂದು ಕಪ್ಪು ಬಣ್ಣದ ಟೀಶರ್ಟ್ ಹಾಗೂ ಪ್ಯಾಂಟ್‌ನಲ್ಲಿ ವಿವಿಧ ಯೋಗ ಭಂಗಿಗಳಿಗೆ ಪೋಸ್ ನೀಡಿದ್ದರು. ನಟಿಯ ಈ ಪೋಸ್ಟ್ ಗೆ ನೆಟ್ಟಿಗರು ಪ್ರತಿಕ್ರಿಯೆ ಸೂಚಿಸುವ ಮೂಲಕ ನಟಿಗೂ ಶುಭಾಶಯಗಳನ್ನು ತಿಳಿಸಿದ್ದರು.
Advertisement
View this post on Instagram
Advertisement
ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಟಿ
ರಾಧಿಕಾ ಕುಮಾರಸ್ವಾಮಿ (Radhika Kumarswamy) ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿರಂಗದಿಂದ ಅಂತರ ಕಾಯ್ದುಕೊಂಡಿದ್ದರು. ದಮಯಂತಿ (Damayanthi) ಸಿನಿಮಾ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಸದ್ಯ ರಾಧಿಕಾ ಕುಮಾರಸ್ವಾಮಿ ಬಾಲಿವುಡ್ ನಟ ಶ್ರೇಯಸ್ ತಲ್ಪಾಡ್ (Shreyas Thalpade) ಜೊತೆ ಅಜಾಗ್ರತ (Ajagatra) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನು ರಾಧಿಕಾ ಸಹೋದರ ರವಿರಾಜ್ (Raviraj) ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವು ಏಳು ಭಾಷೆಗಳಲ್ಲಿ ರೆಡಿಯಾಗುತ್ತಿದ್ದು, ಸಿನಿಮಾದ ಬಗ್ಗೆ ಬಾರಿ ನಿರೀಕ್ಷೆಯಿದೆ.