ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ (Actor Duniya Vijay) ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಾಡಿ ಬಿಲ್ಡಿಂಗ್ ಮೂಲಕ ಫೈಟ್ ಅಸಿಸ್ಟೆಂಟ್ (Fight Assistent) ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ತದನಂತರದಲ್ಲಿ ದುನಿಯಾ (Duniya) ಸಿನಿಮಾದ ಮೂಲಕ ನಾಯಕ ನಟರಾಗಿ ಹೊರ ಹೊಮ್ಮಿದ್ದು, ಆಮೇಲೆ ತಿರುಗಿ ನೋಡಿದ್ದೆ ಇಲ್ಲ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ನಟ ಕಮ್ ನಿರ್ದೇಶಕರಾಗಿ ಬ್ಯುಸಿಯಾಗಿದ್ದಾರೆ.
View this post on Instagram
Advertisement
Advertisement
ನಟ ದುನಿಯಾ ವಿಜಯ್ ಅವರ ಮಕ್ಕಳು ಯಾರು?
Advertisement
ನಟ ದುನಿಯಾ ವಿಜಯ್ ಅವರು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದರೂ ಕೂಡ ವೈಯುಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದರು. ವೈಯುಕ್ತಿಕ ಜೀವನದಲ್ಲಿ ಏನೇ ಆಗಿದ್ದರೂ ಕೂಡ ಇವರಿಗೆ ತನ್ನ ಇಬ್ಬರೂ ಹೆಣ್ಣು ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿಯಿದೆ. ದುನಿಯಾ ವಿಜಯ್ ಗೆ ಇಬ್ಬರೂ ಹೆಣ್ಣು ಹಾಗೂ ಒಬ್ಬ ಗಂಡು ಮಗನಿದ್ದಾನೆ. ನಟ ದುನಿಯಾ ವಿಜಯ್ ಅವರ ಹಿರಿಯ ಮಗಳು ಮೋನಿಕಾ (Monica), ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟಿವ್ ಆಗಿಲ್ಲ. ಕಿರಿಯ ಪುತ್ರಿ ಮೋನಿಷಾ (Monisha). ಇವರು ಫ್ಯಾಷನ್ ಡಿಸೈನರ್ (Fashion Desinger) ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೋನಿಷಾ ಆಗಾಗ ತಮ್ಮ ಫೋಟೋಗಳು, ತಮ್ಮ ಡಿಸೈನ್‌ಗಳನ್ನು ಹಂಚಿಕೊಳ್ಳುತ್ತಾರೆ. ಮೋನಿಷಾ ವಿಜಯ್ ಮಾಡೆಲ್ (Model) ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಅನೇಕ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದು, ಸುದ್ದಿಯಲ್ಲಿರುತ್ತಾರೆ.
ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ನಟ ದುನಿಯಾ ವಿಜಯ್
ನಟ ದುನಿಯಾ ವಿಜಯ್ ಅವರು ನಟನೆ ಹಾಗೂ ನಿರ್ದೇಶನದ ಭೀಮ (Bheema) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಭೀಮ ಸಿನಿಮಾ ದುನಿಯಾ ವಿಜಯ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ಮುಂಬರುವ ನವೆಂಬರ್ (November) ತಿಂಗಳಲ್ಲಿ ಭೀಮ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಅದರೊಂದಿಗೆ ನಟ ದುನಿಯಾ ವಿಜಯ್ ಅವರಿಗೆ ಸಿನಿಮಾ ಅವಕಾಶ ಗಳು ಬರುತ್ತಿದ್ದು, ಇದೀಗ ನಿರ್ದೇಶಕ ಜಡೇಶಾ ಕೆ ಹಂಪಿ (Jadeja K Hampi) ಅವರೊಂದಿಗೆ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಒಂದರ ಹಿಂದೆ ಒಂದರಂತೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.