Karnataka Times
Trending Stories, Viral News, Gossips & Everything in Kannada

ಪ್ರೀತಿಯೇ ನನ್ನುಸಿರು ಎಂದು ಚಿಂದಿ ಡಾನ್ಸ್ ಮಾಡಿದ ಕಾಫಿನಾಡ ಚೆಲುವೆ ಭೂಮಿಕಾ ಬಸವರಾಜ್.

ಸೋಶಿಯಲ್ ಮೀಡಿಯಾ (Social Media) ದಿಂದ ಸ್ಟಾರ್ ಆಗಿ ಬೆಳೆಯುತ್ತಿರುವ ಪ್ರತಿಭೆಗಳಿಗೇನು ಕೊರತೆಯಿಲ್ಲ ಬಿಡಿ. ಇತ್ತೀಚೆಗಿನ ದಿನಗಳಲ್ಲಿ ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆಯೆಂದರೆ ಅದುವೇ ಸೋಶಿಯಲ್ ಮೀಡಿಯಾ (Social Media)ಗಳು ಎನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಹೀಗಾಗಿ ಈ ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡು ರೀಲ್ಸ್ ಗಳನ್ನು ಮಾಡಿಕೊಂಡು ರೀಲ್ಸ್ ಸ್ಟಾರ್ ಗಲೆಂದೇ ಖ್ಯಾತಿ ಪಡೆದಿದ್ದಾರೆ. ಅಂತಹವರಲ್ಲಿ ರೀಲ್ಸ್ ಸ್ಟಾರ್ (Reels Star) ಎಂದೇ ಖ್ಯಾತಿ ಗಳಿಸಿರುವ ಭೂಮಿಕಾ ಬಸವರಾಜ್ (Bhumika Basavaraj) ಕೂಡ ಒಬ್ಬರು.

ಭೂಮಿಕಾ ಬಸವರಾಜ್ ಹೊಸ ರೀಲ್ಸ್ ಹೇಗಿದೆ?

Advertisement

ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ (Bhumika Basavaraj) ಅವರ ರೀಲ್ಸ್ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಪ್ಪತ್ತೈದು ಲಕ್ಷಕ್ಕೂ ಅಧಿಕ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ. ಬೆಟ್ಟ ಗುಡ್ಡದ ಬ್ಯಾಕ್ ಗ್ರೌಂಡ್ ಹೊಂದಿರುವ ಸ್ಥಳಗಳಲ್ಲಿ ರೀಲ್ಸ್ ಮಾಡುವ ಬೆಡಗಿ ಭೂಮಿಕಾರವರ ಮತ್ತೊಂದು ರೀಲ್ಸ್ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಕಾಫಿ ನಾಡ ಸುಂದರಿ ಭೂಮಿಕಾ ಬಸವರಾಜ್ (Coffee Nada Sundari Bhumika Basavaraj) ಅವರು ಪ್ರೀತಿಯೇ ನನ್ನ ಉಸಿರು ಎನ್ನುವ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡ ಭೂಮಿಕಾ ಬಸವರಾಜ್ ವಿಡಿಯೋಗೆ ಐವತ್ತೇಳು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ. ಡಾನ್ಸ್ ಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

 

Advertisement

 

View this post on Instagram

 

A post shared by Bhumika (@bhumika_basavaraj)

Advertisement

ಟಾಲಿವುಡ್ ಸ್ಟಾರ್ ನಟ ನಟಿಯನ್ನು ಭೇಟಿಯಾಗಿದ್ದ ಭೂಮಿಕಾ ಬಸವರಾಜ್

ಇತ್ತೀಚೆಗಷ್ಟೇ ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಅವರು ಖ್ಯಾತ ನಟ ವಿಜಯ್ ದೇವರಕೊಂಡ (Vijay Deavarakonda) , ಟಾಲಿವುಡ್ ನಟಿ ಸಮಂತಾ (Samanta) ರವರನ್ನು ಭೇಟಿಯಾಗಿದ್ದರು..ಈ ಸಂತೋಷದ ಕ್ಷಣದ ವಿಡಿಯೋವನ್ನು ಶೇರ್ ಮಾಡಿಕೊಂಡು ತಮ್ಮ ಸಂತೋಷಕ್ಕೆ ಅಕ್ಷರ ರೂಪ ನೀಡಿದ್ದರು. “ನಾನು ಅವರೊಂದಿಗೆ ಇದ್ದಾಗ ನಾನು ಅಕ್ಷರಶಃ ಖಾಲಿಯಾಗಿದ್ದೆ. ನನ್ನ ಕನಸಿನಲ್ಲಿ ಇದೆಲ್ಲವೂ ಸಂಭವಿಸಿದೆ ಎಂದು ನನಗೆ ಅನಿಸಿತು.

ಆದರೆ ಅನಂತರದಲ್ಲಿ ಅದು ಕನಸಲ್ಲ ಎಂದು ನಾನು ಅರಿತುಕೊಂಡೆ. ವಿಜಯ್ ದೇವರಕೊಂಡ ಹಾಗೂ ನನ್ನ ರಾಣಿ ಸಮಂತಾರವರನ್ನು ಅಪ್ಪಿಕೊಂಡಾಗ ನನ್ನ ಹೃದಯ ಬಡಿತವು ಸಾಮಾನ್ಯಕ್ಕಿಂತ ಹತ್ತು ಸಾವಿರ ಪಟ್ಟು ಹೆಚ್ಚಾಗಿದೆ. ಇದು ನಿಜವಾಗಿಯೂ ನಂಬಲಸಾಧ್ಯವಾದ ಕ್ಷಣವಾಗಿದ್ದು ಅದು ನನ್ನನ್ನು ಜೀವಮಾನವಿಡೀ ನೆನಪಿಸುವಂತೆ ಮಾಡುತ್ತದೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಗೆ ಫ್ಯಾನ್ಸ್ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು.

Leave A Reply

Your email address will not be published.