Karnataka Times
Trending Stories, Viral News, Gossips & Everything in Kannada

ವೀರ ಮದಕರಿದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದ ಆ ಬಾಲನಟಿ ಈಗ ಹೇಗಿದ್ದಾರೆ ಗೊತ್ತಾ?

ಸ್ಟಾರ್ ನಟರ ಸಿನಿಮಾಗಳಲ್ಲಿ ಬಾಲ ನಟ ನಟಿಯರಾಗಿ ನಟಿಸಿದ ಕಲಾವಿದರು ದೊಡ್ಡದವಾರಾಗುತ್ತಿದ್ದಂತೆ ಗುರುತೆ ಸಿಗದಷ್ಟು ಬದಲಾಗಿ ಬಿಡುತ್ತಾರೆ. 2009ರಲ್ಲಿ ತೆರೆ ಕಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ ವೀರ ಮದಕರಿ ಸಿನಿಮಾ (Veera Madakari)ದ ನೆನಪಿರಬಹುದು. ತೆಲುಗು `ವಿಕ್ರಮಾರ್ಕುಡು’ (Vikramarkudu) ಸಿನಿಮಾದ ರಿಮೇಕ್ ಆಗಿದ್ದರೂ ಯಶಸ್ಸು ಕಂಡಿತ್ತು. ಅದಲ್ಲದೇ ಈ ಸಿನಿಮಾದ ಮೂಲಕ ರಾಗಿಣಿ ದ್ವಿವೇದಿ (Ragini Dwivedi) ಯವರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಅದಲ್ಲದೇ ಸುದೀಪ್ ಅವರ ಮಗಳ ಪಾತ್ರದಲ್ಲಿ ಜೆರುಶಾ ಕ್ರಿಸ್ಟೋಫರ್ ನಟಿಸಿದ್ದರು.

ವೀರಮದಕರಿಯಲ್ಲಿ ನಟಿಸಿದ್ದ ನಟಿ ಜೆರುಶಾ ಮಾಲಿವುಡ್ ಹೀರೋಯಿನ್

Advertisement

ವೀರ ಮದಕರಿ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಜೆರುಶಾ ಕ್ರಿಸ್ಟೋಫರ್ (Jerusha Christopher) ಅವರು ಇದೀಗ ದೊಡ್ಡವರಾಗಿದ್ದಾರೆ. ಮಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿನ್ ಆಗಿ ಬ್ಯುಸಿಯಾಗಿದ್ದಾರೆ. ನಟಿ ಜೆರುಶಾರವರ ಸಂದರ್ಶನದ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಜೆರುಶಾರವರು ವೀರಮದಕರಿ ಸಿನಿಮಾದಲ್ಲಿ ನಟಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.

Advertisement

Advertisement

ನಟಿ ಜೆರುಶಾ ಸಂದರ್ಶನದಲ್ಲಿ ಹೇಳಿದ್ದೇನು?

ಸಂದರ್ಶನದ ವಿಡಿಯೋದಲ್ಲಿ, “ನಾನು ಕನ್ನಡದ ವೀರ ಮದಕರಿ ಸಿನಿಮಾದಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ ಸುದೀಪ್ ಮಗಳ ಪಾತ್ರ ಮಾಡಿದ್ದೆ’ ಎಂದು ಜೆರುಶಾ ಹೇಳಿಕೊಂಡಿದ್ದಾರೆ. ಅದಲ್ಲದೇ, ‘ನಾನು ಏನು ಮಾಡುತ್ತೇನೋ ಅದಕ್ಕೆ ನನ್ನ ತಂದೆ-ತಾಯಿ ಬೆಂಬಲವಾಗಿ ನಿಂತಿದ್ದಾರೆ. ಅವರು ನನ್ನ ಆಧಾರಸ್ತಂಭ’ ಎಂದು ಜೆರುಶಾ ಎಂದಿದ್ದಾರೆ. ನಟಿ ಜೆರುಶಾ ಹೀಗೆನ್ನುತ್ತಿದ್ದಂತೆ ಎಲ್ಲರೂ ಕೂಡ ಶಾಕ್ ಆಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ‘ಸುದೀಪ್ ಮಗಳ ಪಾತ್ರದಲ್ಲಿ ಜೆರುಶಾ ಕಾಣಿಸಿಕೊಂಡಿದ್ದರು. ಈಗ ಸುದೀಪ್​ಗೆ ನಾಯಕಿ ಆಗಿ ಅವರು ಕಾಣಿಸಿಕೊಳ್ಳಬಹುದು. ಅಷ್ಟು ಸುಂದರವಾಗಿ ಬೆಳೆದಿದ್ದಾರೆ’ ಹೀಗೆ ನಾನಾ ರೀತಿಯಲ್ಲಿ ಕಾಮೆಂಟ್ ಗಳು ಹರಿದು ಬಂದಿದೆ.

 

 

View this post on Instagram

 

A post shared by J (@jerushachristopher)

Leave A Reply

Your email address will not be published.