ಸ್ಯಾಂಡಲ್ ವುಡ್ ನಟಿಯರು ಸಿನಿಮಾದ ಜೊತೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಈ ವಿಚಾರದಲ್ಲಿ ಚಂದನವನದ ನಟಿ ನಟಿ ಶ್ವೇತಾ ಶ್ರೀವಾತ್ಸವ್ (Shwetha Shrivatsav) ಕೂಡ ಸೇರಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಶ್ವೇತಾ, ತಮ್ಮ ಫಿಟ್ನೆಸ್ ವಿಡಿಯೋ, ಡ್ಯಾನ್ಸ್ ವಿಡಿಯೋ, ಮುದ್ದಾದ ಮಗಳು ಅಶ್ಮಿತಾ (Ashmita) ಜೊತೆಗಿನ ಫೋಟೋಗಳು, ಟ್ರಾವೆಲ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಫ್ಯಾನ್ಸ್ ಗಳಿಗೆ ಹತ್ತಿರವಾಗಿದ್ದಾರೆ.
ಪತಿಯ ಹುಟ್ಟುಹಬ್ಬದ ಖುಷಿಯಲ್ಲಿದ್ದ ನಟಿ ಶ್ವೇತಾ ಶ್ರೀವಾತ್ಸವ್
Advertisement
ನಟಿ ಶ್ವೇತಾ ಶ್ರೀವಾತ್ಸವ್ (Shwetha Shrivatsav) ರವರು ತಮ್ಮ ಮುದ್ದಿನ ಪತಿಯ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿರುವ ಪೋಸ್ಟ್ ವೊಂದು ಎಲ್ಲರ ಗಮನ ಸೆಳೆಯುತ್ತಿದೆ. ನಟಿಯು ಪತಿ ಅಮಿತ್ ಶ್ರೀವಾತ್ಸವ್ (Amith Shreevastav) ಹಾಗೂ ಮಗಳ ಜೊತೆಗೆ ಫೋಟೋವನ್ನು ಶೇರ್ ಮಾಡಿಕೊಂಡು ಹ್ಯಾಪಿ ಬರ್ತ್ಡೇ ಮೈ ಲವ್ ಎಂದು ಬರೆದುಕೊಂಡಿದ್ದಾರೆ. ನಟಿ ಶ್ವೇತಾರವರ ಪೋಸ್ಟ್ ನೋಡಿದ ನೆಟ್ಟಿಗರು ಅಮಿತ್ ಅವರಿಗೆ ಶುಭಾಶಯಗಳನ್ನು ತಿಳಿಸುವ ಮೂಲಕ ಕಾಮೆಂಟ್ ಮಾಡಿದ್ದಾರೆ.
Advertisement
View this post on Instagram
Advertisement
ಪತಿ ಹಾಗೂ ಮಗಳ ಜೊತೆಗೆ ನಟಿಯ ಸಿಂಪಲ್ ಬರ್ತ್ಡೇ ಸೆಲೆಬ್ರೇಶನ್
ನಟಿ ಶ್ವೇತಾ ಶ್ರೀವಾತ್ಸವ್ (Shwetha Shrivatsav)ಅವರಿಗೂ ಕೂಡ ಸೆಪ್ಟೆಂಬರ್ 4 ರಂದು ಹುಟ್ಟು ಹಬ್ಬದ ಸಂಭ್ರಮವಾಗಿತ್ತು. ಹೀಗಾಗಿ ಸಿಂಪಲ್ಲಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಈ ಸಿಂಪಲ್ ಬೆಡಗಿ ಬರ್ತ್ ಡೇ ಫೋಟೋ ಮತ್ತು ವಿಡೀಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಂದಿ ಹಿಲ್ಸ್ (Nandi Hills) ಬಳಿ ಇರುವ ಲಕ್ಸುರಿ ಬಾಟಿಕ್ ರೆಸಾರ್ಟ್ (Luxury Boutique Resort) ನಲ್ಲಿ ಪತಿ ಹಾಗೂಮಗಳೊಂದಿಗೆ ನಟಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ನಟಿ ಶ್ವೇತಾಗೆ ಪತಿ ಅಮಿತ್ ಶ್ರೀವಾತ್ಸವ್ ಸರ್ಪ್ರೈಸ್ ಕೇಕ್ (Surprise cake) ಅರೇಂಜ್ ಮೆಂಟ್ ಮಾಡಿದ್ದರು. ಅದಲ್ಲದೇ ಈ ಕೇಕ್ ಮೇಲೆ ಸೂಪರ್ ಸ್ಟಾರ್ ಎಂದು ಬರೆದಿದ್ದದ್ದು ವಿಶೇಷ. ಕೇಕ್ ಕತ್ತರಿಸಿ ಪತಿ ಹಾಗೂ ಮಗಳಿಗೆ ತಿನ್ನಿಸಿ ಬರ್ತ್ಡೇ ಸೆಲೆಬ್ರೇಶನ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.