ಸ್ಯಾಂಡಲ್ವುಡ್ ನಟ ನಿಖಿಲ್ ಕುಮಾರಸ್ವಾಮಿ (Nikhil Kumaraswami) ಯವರು ನಟ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡವರು. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ನಿಖಿಲ್ ಕುಮಾರಸ್ವಾಮಿಯವರು ಪ್ರತಿಯೊಂದು ಹಬ್ಬವನ್ನು ಫ್ಯಾಮಿಲಿ (Family) ಯ ಜೊತೆಗೆ ಆಚರಿಸಿಕೊಳ್ಳುತ್ತಾರೆ. ಹೌದು, ನಟ ನಿಖಿಲ್ ಕುಮಾರಸ್ವಾಮಿಯವರು ತಮ್ಮ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬ (Shree Krishana Janmastami) ವನ್ನು ಆಚರಿಸಿದ್ದಾರೆ.
ಬಾಲಗೋಪಾಲನಾಗಿ ಮನಸ್ಸು ಗೆದ್ದ ನಿಖಿಲ್ ಪುತ್ರ ಅವ್ಯಾನ್ ದೇವ್
Advertisement
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮಗ ಅವ್ಯಾನ್ ದೇವ್ (Avyan Dev) ಗೆ ಕೃಷ್ಣನ ವೇಷ ತೊಟ್ಟಿದ್ದಾರೆ. ಬಾಲಗೋಪಾಲ (Bala Gopala) ನಂತೆ ಕಾಣುವ ಮುದ್ದು ಕಂದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬದ ಜೊತೆಗೆ ಮಗನನ್ನು ಕೂರಿಸಿ ಫೋಟೋ ತೆಗೆದಿದ್ದು, ಈ ಫೋಟೋ ವಿಡಿಯೋವನ್ನು ನಿಖಿಲ್ ಕುಮಾರಸ್ವಾಮಿ ಶೇರ್ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಹಂಚಿಕೊಂಡಿರುವ ಫೋಟೋಗಳಲ್ಲಿ ಮುದ್ದು ಕಂದ ಅವ್ಯಾನ್ ದೇವ್ ಬೆಣ್ಣೆ ಕಳ್ಳನಂತೆ ಕಾಣಿಸಿಕೊಂಡಿದ್ದು, ಈ ಫೋಟೋಗೆ ಲೈಕ್ಸ್ ಗಳು ಬಂದಿವೆ.
Advertisement
View this post on Instagram
Advertisement
ಫ್ಯಾನ್ಸ್ ಗಳಿಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ ನಿಖಿಲ್
ಮಗನ ಬಾಲ ಕೃಷ್ಣ (Bala Krishana) ನ ಫೋಟೋಗಳ ಜೊತೆಗೆ ನಿಖಿಲ್ ಕುಮಾರಸ್ವಾಮಿಯವರು, ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ. “ಕೃಷ್ಣಂ ವಂದೇ ಜಗದ್ಗುರುಂ. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಆ ಕೃಷ್ಣ ಪರಮಾತ್ಮನು ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ನಟನಿಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.
View this post on Instagram