ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್ (Social Media Star) ಮತ್ತು ನಟಿ ಅಂಜಲಿ ಅರೋರಾ (Anjali Arora) ಎಲ್ಲರಿಗೂ ಕೂಡ ಚಿರಪರಿಚಿತ. ಕಚ್ಚಾ ಬಾದಾಮ್ (Kaccha Badam) ಹಾಡಿಗೆ ಸ್ಟೆಪ್ ಹಾಕಿ ಸೆನ್ಸಾಷನ್ ಸೃಷ್ಟಿಸಿದ್ದ ಅಂಜಲಿ ಆರೋರರವರು ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಆ ಹಾಡಿನಿಂದಲೇ ದೊಡ್ಡ ಮಟ್ಟದ ಸೆನ್ಸೇಷನ್ ಸಹ ಸೃಷ್ಟಿಸಿದ್ದ ಈಕೆಯು ಹಿಂದಿ ಲಾಕ್ ಅಪ್ ಸೀಸನ್ 1 ರಲ್ಲಿ ಭಾಗವಹಿಸಿ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು. ಆದರೆ ಇದೀಗ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ.
ಹಿಂದಿ ಹಾಡಿಗೆ ಸ್ಟೆಪ್ ಹಾಕಿದ ನಟಿ ಅಂಜಲಿ ಅರೋರಾ
Advertisement
ಹಿಂದಿ ಕಿರುತೆರೆಯಲ್ಲಿ ನಟಿ ಅಂಜಲಿ ಅರೋರಾ (Anjali Arora) ಸಕ್ರಿಯರಾಗಿದ್ದು, ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಟ್ರೆಂಡಿಂಗ್ ಹಾಡುಗಳಿಗೆ ಸ್ಟೆಪ್ ಹಾಕುವ ಅಂಜಲಿಯವರು ರೀಲ್ಸ್ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ನಟಿ ಅಂಜಲಿ ಅರೋರ ಹಿಂದಿ ಹಾಡಿಗೆ ಡಾನ್ಸ್ ಮಾಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡು ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ. ನೀಲಿ ಹಾಗೂ ಕಪ್ಪು ಬಣ್ಣದ ಉಡುಗೆ ತೊಟ್ಟು ಹಾಟ್ ಆಗಿ ಸ್ಟೆಪ್ ಹಾಕಿದ್ದು, ನಟಿಯ ಡಾನ್ಸ್ ಪಡ್ಡೆ ಹೈಕಳ ಎದೆಯಲ್ಲಿ ಚಿಟ್ಟೆ ಬಿಟ್ಟಂತೆ ಮಾಡಿದೆ. ಅಂಜಲಿ ಅರೋರರವರು ಡಾನ್ಸ್ ಮಾಡುತ್ತಾ ತನ್ನ ಮೈ ಮಾಟವನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಈ ವಿಡಿಯೋವೊಂದನ್ನು ಶೇರ್ ಮಾಡುತ್ತಿದಂತೆ ನೆಟ್ಟಿಗರಲ್ಲಿ ಕೆಲವರು ಮೆಚ್ಚಿ ಕೊಂಡರೆ, ಇನ್ನು ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಎರಡೂವರೆ ಲಕ್ಷಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.
Advertisement
View this post on Instagram
Advertisement
ತನ್ನ ಜೀವನದ ಸೂಪರ್ ಹೀರೋ ತಂದೆಗೆ ಬೆಸ್ಟ್ ಗಿಫ್ಟ್ ನೀಡಿದ ಅಂಜಲಿ ಅರೋರ
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಟಿ ಅಂಜಲಿ ಅರೋರರವರು ತಂದೆಗೆ ಹೊಚ್ಚಹೊಸ ಕಾರು ಗಿಫ್ಟ್ ನೀಡಿದ್ದಾರೆ. ನಟಿಯ ನಿಜ ಜೀವನದ ಸೂಪರ್ ಹೀರೋವಾಗಿರುವ ತಂದೆಗೆ ಮಾರುತಿ ಸುಜುಕಿ ಬಲೆನೊ (Maruthi Suzuki Baleno) ಕಾರನ್ನು ಸರ್ಪೈಸ್ ಗಿಫ್ಟ್ ನೀಡಿದ್ದಾರೆ. ನಟಿ ತಂದೆಗೆ ಕಾರ್ ಗಿಫ್ಟ್ ನೀಡಿರುವ ಕಾರಿನ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ. ನಟಿ ಅಂಜಲಿ ಅರೋರಾ ಅವರು Instagram ನಲ್ಲಿ ಗುರುಗ್ರಾಮ್‌ನಲ್ಲಿರುವ ಮಾರುತಿ ಸುಜುಕಿ NEXA ಶೋರೂಮ್‌ನಿಂದ ಕಾರು ಖರೀದಿಸಿದ್ದು ಉಡುಗೊರೆ ನೀಡಿರುವ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ತಂದೆಗೆ ಮಗಳ ಉಡುಗೊರೆ”, “ಮನೆಗೆ ಸ್ವಾಗತ” ಎಂಬ ಹೃದಯಸ್ಪರ್ಶಿ ಶೀರ್ಷಕೆಯನ್ನು ನೀಡಿದ್ದಾರೆ. ಈ ಪೋಸ್ಟ್ ಗೆ ಮೆಚ್ಚುಗೆಗಳು ವ್ಯಕ್ತವಾಗಿವೆ.