ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಪ್ರತಿಯೊಂದು ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅದಲ್ಲದೇ ನಟಿಯರು ಫೋಟೋ ಶೂಟ್ (Photoshoot) ಮಾಡಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಾರೆ. ಈ ಬಾರಿಯ ಕೃಷ್ಣ ಜನ್ಮಾಷ್ಠಮಿ ಹಬ್ಬ (Krishana Janmastami Festival) ವನ್ನು ಸೆಲೆಬ್ರಿಟಿಗಳು ಅದ್ದೂರಿಯಾಗಿ ಆಚರಿಸಿದ್ದು, ತಮ್ಮ ಮಕ್ಕಳ ಜೊತೆಗೆ ಫೋಟೋ ಶೂಟ್ ಮಾಡಿಸಿದ್ದಾರೆ. ಸ್ಯಾಂಡಲ್ ವುಡ್ ನಟಿ ಪ್ರಗತಿ ಶೆಟ್ಟಿ (Pragathi Shetty) ಯವರ ಮನೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಹಬ್ಬದ ಸಂಭ್ರಮವು ಜೋರಾಗಿದೆ.
View this post on Instagram
Advertisement
Advertisement
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
Advertisement
ನಟ ರಿಷಬ್ ಶೆಟ್ಟಿ ಮಡದಿ ಪ್ರಗತಿ ಶೆಟ್ಟಿ ಅವರು ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಪುಟ್ಟ ಮಕ್ಕಳೊಂದಿಗೆ ವಿಶೇಷವಾದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮಕ್ಕಳಿಗೆ ರಾಧೆ ಕೃಷ್ಣ ವೇಷ ಹಾಕಿದ್ದು, ಯಶೋಧೆಯಾಗಿ ಪ್ರಗತಿ ಶೆಟ್ಟಿಯಾಗಿ ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡು, “ನಮ್ಮ ಮನೆಯ ಮುದ್ದು ರಾಧಾ ಕೃಷ್ಣರಿಂದ ಎಲ್ಲರಿಗೂ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ರಣ್ವಿತ್ (Ranvith)ಬಾಲಕೃಷ್ಣನಾಗಿ ಕೊಳಲನ್ನು ಹಿಡಿದುಕೊಂಡಿದ್ದರೆ, ಯಶೋದೆಯಾದ ಪ್ರಗತಿ ಶೆಟ್ಟಿ ಗಮನ ಸೆಳೆದಿದ್ದಾರೆ..ಇತ್ತ ಮಗಳು ರಾಧ್ಯಾ (Radhya) ರಾಧಾಳಾಗಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ. ಪ್ರಗತಿ ಶೆಟ್ಟಿ ಹಾಗೂ ಇಬ್ಬರೂ ಮಕ್ಕಳು ವಿವಿಧ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಶೂಟ್ಗೆ 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
View this post on Instagram